ಆ್ಯಂಟಸಿರಾನಾನಾ: ನಿನ್ನೆ ಐಎನ್‌ಎಸ್ ಜಲಾಶ್ವ ಭಾರತೀಯ ನೌಕಾ ತರಬೇತಿ ತಂಡದೊಂದಿಗೆ ಮಡಗಾಸ್ಕರ್‌ನ ಆ್ಯಂಟಸಿರಾನಾನಾ ಬಂದರನ್ನು ತಲುಪಿದೆ.
ಎರಡು ವಾರಗಳ ಕಾಲ ಮಲಗಾಸಿ ವಿಶೇಷ ಪಡೆಗಳ ಸಾಮರ್ಥ್ಯ ವೃದ್ಧಿ ಮತ್ತು ತರಬೇತಿಗಾಗಿ ಭಾರತೀಯ ನೌಕಾ ತರಬೇತಿ ತಂಡವನ್ನು ಮಡಗಾಸ್ಕರ್‌ನಲ್ಲಿ ನಿಯೋಜಿಸಲಾಗುವುದು.
"ಭಾರತೀಯ ನೌಕಾ ತರಬೇತಿಯ ಐದು ಸದಸ್ಯರ ತಂಡದೊಂದಿಗೆ ಐಎನ್‌ಎಸ್ ಜಲಾಶ್ವ ಮಡಗಾಸ್ಕರ್‌ನ ಆ್ಯಂಟಸಿರಾನಾನಾ ಬಂದರನ್ನು ತಲುಪಿದೆ. 2 ವಾರಗಳ ಕಾಲ ಮಲಗಾಸಿ ವಿಶೇಷ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ತರಬೇತಿ ನೀಡಲು ಸಹಾಯ ಮಾಡುತ್ತದೆ" ಎಂದು ಭಾರತೀಯ ರಾಯಭಾರಿ ಅಭಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ಸ್ವಾತಂತ್ರ್ಯ ಸುವರ್ಣ ಮಹೋತ್ಸವಕ್ಕೆ ಪ್ರಧಾನಿ ಮೋದಿ ಅತಿಥಿ
ಭಾರತ ಮತ್ತು ಮಡಗಾಸ್ಕರ್ ರಕ್ಷಣಾ ಕ್ಷೇತ್ರದಲ್ಲಿ ವ್ಯಾಪಕ ಸಹಕಾರವನ್ನು ಹೊಂದಿವೆ. ರಕ್ಷಣಾ ಸಹಕಾರಕ್ಕಾಗಿ ಒಪ್ಪಂದಕ್ಕೆ ಭಾರತ ಮತ್ತು ಮಡಗಾಸ್ಕರ್ ನಡುವೆ ಮಾರ್ಚ್ 2018 ರಲ್ಲಿ ಸಹಿ ಹಾಕಲಾಯಿತು. ರಕ್ಷಣಾ ಕ್ಷೇತ್ರದಲ್ಲಿ ಹಲವಾರು ದ್ವಿಪಕ್ಷೀಯ ಸಹಕಾರ ಯೋಜನೆಗಳು ಉಭಯ ದೇಶಗಳ ನಡುವೆ ಚರ್ಚೆಯಲ್ಲಿವೆ.