ETV Bharat / bharat

ಶರ ವೇಗದಲ್ಲಿ ಸಾಗುತ್ತಿದೆ ಭಾರತೀಯ ಗೇಮಿಂಗ್ ಉದ್ಯಮ - ಗೇಮಿಂಗ್

ಕೊರೊನಾ ತಂದೊಡ್ಡಿದ ಸಂಕಷ್ಟದಿಂದಾಗಿ ಹಲವಾರು ಉದ್ಯಮಗಳ ವಹಿವಾಟಿನಲ್ಲಿ ಇಳಿಕೆ ಕಂಡಿದ್ದರೂ ಭಾರತೀಯ ಗೇಮಿಂಗ್​ ಉದ್ಯಮದಲ್ಲಿ ಮಹತ್ತರ ಬೆಳವಣಿಗೆ ಕಂಡಿದೆ. ಕೊರೊನಾ ಸಮಯದಲ್ಲಿ ಕೊಂಚ ಮಟ್ಟಿಗೆ ವಹಿವಾಟು ತಗ್ಗಿತ್ತಾದರೂ ಸಹ ಇದೀಗ ದುಪ್ಪಟ್ಟು ಏರಿಕೆ ಕಂಡಿದೆ.

File Photo
ಸಂಗ್ರಹ ಚಿತ್ರ
author img

By

Published : Feb 18, 2021, 1:37 PM IST

ನವದೆಹಲಿ: ಕಾಲಕ್ಕೆ ತಕ್ಕಂತೆ ಬದುಕು ಬದಲಾಗತೊಡಗಿದ್ದು, ಹಿಂದಿನ ಕಾಲದಲ್ಲಿ ಮನೆಯ ಹೊರಭಾಗದಲ್ಲಿ ಆಡುತ್ತಿದ್ದ ಕೆಲ ಕ್ರೀಡೆಗಳನ್ನು ಈಗ ಮನೆಯ ಒಳಭಾಗದಲ್ಲಿ ಆಡುತ್ತಿದ್ದೇವೆ. ಅಂದರೆ, ಹೊರಾಂಗಣದಲ್ಲಿ ಆಡಲಾಗುವ ಕ್ರಿಕೆಟ್​, ಫುಟ್ಬಾಲ್​​​ನಂತಹ ಆಟಗಳನ್ನು ನಾವು ಇಂದು ನಮ್ಮ ಸ್ಮಾರ್ಟ್​ ಫೋನ್​ನಲ್ಲಿ ಆಡುವ ಮೂಲಕ ಸಂತಸ ಪಡುತ್ತಿದ್ದೇವೆ. ಮೊಬೈಲ್​ ಮೂಲಕ ಗೇಮ್​ ಆಡುವುದರಿಂದ ಮನಸ್ಸಿಗೆ ಸಂತಸ ಉಂಟಾಗುತ್ತದೆ ಆದರೆ ದೇಹಕ್ಕಲ್ಲ. ಹೀಗಿದ್ದರೂ ಅದೆಷ್ಟೋ ಜನಕ್ಕೆ ಈ ಗೇಮಿಂಗ್​ನಿಂದ ಉದ್ಯೋಗವಕಾಶ ದೊರೆತಿರುವುದು ಸುಳ್ಳಲ್ಲ.

ಭಾರತೀಯ ಗೇಮಿಂಗ್ ಉದ್ಯಮದ ನೇಮಕ ಚಟುವಟಿಕೆಯಲ್ಲಿ ದಿನೇ ದಿನೆ ಏರಿಕೆ ಕಾಣತೊಡಗಿದ್ದು, ಮೊಬೈಲ್​​ನಲ್ಲಿ ಗೇಮ್​ ಆಡುವವರ ಸಂಖ್ಯೆ ಹೆಚ್ಚಳವಾದಂತೆ ಆ ಕಂಪನಿಯು ಸಹ ಕೆಲಸ ನಿರ್ವಹಿಸಲೆಂದು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಹೆಚ್ಚಿಸಿದೆ. 2020ರ ಜನವರಿ ವೇಳೆಗೆ ಗೇಮಿಂಗ್ ವಲಯದ ಉದ್ಯೋಗವಕಾಶದಲ್ಲಿ 13 ರಿಂದ 15 ಪ್ರತಿಶತದಷ್ಟು ಹೆಚ್ಚಾಗಿತ್ತು, ಆದರೆ ತದನಂತರ ಕೊರೊನಾದಿಂದಾಗಿ ಈ ಸಂಖ್ಯೆ ಕೊಂಚ ಮಟ್ಟಿಗೆ ಇಳಿಕೆ ಕಂಡಿತ್ತು. ಆದರೆ, ಇದೀಗ ಕೊರೊನಾ ರೋಗ ಕಣ್ಮರೆಯಾಗತೊಡಗಿದ್ದು, ಗೇಮಿಂಗ್ ಉದ್ಯಮದ ನೇಮಕ ಚಟುವಟಿಕೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದುಪ್ಪಾಟ್ಟಾಗಿದೆ.

