ಕೋಟಾ(ರಾಜಸ್ಥಾನ): ಜೆಇಇ ಮೇನ್ 2021ರ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸೋಮವಾರ ಬಿಡುಗಡೆ ಮಾಡಿದೆ. ಇದರಲ್ಲಿ ಶೇ.100 ಅಂಕ ಪಡೆದ ಜಾರ್ಖಂಡ್‌ನ ಸಾಕೇತ್ ಝಾ ಅವರನ್ನು ರಾಜಸ್ಥಾನ ಐಐಟಿ ಟಾಪರ್ ಎಂದು ಘೋಷಿಸಲಾಗಿದೆ.
9 ನೇ ತರಗತಿಯಲ್ಲಿದ್ದಾಗ ತಾಯಿ ಸುನೀತಾ ಝಾ ಅವರೊಂದಿಗೆ ಕೋಟಾಗೆ ಬಂದಿದ್ದ ಸಾಕೇತ್, ಕಳೆದ ನಾಲ್ಕು ವರ್ಷಗಳಿಂದ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಇನ್ನು ಲಾಕ್ಡೌನ್ ಸಮಯದಲ್ಲಿ ಅವರು ಆನ್‌ಲೈನ್ ಮೂಲಕ ತಮ್ಮ ಅಧ್ಯಯನ ಮುಂದುವರಿಸಿದರು. ಸಾಕೇತ್ ಅವರ ತಂದೆ ಸಂಜಯ್ ಕುಮಾರ್ ಝಾ ಬೊಕಾರೊದಲ್ಲಿನ ಪ್ರೌಢಶಾಲೆಯ ಪ್ರಾಂಶುಪಾಲರಾಗಿದ್ದಾರೆ.
ಸಾಕೇತ್ ಅವರು ಐಐಟಿಯಾನ್ ಆಗಬೇಕೆಂಬ ಕನಸಿನೊಂದಿಗೆ ಕೋಟಾಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. "ಕೋಟಾದಲ್ಲಿ ಅಧ್ಯಯನ ಮಾಡಲು ಉತ್ತಮ ವಾತಾವರಣವಿದೆ. ಜೆಇಇ ಪರೀಕ್ಷೆ ಮುಖ್ಯವಾಗಿ ಎನ್‌ಸಿಇಆರ್‌ಟಿ ಆಧಾರಿತ ಪಠ್ಯಕ್ರಮದ ಮೇಲೆ ಕೇಂದ್ರೀಕರಿಸಿದೆ. ಐಐಟಿ, ವೈದ್ಯಕೀಯ ಸಿದ್ಧತೆಗಳಿಗೆ ಕೋಟಾ ಉತ್ತಮವಾಗಿದೆ" ಎಂದು ಅವರು ಹೇಳಿದರು.