ETV Bharat / bharat

ಭಾರತದಲ್ಲಿ ಐಫೋನ್ 16 ಉತ್ಪಾದನೆಗೆ ಯೋಜನೆ: ಭೂಮಿಗಾಗಿ ಅರ್ಜಿ ಸಲ್ಲಿಸಿದ ಆ್ಯಪಲ್ ಕಂಪನಿ

author img

By

Published : Dec 21, 2022, 4:06 PM IST

ತನ್ನ ಮೊಬೈಲ್​ ಘಟಕಕ್ಕೆ ಸ್ಥಾಪನೆಗಾಗಿ ಭೂಮಿ ಮಂಜೂರು ಮಾಡುವಂತೆ ಗ್ರೇಟರ್​ ನೋಯ್ಡಾದ ಯಮುನಾ ಪ್ರಾಧಿಕಾರಕ್ಕೆ ಆ್ಯಪಲ್​ ಕಂಪನಿ ಅರ್ಜಿ ಸಲ್ಲಿಸಿದೆ.

iphone-16-to-be-made-in-india-apple-and-3-allied-companies-apply-for-land
ಭಾರತದಲ್ಲಿ ಐಫೋನ್ 16 ಉತ್ಪಾದನೆಗೆ ಯೋಜನೆ: ಭೂಮಿಗಾಗಿ ಅರ್ಜಿ ಸಲ್ಲಿಸಿದ ಆ್ಯಪಲ್ ಕಂಪನಿ!

ನವದೆಹಲಿ: ಟೆಕ್ ದೈತ್ಯ ಕಂಪನಿಯಾದ ಆ್ಯಪಲ್ ಭಾರತದಲ್ಲಿ ಹೊಸ ಐಫೋನ್ 16 ಉತ್ಪಾದನೆಗೆ ಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ಮೂರು ಕಂಪನಿಗಳೊಂದಿಗೆ ಆ್ಯಪಲ್ ಭೂಮಿ ಮಂಜೂರಿಗಾಗಿ ಅರ್ಜಿ ಸಲ್ಲಿಸಿದೆ. ಒಟ್ಟಾರೆ ಸುಮಾರು 23 ಎಕರೆ ಜಾಗದಲ್ಲಿ ಐಫೋನ್​ ಘಟಕ ಸ್ಥಾಪಿಸಲು ಕಂಪನಿಗಳು ಮುಂದಾಗಿದ್ದು, 2,800 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿವೆ.

ಕೊರಿಯಾದಲ್ಲಿ ನಡೆದ ಸಭೆಯಲ್ಲಿ ಆ್ಯಪಲ್ ಮತ್ತು ಇದಕ್ಕೆ ಸಂಬಂಧಿತ ಕಂಪನಿಗಳು ಭಾರತದಲ್ಲಿ ಹೂಡಿಕೆ ಪ್ರಸ್ತಾಪವನ್ನು ಮಾಡಿವೆ. ಗ್ರೇಟರ್​ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ (YEIDA)ಯ ಸೆಕ್ಟರ್ 29ರಲ್ಲಿ 5 ಎಕರೆ ಭೂಮಿಯಲ್ಲಿ ತನ್ನ ಉತ್ಪನ್ನವನ್ನು ತಯಾರಿಸಲು ಇಂಕ್ ತಯಾರಿಕಾ ಕಂಪನಿಯಾದ ಸಿಕೊ ಅಡ್ವಾನ್ಸ್ ಲಿಮಿಟೆಡ್ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದೆ.

ಈ ಕಂಪನಿಯು 850 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಸಾವಿರಾರು ಜನರಿಗೆ ಉದ್ಯೋಗ ನೀಡಲಿದೆ. ಈ ಬಗ್ಗೆ ಯಮುನಾ ಪ್ರಾಧಿಕಾರದ ಸಿಇಒ ಡಾ. ಅರುಣ್ ವೀರ್ ಸಿಂಗ್ ಅವರು ಮಾತನಾಡಿ, ಆ್ಯಪಲ್ ಮತ್ತು ಸಂಬಂಧಿತ ಕಂಪನಿಗಳಿಗೆ ಸೆಕ್ಟರ್ 29ರಲ್ಲಿ ಭೂಮಿಯನ್ನು ಒದಗಿಸಲಾಗುವುದು. ಈ ಭೂಮಿಯು ಲಭ್ಯವಿರುವ ಹಲವು ಸೌಲಭ್ಯಗಳೊಂದಿಗೆ ಸಾಕಷ್ಟು ಅಭಿವೃದ್ಧಿಗೊಂಡಿದೆ ಎಂದು ತಿಳಿಸಿದ್ದಾರೆ.

ಈ ಭೂಮಿಯಲ್ಲಿ ಕಟ್ಟಡ ನಿರ್ಮಾಣದ ನಂತರ ಕಂಪನಿಗಳು ಉತ್ಪಾದನೆಯನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ಈಗಾಗಲೇ ಒಟ್ಟಾರೆ ಮೊತ್ತದ ಶೇ.10ರಷ್ಟು ಹಣವನ್ನು ಕಂಪನಿಗಳು ಠೇವಣಿ ಮಾಡಿವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಭಾರತದತ್ತ ಮೊಬೈಲ್ ಘಟಕ: ಚೀನಾಕ್ಕೆ ಕೋವಿಡ್ ಬಳಿಕ ಆ್ಯಪಲ್ ಕಂಪನಿ ಶಾಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.