ETV Bharat / bharat

ಗೇಟ್‌ವೇ ಆಫ್‌ ಇಂಡಿಯಾದಿಂದ ಎಲಿಫೆಂಟಾ..: ಸಮುದ್ರದ ಅಲೆಗಳ ವಿರುದ್ಧ 16 ಕಿಮೀ ಈಜಿದ IPS ಅಧಿಕಾರಿ - Swimming from Gateway of India to Elephanta Caves

ಮುಂಬೈನ ಐಪಿಎಸ್​ ಅಧಿಕಾರಿಯೊಬ್ಬರು ದಕ್ಷಿಣ ಮುಂಬೈನ ಗೇಟ್‌ವೇ ಆಫ್ ಇಂಡಿಯಾದಿಂದ ಪ್ರಸಿದ್ಧ ಎಲಿಫೆಂಟಾ ಗುಹೆಗಳವರೆಗಿನ 16 ಕಿ.ಮೀ ದೂರವನ್ನು ಐದೂವರೆ ಗಂಟೆಗಳಲ್ಲಿ ಈಜಿದ್ದಾರೆ.

ಗೇಟ್‌ವೇ ಆಫ್ ಇಂಡಿಯಾದಿಂದ ಈಜು
ಗೇಟ್‌ವೇ ಆಫ್ ಇಂಡಿಯಾದಿಂದ ಈಜು
author img

By

Published : Mar 28, 2023, 9:11 AM IST

ಮುಂಬೈ: ದಕ್ಷಿಣ ಮುಂಬೈನ ಗೇಟ್‌ವೇ ಆಫ್ ಇಂಡಿಯಾದಿಂದ ಪ್ರಸಿದ್ಧ ಎಲಿಫೆಂಟಾ ಗುಹೆಗಳವರೆಗಿನ 16 ಕಿ.ಮೀ ದೂರವನ್ನು ಐದೂವರೆ ಗಂಟೆಗಳಲ್ಲಿ ಅರಬ್ಬಿ ಸಮುದ್ರದ ಅಲೆಗಳ ವಿರುದ್ಧ ಈಜಿದ್ದಾಗಿ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಹಿರಿಯ ಅಧಿಕಾರಿ ಕೃಷ್ಣ ಪ್ರಕಾಶ್ ಹೇಳಿದ್ದಾರೆ. ಈ ಸಾಹಸ ಮಾಡಿದ ವಿಶ್ವದ ಮೊದಲ ವ್ಯಕ್ತಿ ನಾನು ಎಂದು ತಿಳಿಸಿದ್ದಾರೆ. ಈಜು ಸಂಸ್ಥೆ ಯಾವುದೇ ದೃಢೀಕರಣ ನೀಡಿಲ್ಲ.

ಮುಂಬೈನಲ್ಲಿ ವಿಐಪಿ ಭದ್ರತಾ ವಿಭಾಗದಲ್ಲಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ಕೆಲಸ ಮಾಡುತ್ತಿರುವ ಐಪಿಎಸ್ ಅಧಿಕಾರಿ ಕೃಷ್ಣ ಪ್ರಕಾಶ್​ ಅವರು ಭಾನುವಾರ ಸಮುದ್ರ ಈಜು ಸಾಹಸವನ್ನು ಪೂರ್ಣಗೊಳಿಸಿದ್ದಾಗಿ ತಿಳಿಸಿದ್ದಾರೆ. ಇದನ್ನು ನಾನು "ಮುಳುಗುವಿಕೆ ತಡೆಯ ಜಾಗೃತಿ"ಗಾಗಿ ಮಾಡಿದ್ದಾಗಿ ಹೇಳಿದ್ದಾರೆ. ಇದರ ವಿಡಿಯೋವನ್ನೂ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅಧಿಕಾರಿಗಳು, ಸ್ನೇಹಿತರು ಇದನ್ನು ಮರು ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

  • Today I completed the daunting task of swimming from Gateway of India to Elephanta caves and became the first person in the world to do so. Contrary to the popular swimming route of Elephanta caves to Gateway of India whereas swimmers ride the waves of the the high tides towards… pic.twitter.com/8IIX4O5Xho

    — Krishna Prakash (@Krishnapips) March 26, 2023 " class="align-text-top noRightClick twitterSection" data=" ">

ಭಾನುವಾರದಂದು ನಾನು ಗೇಟ್‌ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ಗುಹೆಗಳವರೆಗೆ 16 ಕಿಮೀ ವ್ಯಾಪ್ತಿಯನ್ನು ಈಜುವ ಮೂಲಕ ಕ್ರಮಿಸಿದೆ. ಹಾಗೆ ಮಾಡಿದ ವಿಶ್ವದ ಮೊದಲ ವ್ಯಕ್ತಿ ನಾನು. ಎಲಿಫೆಂಟಾ ಗುಹೆಗಳಿಂದ ಈಜುಗಾರರು ಸ್ಪರ್ಧೆ ಆರಂಭಿಸುತ್ತಾರೆ. ಇದು ಇಲ್ಲಿ ಜನಪ್ರಿಯವೂ ಹೌದು. ಆದರೆ, ಈ ಮಾರ್ಗದ ವಿರುದ್ಧವಾಗಿ ಗೇಟ್‌ವೇ ಆಫ್ ಇಂಡಿಯಾದಿಂದ ಈಜಿದ್ದೇನೆ. ಗೇಟ್‌ವೇ ಕಡೆಗೆ ಸಮುದ್ರದ ಅಲೆಗಳು ಹೆಚ್ಚಿನ ಪ್ರಮಾಣದಲ್ಲಿ ಏಳುತ್ತವೆ. ಅಲೆಗಳ ವಿರುದ್ಧ ಈಜಿದ್ದೇನೆ. 5 ಗಂಟೆ 26 ನಿಮಿಷಗಳಲ್ಲಿ 16.20 ಕಿಮೀ ದೂರವನ್ನು ಈಜಿದ್ದೇನೆ ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

