ETV Bharat / bharat

ಸಚಿವರ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಯುವತಿ ಮೇಲೆ ಮಸಿ ದಾಳಿ! - Rohit Joshi the son of Minister Mahesh Joshi

ಅತ್ಯಾಚಾರ ಆರೋಪ ಮಾಡಿದ ಯುವತಿ ತನ್ನ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಇಬ್ಬರು ಹುಡುಗರು ಆಕೆಯ ಮೇಲೆ ಮಸಿ ಎರಚಿ ಓಡಿಹೋಗಿದ್ದಾರೆ.

Ink attack on woman who accused Rajasthan Minister's son of rape
ರಾಜಸ್ಥಾನ ಸಚಿವರ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಮಹಿಳೆಯ ಮೇಲೆ ಮಸಿ ದಾಳಿ
author img

By

Published : Jun 12, 2022, 4:13 PM IST

ನವದೆಹಲಿ: ರಾಜಸ್ಥಾನ ಸಚಿವ ಮಹೇಶ್ ಜೋಶಿ ಅವರ ಪುತ್ರನ ಮೇಲೆ ಅತ್ಯಾಚಾರ ಆರೋಪ ಮಾಡಿರುವ 23 ವರ್ಷದ ಯುವತಿ ಮೇಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಸಿ ಬಳಿಯಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಶನಿವಾರ ರಾತ್ರಿ 9.30ರ ಸುಮಾರಿಗೆ ಕಾಳಿಂದಿ ಕುಂಜ್ ರಸ್ತೆಯ ಬಳಿ ತನ್ನ ತಾಯಿಯೊಂದಿಗೆ ಈ ಮಹಿಳೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಇಬ್ಬರು ಹುಡುಗರು ಆಕೆಯ ಮೇಲೆ ಏನೋ ಎಸೆದು ಓಡಿ ಹೋಗಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕ ಸ್ಥಳಕ್ಕೆ ತೆರಳಿ ಮಹಿಳೆಯನ್ನು ತಕ್ಷಣವೇ ಏಮ್ಸ್​ ಆಸ್ಪತ್ರೆಯ ಟ್ರಾಮಾ ಸೆಂಟರ್‌ಗೆ ರವಾನಿಸಲಾಯಿತು. ಆಕೆ ಮೇಲೆ ಎಸೆದಿರುವುದು ನೀಲಿ ಇಂಕ್​​ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಉಪ ಪೊಲೀಸ್ ಆಯುಕ್ತೆ (ಆಗ್ನೇಯ) ಇಶಾ ಪಾಂಡೆ ಹೇಳಿದ್ದಾರೆ.

ನೊಂದ ಮಹಿಳೆಯ ಹೇಳಿಕೆಯನ್ನು ಆಧರಿಸಿ ಪೊಲೀಸರು, ಸುಳ್ಳು ಸಾಕ್ಷಿ ನೀಡುವಂತೆ ಬೆದರಿಕೆಯೊಡ್ಡಿರುವುದು ಹಾಗೂ ಕ್ರಿಮಿನಲ್ ಬೆದರಿಕೆ ಸೇರಿ ವಿವಿಧ ಕಾಯ್ದೆಗಳಡಿ ಶಾಹೀನ್ ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಸಿಕೊಂಡಿದ್ದಾರೆ. ಇತ್ತ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

  • Delhi Commission for Women issues notice to Delhi Police in the matter of an attack on a 23-year-old girl who was allegedly raped by the son of a Rajasthan Minister in May; "some unidentified persons... threw a chemical over her face & threatened her to withdraw her rape case." https://t.co/dpSbAitnus pic.twitter.com/ZVc8CmQ4Hs

    — ANI (@ANI) June 12, 2022 " class="align-text-top noRightClick twitterSection" data=" ">

ಈ ಪ್ರಕರಣ ಸಂಬಂಧ ದಾಖಲಾದ ಎಫ್ಐಆರ್​ ಪ್ರತಿ, ಆರೋಪಿಗಳ ಬಂಧನ ಕುರಿತ ಮಾಹಿತಿ ಹಾಗೂ ಸಂತ್ರಸ್ತ ಯುವತಿ ಮತ್ತು ಕುಟುಂಬಕ್ಕೆ ಸುರಕ್ಷತೆ ಹಾಗೂ ರಕ್ಷಣೆ ಬಗ್ಗೆ ಪೊಲೀಸರು ತೆಗೆದುಕೊಂಡು ಕ್ರಮಗಳ ವಿವರಣೆ ಸಲ್ಲಿಸುವಂತೆ ಪೊಲೀಸರಿಗೆ ಮಹಿಳಾ ಆಯೋಗದ ಅಧ್ಯಕ್ಷರು ಸೂಚಿಸಿದ್ದಾರೆ.

ಕೆಲ ದಿನಗಳ ಹಿಂದೆ ಸಂತ್ರಸ್ತೆ ರಾಜಸ್ಥಾನದ ಸಚಿವ ಮಹೇಶ್ ಜೋಶಿ ಅವರ ಪುತ್ರ ರೋಹಿತ್ ಜೋಶಿ ವಿರುದ್ಧ ಅತ್ಯಾಚಾರ ಆರೋಪದ ಬಗ್ಗೆ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಿಸಿದ್ದರು.

ಇದನ್ನೂ ಓದಿ: ಪುತ್ರನ ವಿರುದ್ಧ ಅತ್ಯಾಚಾರ ಆರೋಪ : ರಾಜಸ್ಥಾನ ಸಚಿವ ಮಹೇಶ್‌ ಜೋಶಿ ಮನೆಗೆ ಸಮನ್ಸ್​ ಜಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.