ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಇಂದು ನಡೆಯುತ್ತಿರುವ ಚುನಾವಣೆಯ ಮತ ಎಣಿಕೆಯ ನಡುವೆಯೇ ಗುಪ್ತಚರ ದಳ (ಐಬಿ) ಉತ್ತರ ಪ್ರದೇಶ ಗೃಹ ಇಲಾಖೆಗೆ ವರದಿಯೊಂದನ್ನು ಸಲ್ಲಿಸಿದೆ. ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಹಿಂಸಾಚಾರದ ಸಾಧ್ಯತೆಯನ್ನು ವರದಿ ಎಚ್ಚರಿಕೆ ನೀಡಿದೆ. ಗುಪ್ತಚರ ದಳವು, ಕಾನ್ಪುರ, ಮೊರಾದಾಬಾದ್, ಸಹರಾನ್‌ಪುರ್, ಸಂಭಾಲ್, ಮೀರತ್, ಬಿಜ್ನೋರ್, ಜೌನ್‌ಪುರ್ ಮತ್ತು ಅಜಂಗಢ್ ಸೇರಿದಂತೆ 17 ಜಿಲ್ಲೆಗಳಲ್ಲಿ ಹಿಂಸಾಚಾರ ಮತ್ತು ಗೊಂದಲದ ಸಾಧ್ಯತೆ ಇದೆ ಎಂದಿದೆ.
ಐಬಿ ವರದಿಯ ಪ್ರಕಾರ, ಸೋತ ಅಭ್ಯರ್ಥಿಗಳು ಕಾರ್ಯಕರ್ತರಲ್ಲಿ ಘರ್ಷಣೆಗೆ ಪ್ರಚೋದಿಸಬಹುದು ಎಂದು ಹೇಳಿದೆ. ವರದಿಯ ನಂತರ ಯುಪಿ ಗೃಹ ಇಲಾಖೆ ಮತ್ತು ಯುಪಿ ಪೊಲೀಸರು ಅಲರ್ಟ್ ಆಗಿದ್ದು, ಭದ್ರತೆ ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ಯುಪಿಯಲ್ಲಿ ಸತತ 2ನೇ ಸಲ ಅಧಿಕಾರದತ್ತ BJP.. ನಾಲ್ಕು ದಾಖಲೆ ಬರೆಯಲಿರುವ ಫೈರ್ ಬ್ರ್ಯಾಂಡ್ ಯೋಗಿ!
ಮತ ಎಣಿಕೆ ವೇಳೆ, ಮುಕ್ತಾಯದ ನಂತರ ಹಿಂದುಳಿದ ಅಭ್ಯರ್ಥಿಗಳು ಕಾರ್ಯಕರ್ತರಲ್ಲಿ ವದಂತಿಗಳನ್ನು ಹರಡುವ ಮೂಲಕ ಹಿಂಸಾಚಾರವನ್ನು ಪ್ರಚೋದಿಸುವ ಸಾಧ್ಯತೆಯಿದೆ. ಪರಿಣಾಮವಾಗಿ, ಕಾರ್ಯಕರ್ತರು ವಿಧ್ವಂಸಕ, ಹಿಂಸಾಚಾರದ ಘಟನೆಗಳನ್ನು ನಡೆಸಬಹುದು ಎಂದು ವರದಿ ಹೇಳಿದೆ.
ಯಾವುದೇ ಸಂದರ್ಭದಲ್ಲೂ ರಾಜ್ಯದ ವಾತಾವರಣ ಹದಗೆಡಬಾರದು ಹಾಗೂ ಹಿಂಸಾಚಾರದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಮಹಾನಿರ್ದೇಶಕರು ಎಲ್ಲ ಜಿಲ್ಲೆಗಳ ಪೊಲೀಸರಿಗೆ ಸೂಚನೆ ನೀಡಿದ್ದಾರೆ.