ವನ್ಸದಾ(ಗುಜರಾತ್): ತಾಕತ್ತಿದ್ದರೆ ರಾಹುಲ್ ಗಾಂಧಿ ಗುಜರಾತ್ನಿಂದ ಸ್ಪರ್ಧೆ ಮಾಡಲಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸವಾಲು ಹಾಕಿದ್ದಾರೆ.
ಗುಜರಾತ್ನಲ್ಲಿ ಸದ್ಯ ಮುನ್ಸಿಪಾಲ್ ಚುನಾವಣೆ ನಡೆಯುತ್ತಿದ್ದು, ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿರುವ ಕೇಂದ್ರ ಸಚಿವೆ ರಾಗಾ ವಿರುದ್ಧ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಗುಜರಾತ್ನ ಸಣ್ಣ ಚಹಾ ವ್ಯಾಪಾರಿಯಿಂದ ಹಣ ವಸೂಲಿ ಮಾಡಲಿ ಎಂದಿರುವ ಅವರು, ಗುಜರಾತ್ನ ಹಾಗೂ ಇಲ್ಲಿನ ಜನರ ಬಗ್ಗೆ ಕಾಂಗ್ರೆಸ್ಗೆ ದ್ವೇಷ ಮತ್ತು ಪೂರ್ವಗ್ರಹ ಪೀಡಿತ ಭಾವನೆ ಇದೆ ಎಂದಿದ್ದಾರೆ.
ಈ ಹಿಂದೆ ಗುಜರಾತ್ನಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ನಿರ್ಮಾಣ ಮಾಡಲು ವಿರೋಧ ವ್ಯಕ್ತಪಡಿಸಿತ್ತು ಎಂದು ಆರೋಪ ಮಾಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಅಸ್ಸೋಂ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಚಹಾ ತೋಟದ ಕಾರ್ಮಿಕರ ಕೂಲಿ ಹೆಚ್ಚಿಸಲು ಕ್ರಮ ಕೈಗೊಳ್ಳಲಿದ್ದು, ಗುಜರಾತ್ ಮೂಲದ ಚಹಾ ತೋಟದ ಮಾಲೀಕರಿಂದ ಅದನ್ನು ಭರಿಸುವಂತೆ ಮಾಡಲಾಗುವುದು ಎಂದಿದ್ದರು.