"ನನ್ನ ಸಾಹಸವು ಈಜುಪಟುಗಳಿಗೆ 10k ಓಪನ್ ವಾಟರ್ ಈಜು ಸ್ಪರ್ಧೆಯಲ್ಲಿ ಒಲಿಂಪಿಕ್ ಪದಕ ಗೆಲ್ಲಲು ಯುವ ಭಾರತೀಯರಿಗೆ ಸ್ಫೂರ್ತಿ ನೀಡುತ್ತದೆ" ಎಂದು ಇದೇ ವೇಳೆ ಹೇಳಿದರು. ಕೃಷ್ಣ ಪ್ರಕಾಶ್​ ಅವರು ಈ ಹಿಂದೆ ಐರನ್‌ಮ್ಯಾನ್ ಮತ್ತು ಅಲ್ಟ್ರಾಮ್ಯಾನ್ ಟ್ರಯಥ್ಲಾನ್ ಸ್ಪರ್ಧೆಗಳನ್ನು ಪೂರ್ಣಗೊಳಿಸಿದ್ದರು.

ಈಜು ಸಂಸ್ಥೆಗೆ ಮಾಹಿತಿ ಇಲ್ಲ: ಇನ್ನು, ಐಪಿಎಸ್​ ಅಧಿಕಾರಿಯ ಈಜು ಸಾಹಸದ ಬಗ್ಗೆ ಸ್ಥಳೀಯ ಈಜು ಸಂಸ್ಥೆಗೆ ಯಾವುದೇ ಮಾಹಿತಿ ಇಲ್ಲ. ಮಹಾರಾಷ್ಟ್ರ ರಾಜ್ಯ ಅಮೆಚೂರ್ ಅಕ್ವಾಟಿಕ್ ಅಸೋಸಿಯೇಷನ್‌ನ ಸಿಬ್ಬಂದಿ ಮುಂಬೈನ ಐಪಿಎಸ್​ ಅಧಿಕಾರಿ ಕೃಷ್ಣ ಪ್ರಕಾಶ್ ಅವರ ಸಾಧನೆಯ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದೆ.

"ಇದು ಅವರ (ಐಪಿಎಸ್ ಅಧಿಕಾರಿ) ಏಕವ್ಯಕ್ತಿ ಪ್ರಯತ್ನವಾಗಿದೆ. ಅವರು ಈಜು ಸಾಹಸವನ್ನು ಪ್ರಾರಂಭಿಸುವ ಮೊದಲು ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಅವರ ಸಾಹಸದ ಬಗ್ಗೆ ಮಾಹಿತಿ ಲಭ್ಯವಿಲ್ಲ" ಎಂದು ಸಂಸ್ಥೆ ಹೇಳಿದೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು 3 ಕಿಮೀ ಈಜಿದ: ಆಟೋಗೆ ಡಿಕ್ಕಿ ಹೊಡೆದು ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನವಾಗಿ ಆರೋಪಿಯೊಬ್ಬ 3 ಕಿಮೀ ದೂರ ಕಾಲುವೆಯಲ್ಲಿ ಈಜಿದ ಘಟನೆ ಈಚೆಗೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿತ್ತು. ಪೊಲೀಸರು ಹಿಂಬಾಲಿಸುತ್ತಿರುವುದನ್ನು ಕಂಡು ಭಯಗೊಂಡ ಟಿಪ್ಪರ್ ಲಾರಿ ಚಾಲಕನೊಬ್ಬ 3 ಕಿ.ಮೀ.ಗೂ ಹೆಚ್ಚು ದೂರ ಕಾಲುವೆಯಲ್ಲಿ ಈಜಿ ಪರಾರಿಯಾಗಲು ಯತ್ನಿಸಿದ್ದಾನೆ. 48 ಮೀಟರ್ ಅಗಲ, 2 ಮೀಟರ್ ಆಳದ, 2000 ಕ್ಯೂಸೆಕ್ ನೀರು ಹರಿಯುತ್ತಿರುವ ಕಾಲುವೆಯಲ್ಲಿ ಈತ ಈಜಿ ಅಚ್ಚರಿ ಮೂಡಿಸಿದ್ದ. ಕೊನೆಗೆ ಈಜಿ ಸುಸ್ತಾಗಿ ಮರದ ಕೊಂಬೆಯ ಸಹಾಯ ಪಡೆದಿದ್ದ ಈತನನ್ನು ಪೊಲೀಸರು ರಕ್ಷಿಸಿದ್ದರು.

ಇದನ್ನೂ ಓದಿ: ದೇವಸ್ಥಾನ ಪ್ರವೇಶಿಸಲು ಮಹಿಳೆಯರಂತೆ ವೇಷ ಧರಿಸುವ ಪುರುಷರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.