ಚೆನ್ನೈ: ಚಂಡಮಾರುತದಿಂದ ಉಂಟಾದ ಹಾನಿಯ ಪರಿಹಾರವಾಗಿ ತಮಿಳುನಾಡಿಗೆ ಎರಡನೇ ಕಂತಿನ 450 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ತಿಳಿಸಿದ್ದಾರೆ. ವೈಮಾನಿಕ ಸಮೀಕ್ಷೆ ನಡೆಸಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರೊಂದಿಗೆ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆಯ ನಂತರ ಸಿಂಗ್ ಮಾತನಾಡಿದರು.
"ತಮಿಳುನಾಡಿನಲ್ಲಿನ ಭಾರಿ ಮಳೆ, ಪ್ರವಾಹದಿಂದ ಉಂಟಾದ ಜೀವಹಾನಿಯಿಂದ ಪ್ರಧಾನಿ ಮೋದಿ ಕಳವಳಗೊಂಡಿದ್ದಾರೆ" ಎಂದು ಅವರು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಚೆನ್ನೈನಲ್ಲಿ ಪ್ರವಾಹದ ಸಮಸ್ಯೆ ಪುನರಾವರ್ತಿತವಾಗಿರುವುದರಿಂದ, ನಗರ ಪ್ರವಾಹ ನಿರ್ವಹಣಾ ಚಟುವಟಿಕೆಗಳಿಗಾಗಿ ಭಾರತ ಸರ್ಕಾರವು 500 ಕೋಟಿ ರೂ.ಗಳ ಕೇಂದ್ರ ಧನಸಹಾಯ ಅನುಮೋದಿಸಿದೆ. ಎನ್ಡಿಆರ್ಎಫ್ ಸೇರಿದಂತೆ ಎಲ್ಲಾ ಕೇಂದ್ರ ಸಂಸ್ಥೆಗಳು ತಮಿಳುನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ ಎಂದು ಸಚಿವರು ತಿಳಿಸಿದರು.
-
#WATCH | Defence Minister Rajnath Singh conducts an aerial survey of flood-affected areas of Tamil Nadu #CycloneMichuang pic.twitter.com/dmXUSpJS2c
— ANI (@ANI) December 7, 2023 " class="align-text-top noRightClick twitterSection" data="
">#WATCH | Defence Minister Rajnath Singh conducts an aerial survey of flood-affected areas of Tamil Nadu #CycloneMichuang pic.twitter.com/dmXUSpJS2c
— ANI (@ANI) December 7, 2023#WATCH | Defence Minister Rajnath Singh conducts an aerial survey of flood-affected areas of Tamil Nadu #CycloneMichuang pic.twitter.com/dmXUSpJS2c
— ANI (@ANI) December 7, 2023
ಎಸ್ಡಿಆರ್ಎಫ್ನ ಎರಡನೇ ಕಂತಿನ ಕೇಂದ್ರದ ಪಾಲು ಆಂಧ್ರಪ್ರದೇಶಕ್ಕೆ 493.60 ಕೋಟಿ ರೂ., ತಮಿಳುನಾಡಿಗೆ 450 ಕೋಟಿ ರೂ.ಗಳನ್ನು ಮುಂಚಿತವಾಗಿ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ ಎಂದರು. ತಮಿಳುನಾಡಿನಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಪ್ರಧಾನಿ ಮೋದಿ ನನಗೆ ನಿರ್ದೇಶನ ನೀಡಿದ್ದಾರೆ. ಪ್ರಧಾನಿಯವರು ಸಿಎಂ ಸ್ಟಾಲಿನ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಸಿಂಗ್ ನುಡಿದರು.
ಧಾರಾಕಾರ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಚೆನ್ನೈ ಮತ್ತು ಹತ್ತಿರದ ಪ್ರದೇಶಗಳನ್ನು ಸಮೀಕ್ಷೆ ಮಾಡಿದ ನಂತರ ಕೇಂದ್ರ ಸಚಿವ ರಾಜನಾಥ್ ಸಿಂಗ್ ಸ್ಟಾಲಿನ್ ಅವರನ್ನು ಇಲ್ಲಿನ ಸಚಿವಾಲಯದಲ್ಲಿ ಭೇಟಿಯಾದರು. ಮಧ್ಯಂತರ ಪರಿಹಾರ ಕೋರಿ ಸಿಎಂ ಸ್ಟಾಲಿನ್ ಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದರು ಎಂದು ಸರ್ಕಾರ ತಿಳಿಸಿದೆ. ಸಭೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲೀಸ್, ನೌಕಾಪಡೆ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
-
#WATCH | Chennai: On flood-like situation, Defence Minister Rajnath Singh says, "I took an aerial survey followed by a one-to-one meeting with the Chief Minister and a review meeting with the concerned officials. Together we are putting up an effective response to the situation… pic.twitter.com/1srkmRnirT
— ANI (@ANI) December 7, 2023 " class="align-text-top noRightClick twitterSection" data="
">#WATCH | Chennai: On flood-like situation, Defence Minister Rajnath Singh says, "I took an aerial survey followed by a one-to-one meeting with the Chief Minister and a review meeting with the concerned officials. Together we are putting up an effective response to the situation… pic.twitter.com/1srkmRnirT
— ANI (@ANI) December 7, 2023#WATCH | Chennai: On flood-like situation, Defence Minister Rajnath Singh says, "I took an aerial survey followed by a one-to-one meeting with the Chief Minister and a review meeting with the concerned officials. Together we are putting up an effective response to the situation… pic.twitter.com/1srkmRnirT
— ANI (@ANI) December 7, 2023
ರಾಜನಾಥ್ ಸಿಂಗ್ ಅವರೊಂದಿಗೆ ಕೇಂದ್ರ ರಾಜ್ಯ ಸಚಿವ ಎಲ್.ಮುರುಗನ್ ಕೂಡ ಇದ್ದರು. ಉತ್ತರ ತಮಿಳುನಾಡಿನ ಚೆನ್ನೈ, ಕಾಂಚೀಪುರಂ, ಚೆಂಗಲ್ಪೇಟ್ ಮತ್ತು ತಿರುವಳ್ಳೂರು ಚಂಡಮಾರುತ ಮತ್ತು ಭಾರಿ ಪ್ರವಾಹದಿಂದ ಹಾನಿಗೊಳಗಾಗಿವೆ. ರಾಜ್ಯ ಸರ್ಕಾರ ಈಗಾಗಲೇ 5,060 ಕೋಟಿ ರೂ.ಗಳ ಮಧ್ಯಂತರ ಕೇಂದ್ರ ಪರಿಹಾರವನ್ನು ಕೋರಿದೆ.
ಇದನ್ನೂ ಓದಿ: ಅಯೋಧ್ಯಾ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ: ಕೊಹ್ಲಿ, ತೆಂಡೂಲ್ಕರ್ ಸೇರಿ 7 ಸಾವಿರ ವಿಐಪಿಗಳಿಗೆ ಆಹ್ವಾನ