ಚಂಢೀಗಡ : ರೈತರ ಪ್ರತಿಭಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ತಕ್ಷಣವೇ ಮಧ್ಯಪ್ರವೇಶಿಸಬೇಕು. ರೈತರನ್ನು ಮಾತುಕತೆಗೆ ಆಹ್ವಾನಿಸಿ ಯಾವುದೇ ಷರತ್ತುಗಳಲ್ಲಿದೆ ಮೂರು ಕೃಷಿ ಕಾನುನುಗಳನ್ನು ರದ್ದುಗೊಳಿಸಬೇಕು ಎಂದು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್ಬಿರ್ ಸಿಂಗ್ ಬಾದಲ್ ಆಗ್ರಹಿಸಿದ್ದಾರೆ.
ಸೋಮವಾರದ ಭಾರತ್ ಬಂದ್ ಕುರಿತಂತೆ ಪ್ರತಿಕ್ರಿಯಿಸಿದ ಅವರು, ರೈತರ ಜೊತೆ ಇಡೀ ದೇಶದ ಜನರು ಬೆಂಬಲವಾಗಿ ನಿಂತಿರುವುದು ಇದರಿಂದ ಸಾಬೀತಾಗಿದೆ. ಈ ಮೂರು ಕೃಷಿ ಕಾನೂನುಗಳ ಹಿಂಪಡೆಯಲು ಪ್ರಧಾನಿ ನರೇಂದ್ರ ಮೋದಿ ವಿಶೇಷ ಅಧಿವೇಶನ ಕರೆಯಬೇಕು ಎಂದಿದ್ದಾರೆ.
ಓದಿ: ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡುತ್ತಿದ್ದಂತೆ ಈ ರೀತಿ ಕಾಲೆಳೆದ ಕ್ಯಾ. ಅಮರೀಂದರ್ ಸಿಂಗ್!