ETV Bharat / bharat

ISAC Award 2020: ಇಂದೋರ್ ಮತ್ತು ಸೂರತ್​ ನಗರಗಳಿಗೆ ಪ್ರಶಸ್ತಿ

ಇಂಡಿಯಾ ಸ್ಮಾರ್ಟ್ ಸಿಟೀಸ್ ಕಾಂಪಿಟೇಷನ್​ನಲ್ಲಿ ಇಂದೋರ್ ಮತ್ತು ಸೂರತ್ ನಗರ ವಿಭಾಗದಲ್ಲಿ ಜಂಟಿಯಾಗಿ ಪ್ರಶಸ್ತಿ ಪಡೆದರೆ, ರಾಜ್ಯಗಳ ವಿಭಾಗದಲ್ಲಿ ಉತ್ತರ ಪ್ರದೇಶ ಪ್ರಶಸ್ತಿ ಗೆದ್ದುಕೊಂಡಿದೆ.

Indore, Surat win the Smart City Award, UP wins state award
ISAC Award 2020: ಇಂದೋರ್ ಮತ್ತು ಸೂರತ್​ ನಗರಗಳಿಗೆ ಪ್ರಶಸ್ತಿ
author img

By

Published : Jun 26, 2021, 10:35 AM IST

ನವದೆಹಲಿ: ಸ್ಮಾರ್ಟ್ ಸಿಟೀಸ್ ಮಿಷನ್ (ಎಸ್‌ಸಿಎಂ), ಅಮೃತ್ ಯೋಜನೆ ಮತ್ತು ಪ್ರಧಾನ್ ಮಂತ್ರಿ ಆವಾಸ್ ಯೋಜನೆಗಳ ಆರನೇ ವಾರ್ಷಿಕೋತ್ಸವದ ಹಿನ್ನೆಲೆ ನಡೆಸಲಾಗಿದ್ದ ಆನ್‌ಲೈನ್ ಕಾರ್ಯಕ್ರಮವಾದ ಇಂಡಿಯಾ ಸ್ಮಾರ್ಟ್ ಸಿಟೀಸ್ ಕಾಂಪಿಟೇಷನ್​ನಲ್ಲಿ (ಐಎಸ್‌ಎಸಿ) ಮಧ್ಯಪ್ರದೇಶದ ಇಂದೋರ್ ಮತ್ತು ಗುಜರಾತ್​ನ ಸೂರತ್​ ಜಿಲ್ಲೆಗಳಿಗೆ ನಗರಗಳ ವಿಭಾಗದಲ್ಲಿ ಪ್ರಶಸ್ತಿ ಒಲಿದುಬಂದಿದೆ.

ಸ್ಮಾರ್ಟ್ ಸಿಟೀಸ್ ಮಿಷನ್ (ಎಸ್‌ಸಿಎಂ), ಅಮೃತ್ ಮತ್ತು ಪ್ರಧಾನ್ ಮಂತ್ರಿ ಆವಾಸ್ ಯೋಜನೆಗಳನ್ನ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 25, 2015 ರಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಆರು ಯೋಜನೆಗಳಿಗೆ ಆರು ವರ್ಷ ತುಂಬಿದ್ದು, ಇಂಡಿಯಾ ಸ್ಮಾರ್ಟ್ ಸಿಟೀಸ್ ಕಾಂಪಿಟೇಷನ್ ಅನ್ನು​ 2020ರಲ್ಲಿ ನಡೆಸಲಾಗಿತ್ತು.

ಸ್ಪರ್ಧೆಯ 2020ರ ಫಲಿತಾಂಶಗಳನ್ನು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ಇಂದೋರ್ ಮತ್ತು ಸೂರತ್ ನಗರ ವಿಭಾಗದಲ್ಲಿ ಜಂಟಿಯಾಗಿ ಪ್ರಶಸ್ತಿ ಪಡೆದರೆ, ರಾಜ್ಯಗಳ ವಿಭಾಗದಲ್ಲಿ ಉತ್ತರ ಪ್ರದೇಶ ಪ್ರಶಸ್ತಿ ಗೆದ್ದುಕೊಂಡಿದೆ.

ರಾಜ್ಯಗಳ ವಿಭಾಗದಲ್ಲಿ ಮಧ್ಯಪ್ರದೇಶ ಮತ್ತು ತಮಿಳುನಾಡು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದರೆ, ಕೇಂದ್ರಾಡಳಿತ ಪ್ರದೇಶಗಳ ವಿಭಾಗದಲ್ಲಿ ಚಂಡೀಗಢ ಪ್ರಶಸ್ತಿ ಗೆದ್ದುಕೊಂಡಿದೆ.

ಇದನ್ನೂ ಓದಿ: ಹಳಿ ತಪ್ಪಿದ ರಾಜಧಾನಿ ಎಕ್ಸ್​ಪ್ರೆಸ್​​​​: ರತ್ನಗಿರಿಯಲ್ಲಿ ಅವಘಡ

ಸ್ಮಾರ್ಟ್ ಸಿಟೀಸ್ ಲೀಡರ್‌ಶಿಪ್​ನಲ್ಲಿ ಮೊದಲ ಸ್ಥಾನವನ್ನು ಅಹಮದಾಬಾದ್ ಪಡೆದಿದ್ದು, ವಾರಣಾಸಿ ಎರಡನೇ ಮತ್ತು ರಾಂಚಿ ಮೂರನೇ ಸ್ಥಾನ ಪಡೆದಿದೆ. ಸೂರತ್, ಇಂದೋರ್, ಅಹಮದಾಬಾದ್, ಪುಣೆ, ವಿಜಯವಾಡ, ರಾಜ್‌ಕೋಟ್, ವಡೋದರಾ, ವಿಶಾಖಪಟ್ಟಣಂ ಸೇರಿದಂತೆ ನಗರಗಳು ಕ್ಲೈಮೇಟ್ ಸ್ಮಾರ್ಟ್​ ನಗರಗಳ ಪಟ್ಟಿಯಲ್ಲಿ ನಾಲ್ಕು ಸ್ಟಾರ್​ಗಳನ್ನು ಪಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.