ETV Bharat / bharat

ಕಾಬೂಲ್​ ಆತ್ಮಾಹುತಿ ದಾಳಿಯಲ್ಲಿ ಮಡಿದವರಿಗೆ ಮರಳು ಶಿಲ್ಪಿ ಪಟ್ನಾಯಕ್ ನಮನ

author img

By

Published : Aug 29, 2021, 9:06 AM IST

ಕಾಬೂಲ್​ ಏರ್​ಪೋರ್ಟ್​ನಲ್ಲಿ ಆತ್ಮಾಹುತಿ ಬಾಂಬ್‌ ಸ್ಫೋಟದಲ್ಲಿ ಸುಮಾರು 169 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಅಸುನೀಗಿದ ಅಮಾಯಕ ಜೀವಗಳಿಗೆ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಪುರಿಯ ಕಡಲತೀರದಲ್ಲಿ ಮರಳು ಶಿಲ್ಪದ ಮೂಲಕ ನಮನ ಸಲ್ಲಿಸಿದ್ದಾರೆ.

kabul attack
ಮಡಿದ ಜೀವಗಳಿಗೆ ಗೌರವ ಸಲ್ಲಿಕೆ

ಪುರಿ(ಒಡಿಶಾ): ತಾಲಿಬಾನ್​ ಅಟ್ಟಹಾಸದಿಂದ ನಲುಗಿರುವ ಅಫ್ಘಾನಿಸ್ತಾನದ ಕಾಬೂಲ್‌ ವಿಮಾನ ನಿಲ್ದಾಣ ಬಳಿ ನಡೆದಿದ್ದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಸುಮಾರು 169 ಮಂದಿ ಸಾವನ್ನಪ್ಪಿದ್ದರು. ಉಗ್ರರ ಈ ಕೃತ್ಯವನ್ನು ಇಡೀ ಜಗತ್ತು ಖಂಡಿಸಿತ್ತು. ಇನ್ನು, ದುರಂತದಲ್ಲಿ ಸಾವನ್ನಪ್ಪಿದ್ದವರಿಗೆ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಪುರಿಯ ಕಡಲ ತೀರದಲ್ಲಿ ಮರಳು ಶಿಲ್ಪ​ ರಚಿಸಿ ನಮನ ಸಲ್ಲಿಸಿದ್ದಾರೆ.

ಕಾಬೂಲ್​ ಆತ್ಮಾಹುತಿ ದಾಳಿಯಲ್ಲಿ ಮಡಿದವರಿಗೆ ಮರಳು ಶಿಲ್ಪಿ ಪಟ್ನಾಯಕ್ ನಮನ

"ಜಗತ್ತಿನ ಎಲ್ಲ ಜನರು ಹಿಂಸೆಯನ್ನು ಬಿಟ್ಟು ಶಾಂತಿಯಿಂದ ಬದುಕಲು" ಎಂದು ಕರೆ ನೀಡಿದ್ದಾರೆ. ಜಗತ್ತಿನ ಅಭಿವೃದ್ಧಿಯ ವಿಚಾರಗಳು, ಸಾಮಾಜಿಕ ಸಮಸ್ಯೆಗಳು, ಕ್ರೀಡೆ, ಆರೋಗ್ಯ ಹೀಗೆ ಹಲವಾರು ವಿಷಯಗಳ ಬಗ್ಗೆ ಸುದರ್ಶನ್​ ಪಟ್ನಾಯಕ್ ಮರಳು ಶಿಲ್ಪ ರಚಿಸುತ್ತಾರೆ. ಈ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪಟ್ನಾಯಕ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕಾಬೂಲ್​ ವಿಮಾನ ನಿಲ್ದಾಣ​ ಬಳಿ ಗುರುವಾರ ಉಗ್ರರು ಬೃಹತ್ ಪ್ರಮಾಣದ ಸ್ಫೋಟಕದೊಂದಿಗೆ ದಾಳಿ ನಡೆಸಿದ್ದರು. ಇದು ವಿಮಾನ ನಿಲ್ದಾಣದ ಗೇಟ್ ಒಳಗೆ ಹಾಗೂ ಹೊರಗಿದ್ದ ಅಮೆರಿಕದ 13 ಸೈನಿಕರು ಸೇರಿ ಆಫ್ಘಾನ್‌ ಬಿಟ್ಟು ಪಲಾಯನವಾಗಲು ನಿಂತಿದ್ದ 169ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿತ್ತು. ಭೀಕರ ದಾಳಿ ಮಾಡಿದ್ದು, ತಾವೇ ಎಂದು ಉಗ್ರ ಸಂಘಟನೆ ಐಸಿಸ್-ಕೆ ಒಪ್ಪಿಕೊಂಡಿತ್ತು.

ಇದನ್ನೂ ಓದಿ: ರಕ್ಷಾ ಬಂಧನದಂದು ಪರಿಸರ ಜಾಗೃತಿ: ಮರಳಿನಲ್ಲಿ ರಾಖಿ ರಚಿಸಿ ಶುಭಾಶಯ ಕೋರಿದ ಪಟ್ನಾಯಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.