ಚಿತ್ತೂರು (ಆಂಧ್ರಪ್ರದೇಶ): ಯಾವಾಗಲೂ ಕರ್ತವ್ಯದಲ್ಲೇ ಮುಳುಗಿರುತ್ತಿದ್ದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ತಮ್ಮ ಕೆಲಸಕ್ಕೆ ಕೊಂಚ ವಿರಾಮ ನೀಡಿ ರೈತರಾಗಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಗದ್ದೆಯಲ್ಲಿ ಭತ್ತದ ಸಸಿ ನೆಟ್ಟು, ಅಪರೂಪಕ್ಕೊಮ್ಮೆ ಅಧಿಕಾರಿಗಳು ರೈತರೊಂದಿಗೆ ಬೆರೆತಿದ್ದಾರೆ. ಇವರಲ್ಲಿ ಒಬ್ಬ ಅಧಿಕಾರಿ ವಿಕಲ ಚೇತನರಾಗಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಏಲೂರು ದುರಂತ: ವಿಚಿತ್ರ ಕಾಯಿಲೆಗೆ ಮತ್ತಿಬ್ಬರು ಬಲಿ, ಅಸ್ವಸ್ಥರ ಸಂಖ್ಯೆ 585ಕ್ಕೆ ಏರಿಕೆ
ಚಿತ್ತೂರು ಜಿಲ್ಲಾಧಿಕಾರಿ ಭರತ್ ಗುಪ್ತಾ, ತಿರುಪತಿ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಗಿರಿಶಾ, ಸ್ಪೆಷಲ್ ಎನ್ಫೋರ್ಸ್ಮೆಂಟ್ ಬ್ಯೂರೋದ ಎಎಸ್ಪಿ ರಿಶಾಂತ್ ರೆಡ್ಡಿ ಭತ್ತ ನಾಟಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.