ತಂತ್ರಜ್ಞಾನ, ದೂರಸಂಪರ್ಕ, ಮಾರ್ಕೆಟಿಂಗ್ ನಂತಹ ಕ್ಷೇತ್ರಗಳಲ್ಲಿಯೂ ಸಹ ಕೊರೊನಾ ನೀಡಿರುವ ಪೆಟ್ಟಿನಿಂದಾಗಿ ತೀವ್ರ ಏರಿಳಿಕೆ ಕಾಣತೊಡಗಿದೆ. ಆದರೆ, ಸದ್ಯದ ಮಟ್ಟಿಗೆ ಗೇಮಿಂಗ್ ಉದ್ಯಮವು ಭಾರತದಲ್ಲಿ ಬೃಹತ್ ಉದ್ಯೋಗವನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.

ಇತ್ತೀಚಿನ ವರದಿಯ ಪ್ರಕಾರ ಗೇಮಿಂಗ್​​ ಉದ್ಯಮದಲ್ಲಿ ಇದೇ ರೀತಿ ಉತ್ತಮ ಬೆಳವಣಿಗೆ ಕಂಡರೆ 2022 ರ ವೇಳೆಗೆ ಭಾರತದಲ್ಲಿ 2.8 ಬಿಲಿಯನ್ ಡಾಲರ್​​​​​ನಷ್ಟು ವಹಿವಾಟು ನಡೆಯಲಿದೆ ಎನ್ನಲಾಗಿದೆ.

2020ರ ಹಣಕಾಸು ವರ್ಷದಲ್ಲಿ ಭಾರತದ ಗೇಮಿಂಗ್ ಉದ್ಯಮದ ಮಾರುಕಟ್ಟೆ ಮೌಲ್ಯವು ಸುಮಾರು ಒಂಬತ್ತು ಸಾವಿರ ಕೋಟಿ ಎನ್ನಲಾಗಿದ್ದು, ಇದು 2022ರ ವೇಳೆಗೆ 143 ಶತಕೋಟಿ ರೂಪಾಯಿಗಳಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಉದ್ಯಮವು ದೇಶದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, 2022 ರ ವೇಳೆಗೆ 40 ಸಾವಿರಕ್ಕೂ ಹೆಚ್ಚು ಹೊಸ ಉದ್ಯೋಗಾವಕಾಶಗಳನ್ನು ಸೃಸ್ಟಿಸಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

2020ರ ಮತ್ತೊಂದು ಸಮೀಕ್ಷೆಯ ಪ್ರಕಾರ, ಬಹುಪಾಲು ಭಾರತೀಯರು ನಿತ್ಯ ಒಂದರಿಂದ ಎರಡು ಗಂಟೆಯಾದರೂ ಸಹ ಮೊಬೈಲ್​ ಗೇಮಿಂಗ್​​ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪೈಕಿ ಪುರುಷರು, ಶೂಟಿಂಗ್​ನಂತಹ ಗೇಮ್​ಗಳು​​ ಹಾಗೂ ಮತ್ತಿತರ ಕ್ರೀಡೆಗಳಲ್ಲಿ ಆಸಕ್ತಿ ತೋರಿದರೆ, ಮಹಿಳೆಯರು ತಂತ್ರಜ್ಞಾನ ಮತ್ತು ಸಾಹಸದ ಆಟಗಳಿಗೆ ಆದ್ಯತೆ ನೀಡಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.