ಚಂಡೀಗಢ : ಅಂತಾರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಣೆದಾರ ಜಗದೀಶ್ ಭೋಲಾನನ್ನು ಪಂಜಾಬ್ ಸರ್ಕಾರ ಪಟಿಯಾಲ ಜೈಲಿನಿಂದ ಗುರುದಾಸ್‌ಪುರ ಜೈಲಿಗೆ ಕಳುಹಿಸಿದೆ ಎನ್ನಲಾಗಿದೆ. ಭೋಲಾ 6,000 ಕೋಟಿ ರೂ.ಗಳ ಸಿಂಥೆಟಿಕ್ ಡ್ರಗ್ ರಾಕೆಟ್‌ನ ಭಾಗವಾಗಿದ್ದಾನೆ.
ಡ್ರಗ್ಸ್ ವಿರುದ್ಧ ಸಿಧು ಧ್ವನಿ : ಜೈಲಿನಲ್ಲಿದ್ದ ಜಗದೀಶ್ ಭೋಲಾ ಅವರ ಬಳಿ ಮೊಬೈಲ್ ಪತ್ತೆಯಾಗಿರುವುದು ಎರಡು ದಿನಗಳ ಹಿಂದೆ ತಿಳಿದು ಬಂದಿದೆ. ಇನ್ನು ರೋಡ್ ರೇಜ್ ಪ್ರಕರಣದಲ್ಲಿ ಪಟಿಯಾಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ನವಜೋತ್ ಸಿಧು ಕೂಡ ಇದೇ ಜೈಲು ಸೇರಿದ್ದಾರೆ. ಇವರು ಡ್ರಗ್ಸ್ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಾ ಬಂದವರು. ಈಗ ಡ್ರಗ್ಸ್ ಆರೋಪಿ ಇರುವ ಜೈಲಿನಲ್ಲೇ ಶಿಕ್ಷೆ ಅನುಭವಿಸುತ್ತಿದ್ದಾರೆ.
ಭೋಲಾ ಉದ್ದೇಶಗಳ ಬಗ್ಗೆ ಕಳವಳ : ಜಗದೀಶ್ ಭೋಲಾ ಉದ್ದೇಶಗಳು ಪಂಜಾಬ್ ಪೊಲೀಸರಿಗೆ ಕಳವಳದ ವಿಷಯವಾಗಿ ಉಳಿದಿವೆ. ಭೋಲಾಗೆ ಮೊಬೈಲ್ ಎಲ್ಲಿ ಸಿಕ್ಕಿತು, ಯಾರಿಗೆ ಕರೆ ಮಾಡಿದರು? ಎಂಬುದರ ಬಗ್ಗೆ ತನಿಖೆ ಚುರುಕುಗೊಂಡಿದೆ. ಈತ ಜೈಲಿನಿಂದಲೇ ಮಾದಕ ವಸ್ತು ಕಳ್ಳಸಾಗಣೆ ಜಾಲವನ್ನು ನಡೆಸುತ್ತಿದ್ದನಾ? ಅಥವಾ ಬೇರೆ ಯಾವುದಾದರೂ ಸಂಚಿನಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಶಂಕೆ ಪೊಲೀಸರಿಗೆ ಮೂಡಿದೆ.
ಫೊರೆನ್ಸಿಕ್ ತನಿಖೆ : ಪಟಿಯಾಲ ಜೈಲಿನ ಚಾಕಿ ನಂ.20ರಲ್ಲಿ ಜಗದೀಶ್ ಭೋಲಾನ ಮೇಲೆ ಜೈಲು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಆ ವೇಳೆ ಆತನ ಮೊಬೈಲ್ನಲ್ಲಿ ಸಿಮ್ ಇರಲಿಲ್ಲ. ನಂತರ ಪೊಲೀಸರು ಭೋಲಾ ಬಳಿಯಿದ್ದ ಸ್ಮಾರ್ಟ್‌ಫೋನ್ ವಶಪಡಿಸಿಕೊಂಡಿದ್ದಾರೆ. ಈಗ ಅದರ ವಿಧಿವಿಜ್ಞಾನ ತನಿಖೆ ನಡೆಯುತ್ತಿದೆ. ಇದರ ಜೊತೆಗೆ ಪಟಿಯಾಲ ಪೊಲೀಸರು ಭೋಲಾನನ್ನು ಪ್ರೊಡಕ್ಷನ್ ವಾರಂಟ್ ಮೇಲೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಸಿಂಥೆಟಿಕ್ ಡ್ರಗ್ಸ್ ದಂಧೆಯ ರೂವಾರಿ ಭೋಲಾ : ಭೋಲಾ ಅಂತಾರಾಷ್ಟ್ರೀಯ ಕುಸ್ತಿಪಟು. ಅಷ್ಟೇ ಅಲ್ಲ, ಅವರು ಪಂಜಾಬ್ ಪೊಲೀಸ್ ಡಿಎಸ್ಪಿಯಾಗಿ ಕೆಲಸ ಮಾಡಿದವ. ಹಿಮಾಚಲದ ಕಾರ್ಖಾನೆಗಳಲ್ಲಿ ಸಂಶ್ಲೇಷಿತ ಡ್ರಗ್ಸ್ ತಯಾರಿಸಲು ಮತ್ತು ಅವುಗಳನ್ನು ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಸಾಗಿಸಲು ಈತ ತನ್ನದೇ ಆದ ರೀತಿಯಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ. ಭೋಲಾನನ್ನು 2013ರಲ್ಲಿ ಪೊಲೀಸರು ಬಂಧಿಸಿದ್ದರು.
ನಿಯಮ ಉಲ್ಲಂಘನೆ ವಿರುದ್ಧ ಕ್ರಮ : ಜಗದೀಶ್ ಭೋಲಾ ಅವರಿಂದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪಟಿಯಾಲ ಜೈಲು ಅಧೀಕ್ಷಕ ಮಂಜಿತ್ ಸಿಂಗ್ ತಿವಾನಾ ಮಾಹಿತಿ ನೀಡಿದ್ದು, ಇದು ಜೈಲು ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ, ಅವರನ್ನು ಗುರುದಾಸ್‌ಪುರ ಜೈಲಿಗೆ ಕಳುಹಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ : ವಿಶ್ವ ರಕ್ತದ ಕ್ಯಾನ್ಸರ್ ದಿನ : ರೋಗದ ಬಗ್ಗೆ ನಿಮಗಿರುವ ತಪ್ಪು ಕಲ್ಪನೆಗಳಿಗೆ ಇಲ್ಲಿದೆ ಉತ್ತರ