ಲಡಾಖ್ : ಜಗತ್ತಿನಾದ್ಯಂತ ಇಂದು ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಗಡಿಯಲ್ಲಿ ಇಂಡೋ- ಟಿಬೆಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ), ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಫಿಎಫ್) ಯ ಯೋಧರು ಯೋಗಾಭ್ಯಾಸ ನಡೆಸಿದರು.
ಇಂಡೋ- ಟಿಬೆಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ) ಯೋಧರು ಲಡಾಖ್ನ ಪ್ಯಾಂಗಾಂಗ್ ಸರೋವರ, ಅರುಣಾಚಲ ಪ್ರದೇಶದ ಲೋಹಿತ್ಪುರದ ಪ್ರಾಣಿ ತರಬೇತಿ ಕೇಂದ್ರದಲ್ಲಿ ಕುದುರೆಗಳೊಂದಿಗೆ ಮತ್ತು ಸಮುದ್ರ ಮಟ್ಟದಿಂದ 18,000 ಸಾವಿರ ಎತ್ತರದ ಲಡಾಖ್ನ ಹಿಮ ಅವೃತ ಪ್ರದೇಶದಲ್ಲಿ ಯೋಗಾಭ್ಯಾಸ ನಡೆಸಿದರು.
ಜಮ್ಮು ಕಾಶ್ಮೀರದಲ್ಲಿ ಸಿಆರ್ಎಫ್ ಜವಾನರು ಕೂಡ ಯೋಗಾಭ್ಯಾಸ ಮಾಡಿದರು.
ಯೋಗ ದಿನಾಚರಣೆಯನ್ನು ಸರ್ಕಾರದ ವತಿಯಿಂದಲೇ ಆಚರಿಸಲಾಗುತ್ತಿದ್ದು, ಈಗಾಗಲೇ ಪ್ರಧಾನಿ ಮೋದಿ ಯೋಗ ದಿನಾಚರಣೆಯ ಅಂಗವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ರಮುಖ ಯೋಗ ಕೇಂದ್ರ ಉತ್ತರಾಖಂಡದ ಪತಂಜಲಿ ಯೋಗ ಪೀಠದಲ್ಲಿಯೋ ವಿಶೇಷ ಯೋಗಾಭ್ಯಾಸ ನಡೆಯುತ್ತಿದೆ.