ಪಾಶ್ಚಿಮಾತ್ಯ ರಾಷ್ಟ್ರಗಳ ಮನವಿಯ ಹೊರತಾಗಿಯೂ ನಿರೀಕ್ಷೆಯಂತೆ ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣವು ಪ್ರಾರಂಭವಾಗಿದೆ. ಮಾಸ್ಕೋದ ಮಹಾನ್ ಕ್ರಾಂತಿಯ ಬಳಿಕ ಉಕ್ರೇನ್‌ನಂತಹ ರಾಷ್ಟ್ರವು ಯುಎಸ್ಎಸ್ಆರ್‌ನಿಂದ ಬೇರ್ಪಟ್ಟಿತು. ಇದು ಕಮ್ಯುನಿಸಂನ ಮಹಾ ಪತನಕ್ಕೂ ಕಾರಣವಾಯಿತು.
ಬೋರಿಸ್ ಯೆಲ್ಸಿನ್ ಆಳ್ವಿಕೆಯು ಪ್ರಾರಂಭವಾದ ಮೇಲೆ ಯುನೈಟೆಡ್ ಸೋವಿಯತ್ ಸಮಾಜವಾದಿ ಗಣರಾಜ್ಯದ ಭಾಗವಾಗಿದ್ದ ರಾಷ್ಟ್ರಗಳೂ ವಿಭಜನೆಯಾದವು. ಉಕ್ರೇನ್ ಜೊತೆಗೆ ಬೆಲಾರಸ್, ಕ್ರೈಮಿಯಾ ಮತ್ತು ಜಾರ್ಜಿಯಾ ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿಕೊಂಡವು.
ಯುಎಸ್ಎಸ್ಆರ್‌ನ ಆಹಾರದ ಬುಟ್ಟಿ ಎಂದೇ ಪರಿಗಣಿಸಲಾಗಿದ್ದ ಉಕ್ರೇನ್ ದೊಡ್ಡ ರಾಷ್ಟ್ರಗಳಲ್ಲಿ ಒಂದಾಗಿದೆ. ಆಗಿನ ಯುಎಸ್‌ಎಸ್‌ಆರ್‌ನ ತಾಂತ್ರಿಕ ಹೂಡಿಕೆಯ ಬೆಂಬಲದೊಂದಿಗೆ ಉಕ್ರೇನ್ ಒಂದು ಪ್ರಮುಖ ರಾಷ್ಟ್ರವಾಯಿತು ಮತ್ತು 1997ರಲ್ಲಿ ನ್ಯಾಟೋ (NATO)ದ ಮಿತ್ರ ರಾಷ್ಟ್ರವಾಯಿತು.
ರಷ್ಯನ್ನರು ಈಗ ಅದನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಸಂಖ್ಯಾಬಲವನ್ನು ನೋಡಿದರೆ ಉಕ್ರೇನ್ ಪ್ರಬಲ ರಷ್ಯಾವನ್ನು ಎದುರಿಸಿ ನಿಲ್ಲಲು, ಗೆಲ್ಲಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ರಷ್ಯಾ ಮತ್ತು ಉಕ್ರೇನ್ ದೇಶಗಳ ರಕ್ಷಣಾ ಪಡೆಗಳ ಬಲವನ್ನು ಒಮ್ಮೆ ಪರಿಶೀಲಿಸೋಣ. ಹೋಲಿಕೆಯ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
ಉಕ್ರೇನ್ ರಷ್ಯಾ
ಸೈನಿಕ ಶಕ್ತಿ- 1.25 ಲಕ್ಷ, 2.8 ಲಕ್ಷ
ಯುದ್ಧ ಟ್ಯಾಂಕ್‌ಗಳು- 2,119 5,934
ಶಸ್ತ್ರಸಜ್ಜಿತ ಯುದ್ಧ ವಾಹನಗಳು -2,870 19,783
ವಾಯುಪಡೆ:
ಸೈನಿಕ ಶಕ್ತಿ- 35,000 1.65 ಲಕ್ಷ
ದಾಳಿ ಫೈಟರ್‌ಗಳು- 146 1,328
ದಾಳಿ ಹೆಲಿಕಾಪ್ಟರ್‌ಗಳು- 42 478
ನೌಕಾಪಡೆ:
ಸೈನಿಕರು -15,000 1.50 ಲಕ್ಷ
ಯುದ್ಧ ಹಡಗುಗಳು- 2 74
ಜಲಾಂತರ್ಗಾಮಿಗಳು- 0 51
ಗಡಿಗಳಲ್ಲಿ ಸದ್ಯ ನಿಯೋಜಿಸಿರುವ ಸೇನಾಶಕ್ತಿಯನ್ನು ಪರಿಗಣಿಸಿದರೂ ಉಕ್ರೇನ್‌ಗೆ ಹೋಲಿಸಿದರೆ ರಷ್ಯಾ ಈ ಯುದ್ಧಕ್ಕೆ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಂಡಿದ್ದು, ಸ್ಪಷ್ಟವಾಗಿ ಮೇಲುಗೈ ಸಾಧಿಸುತ್ತಿದೆ. ಅಂಕಿ-ಅಂಶಗಳೇ ಅದನ್ನು ಸಾರುತ್ತವೆ.
94,000 ಸೈನಿಕರು
1,200 ಟ್ಯಾಂಕ್‌ಗಳು
330 ವಿಮಾನಗಳು
75 ಯುದ್ಧನೌಕೆಗಳು ಮತ್ತು
6 ಜಲಾಂತರ್ಗಾಮಿ ನೌಕೆಗಳು
ತುಲನಾತ್ಮಕವಾಗಿ ಉಕ್ರೇನ್‌ನ ರಕ್ಷಣಾ ವೆಚ್ಚವು 2008ರಿಂದ 2015 ರ ನಡುವೆ 5 ಶತಕೋಟಿ ಡಾಲರ್‌ಗಳಿಗಿಂತ ಕಡಿಮೆಯಾಗಿದೆ. ರಷ್ಯಾ ರಕ್ಷಣೆಗಾಗಿ 30 ಶತಕೋಟಿ ಡಾಲರ್‌ಗಿಂತ ಹೆಚ್ಚು ಖರ್ಚು ಮಾಡುತ್ತಿದೆ. ಒಂದು ಸಲವೂ ಇದು 35 ಶತಕೋಟಿ ಡಾಲರ್‌ಗಿಂತ ಕಡಿಮೆಯಾಗಿಲ್ಲ. 2010ರಲ್ಲಿ, ಇದು 50 ಶತಕೋಟಿ ಡಾಲರ್‌ಗಳನ್ನು ದಾಟಿತು ಮತ್ತು 2020ರಿಂದ ಈಚೆಗೆ 40 ಶತಕೋಟಿ ಡಾಲರ್‌ಗಳ ಮಟ್ಟದಲ್ಲಿ ಉಳಿದಿದೆ.
-ಗಿರೀಶ್ ಲಿಂಗಣ್ಣ, ಕೈಗಾರಿಕೋದ್ಯಮಿ ಹಾಗೂ ರಕ್ಷಣಾ ವಿಶ್ಲೇಷಕರು