ETV Bharat / bharat

ಮಂದಿರ ನಿರ್ಮಾಣಕ್ಕೆ ನಿವೃತ್ತಿ ಹಣ 27 ಲಕ್ಷ ರೂ ದೇಣಿಗೆ ನೀಡಿದ್ದ ನರ್ಸ್; ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ​ಗೆ ಆಹ್ವಾನ

ನಿವೃತ್ತ ನರ್ಸ್ 82 ವರ್ಷದ​ ಬಾನುಬೆನ್​ ಸೋಲಂಕಿ ಅವರ ಸೇವೆಯನ್ನು ರಾಮ ಮಂದಿರ ಟ್ರಸ್ಟ್​ ಪರಿಗಣಿಸಿ, ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ಕಳುಹಿಸಿದೆ.

Bhanuben Solanki
ಆಹ್ವಾನ ಪತ್ರಿಕೆ ಕೈಯ್ಯಲ್ಲಿ ಹಿಡಿದಿರುವ ಭಾನುಬೆನ್​ ಸೋಲಂಕಿ
author img

By ETV Bharat Karnataka Team

Published : Jan 13, 2024, 11:28 AM IST

ಮೊರ್ಬಿ (ಗುಜರಾತ್​): ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯವಾದ ಶ್ರೀರಾಮ ಮಂದಿರದ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಶ್ರೀ ರಾಮ ಮಂದಿರಕ್ಕಾಗಿ ಹೋರಾಡಿದ ದಿಗ್ಗಜರು, ಕರಸೇವಕರಿಂದ ಹಿಡಿದು ಅಳಿಲು ಸೇವೆ ನೀಡಿದ ಹಲವಾರು ವ್ಯಕ್ತಿಗಳಿಗೆ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುತ್ತಿದೆ. ಇದೀಗ ಜ. 22 ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಮೊರ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ನರ್ಸ್​ 82 ವರ್ಷದ ಭಾನುಬೆನ್​ ಸೋಲಂಕಿ ಅವರನ್ನು ಕೂಡ ಆಹ್ವಾನಿಸಲಾಗಿದೆ.

ಸೋಲಂಕಿ ಅವರಿಗೆ ಆಹ್ವಾನ ಪತ್ರ ನೀಡಿರುವುದಕ್ಕೂ ಒಂದು ಕಾರಣವಿದೆ. ಹೌದು, ಸೋಲಂಕಿ ಹಾಗೂ ಶಾಲಾ ಶಿಕ್ಷಕಿಯಾಗಿದ್ದ ಅವರ ದಿವಂಗತ ಸಹೋದರಿ ತಮ್ಮ ನಿವೃತ್ತಿಯ ನಂತರ ಬಂದಿದ್ದ ಒಟ್ಟು 27 ಲಕ್ಷ ರೂಪಾಯಿ ಹಣವನ್ನು ರಾಮ ಮಂದಿರದ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದರು. ರಾಮ ಮಂದಿರದ ನಿರ್ಮಾಣದಲ್ಲಿ ಹಿರಿಯರಾದ ಸೋಲಂಕಿಯವರ ಸೇವೆಯನ್ನೂ ಗುರುತಿಸಿ, ರಾಮ ಮಂದಿರ ಟ್ರಸ್ಟ್​ ಅವರಿಗೂ ಆಹ್ವಾನ ಪತ್ರಿಕೆಯನ್ನು ತಲುಪಿಸಿದೆ.

ಏತನ್ಮಧ್ಯೆ, 10 ವರ್ಷಗಳ ಹಿಂದೆ ಭಾನುಬೆನ್​ ಸೋಲಂಕಿ ಹಾಗೂ ಅವರ ಸಹೋದರಿ ಅಯೋಧ್ಯೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಟೆಂಟ್​ನಲ್ಲಿ ಶ್ರೀರಾಮನ ಮೂರ್ತಿಯನ್ನು ಇರಿಸಿದ್ದನ್ನು ಕಂಡು ಅವರ ಹೃದಯ ಕಲಕಿತ್ತು. ಅಂತೆಯೇ ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದಷ್ಟು ಸಹಾಯವನ್ನು ನೀಡಲು ನಿರ್ಧರಿಸಿದ್ದರು. ಹಾಗಾಗಿ ನಿವೃತ್ತಿ ನಂತರ ಬಂದಿದ್ದ 27 ಲಕ್ಷ ರೂಪಾಯಿ ಹಣವನ್ನು ಮಂದಿರ ನಿರ್ಮಾಣಕ್ಕೆಂದು ದೇಣಿಗೆ ನೀಡಿದ್ದರು. ಸೋಲಂಕಿ ಅವರ ಸಹಾಯವನ್ನು ರಾಮ ಮಂದಿರ ಟ್ರಸ್ಟ್​ ಗುರುತಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ.

ಅಯೋಧ್ಯೆಯಿಂದ ಆಹ್ವಾನ ಪತ್ರಿಕೆ ಕೈಸೇರಿರುವ ಬಗ್ಗೆ ಅತೀವ ಸಂತೋಷ ವ್ಯಕ್ತಪಡಿಸಿರುವ ಸೋಲಂಕಿ ಅವರು ಆಹ್ವಾನವನ್ನು ಅದೃಷ್ಟ ಹಾಗೂ ಆಶೀರ್ವಾದ ಎಂದು ಪರಿಗಣಿಸಿದ್ದಾರೆ. "10 ವರ್ಷಗಳ ಹಿಂದೆ ನಾನು ಅಯೋಧ್ಯೆಗೆ ಭೇಟಿ ನೀಡಿದ ಸಮಯದಲ್ಲಿ ಭಗವಾನ್​ ಶ್ರೀ ರಾಮ ಟೆಂಟ್​​ನಲ್ಲಿ ಕುಳಿತಿರುವುದನ್ನು ನೋಡಿದ್ದೆ. ಅದು ನನ್ನನ್ನು ಭಾವುಕಳನ್ನಾಗಿಸಿತ್ತು. ಆದ್ದರಿಂದ ಆಗ ನನ್ನ ಬಳಿ ಇದ್ದ ಹಣವನ್ನು ದಾನ ಮಾಡಿದ್ದೆ. ಅದನ್ನು ನೆನಪಿಸಿಕೊಂಡು ಇದೀಗ ಟ್ರಸ್ಟ್​​ನವರು ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದು ನನ್ನ ಅದೃಷ್ಟ ಕ್ಷಣ" ಎಂದು ಸೋಲಂಕಿ ಹೇಳಿದ್ದಾರೆ.

ಇದುವರೆಗೆ ಮೊರ್ಬಿಯಿಂದ ಶ್ರೀ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಇಬ್ಬರನ್ನು ಮಾತ್ರ ಆಹ್ವಾನಿಸಲಾಗಿದೆ. ಒಬ್ಬರು ಆರ್​ಎಸ್​ಎಸ್​ ಪಶ್ಚಿಮ ವಲಯ ಸರಸಂದ್​ನ ಆಡಳಿತಾಧಿಕಾರಿ ಡಾ.ಜಯಂತಿ ರಿಷಿಯಾ ಹಾಗೂ ಎರಡನೆಯವರು ಭಾನುಬೆನ್​ ಸೋಲಂಕಿಯವರು.

ಇದನ್ನೂ ಓದಿ: ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ನಟ ನಿಖಿಲ್ ಕುಮಾರಸ್ವಾಮಿಗೆ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.