ETV Bharat / bharat

INS​ ವಿಕ್ರಾಂತ್​ ಹಗರಣ: ಬಿಜೆಪಿ ನಾಯಕ ಕಿರಿತ್​ ಸೋಮಯ್ಯ, ಪುತ್ರನಿಗೆ ಕ್ಲೀನ್‌ಚಿಟ್​​ - ಬಿಜೆಪಿ ನಾಯಕ ಕಿರಿತ್​ ಸೋಮಯ್ಯ

ಐಎನ್​ಎಸ್​ ವಿಕ್ರಾಂತ್​ ಬಚಾವೋ​ ಎಂಬ ಹೆಸರಿನಲ್ಲಿ ಬಿಜೆಪಿ ನಾಯಕ ಕಿರಿತ್​ ಸೋಮಯ್ಯ ಹಾಗೂ ಪುತ್ರ ನೀಲ್ ಮುಂಬೈನಲ್ಲಿ ಪ್ರಚಾರ ನಡೆಸಿದ್ದರು. ಇದಕ್ಕಾಗಿ ಸುಮಾರು 57 ಕೋಟಿ ರೂ ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿತ್ತು.

ಐಎನ್​ಎಸ್​ ವಿಕ್ರಾಂತ್​ ಹಗರಣ ಪ್ರಕರಣ; ಬಿಜೆಪಿ ನಾಯಕ ಕಿರಿತ್​ ಸೋಮ್ಮಯ್ಯ, ಮಗ ನೀಲ್​ಗೆ ಕ್ಲಿನ್​ ಚೀಟ್​​
ins-vikrant-scam-case-clean-cheat-for-bjp-leader-kirit-sommaiah-and-son-neil
author img

By

Published : Dec 15, 2022, 3:22 PM IST

ಮುಂಬೈ: ಐಎನ್ಎಸ್​ ವಿಕ್ರಾಂತ್ ಹಗರಣ ಪ್ರಕರಣದಲ್ಲಿ ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಮತ್ತು ಮಗ ನೀಲ್​ ಸೋಮಯ್ಯಗೆ ಮುಂಬೈ ಆರ್ಥಿಕ ಅಪರಾಧ ದಳ ಕ್ಲೀನ್‌ಚಿಟ್​ ನೀಡಿದೆ. ಈ ಕುರಿತು ಮುಂಬೈ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ವರದಿ ಸಲ್ಲಿಸಲಾಗಿದ್ದು, ತಂದೆ ಮತ್ತು ಮಗನ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಉಲ್ಲೇಖಿಸಲಾಗಿದೆ.

ಐಎನ್​ಎಸ್​ ವಿಕ್ರಾಂತ್​ ಬಚಾವ್​ ಎಂಬ ಹೆಸರಿನಲ್ಲಿ ಇವರು ಮುಂಬೈನಲ್ಲಿ ಪ್ರಚಾರ ನಡೆಸಿದ್ದು, ಸುಮಾರು 57 ಕೋಟಿ ರೂ ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಹಣವನ್ನು ಅವರು ನಿಕೋನ್​ ಇನ್​ಫ್ರಾ ಕಂಪನಿಗೆ ಬಳಸಿದ್ದರು ಎನ್ನಲಾಗಿತ್ತು. ನಿವೃತ್ತ ಸೇನಾಧಿಕಾರಿ ಬಾಬನ್​ ಭೋಸಲೆ ಏಪ್ರಿಲ್​ 7, 2022ರಂದು ಈ ಕುರಿತು ದೂರು ದಾಖಲಿಸಿದ್ದರು. ಥ್ರೊಂಬೆ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 429, 406 ಮತ್ತು 34ರ ಅಡಿ ಪ್ರಕರಣ ದಾಖಲಾಗಿತ್ತು. ಇದಾದ ನಂತರ ಪ್ರಕರಣವನ್ನು ಮುಂಬೈ ಆರ್ಥಿಕ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಕೋರ್ಟ್​ ಕಿರಿತ್​ ಸೋಮಯ್ಯ ಮತ್ತು ನೀಲ್​ ಸೋಮಯ್ಯಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. 'ಕಿರಿತ್ ಸೋಮಯ್ಯ ಈ ಹಣವನ್ನು 2014 ರ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಅವರ ನಿಕಾನ್ ಇನ್ಫ್ರಾ ಕಂಪನಿಗೆ ಬಳಸಿದ್ದರು. ದೇಶದ ಸೇನೆಗೆ ಅವರು ಮೋಸ ಮಾಡಿದ್ದಾರೆ. ಆರೋಪಿಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಕ್ರಮಕ್ಕೆ ಮುಂದಾಗಬೇಕು' ಎಂದು ಶಿವಸೇನೆಯ ನಾಯಕ ಸಂಜಯ್​ ರಾವುತ್ ಆಗ್ರಹಿಸಿದ್ದರು.

ಇದನ್ನೂ ಓದಿ: ನ್ಯಾಯಾಧೀಶರ ಕೊಠಡಿ ಧ್ವಂಸ ಪ್ರಕರಣ: ಮತ್ತೆ 8 ವಕೀಲರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.