ಹೈದರಾಬಾದ್: ಬಾಂಗ್ಲಾದೇಶ ಸಂಸ್ಥಾಪನಾ ದಿನದಂದು ಭಾರತಕ್ಕೆ ನೀಡಿದ ಕೃತಜ್ಞತೆಯ ಸಂದೇಶದಲ್ಲಿ ಶೇಖ್ ಮುಜಿಬುರ್ ರೆಹಮಾನ್ ಅವರು 'ಭಾರತೀಯ ಸೈನಿಕರು ನಮಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ನನ್ನ ಜನ ಯಾವಾಗಲೂ ಅವರ ತ್ಯಾಗ ನೆನಪಿಸಿಕೊಳ್ಳುತ್ತಾರೆ' ಎಂದಿದ್ದರು. ಬಾಂಗ್ಲಾದೇಶ ಪಿತಾಮಹರಾದ ಮುಜಿಬುರ್ ಅವರಿಗೆ ಮಹಾತ್ಮ ಗಾಂಧಿ ಶಾಂತಿ ಪ್ರಶಸ್ತಿ ನೀಡಲು ಪ್ರಧಾನಿ ಮೋದಿ ಅವರು ಎರಡು ದಿನಗಳ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದು ಐತಿಹಾಸಿಕ.
ತನ್ನ ಗಡಿ ಮಾತ್ರವಲ್ಲದೆ, ಬಾಂಗ್ಲಾದೇಶ ಭಾರತದೊಂದಿಗೆ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧವನ್ನು ಕೂಡ ಹಂಚಿಕೊಂಡಿದೆ. ಬಾಂಗ್ಲಾದೇಶದ ವಿಮೋಚನೆ ಎಂಬುದು ಒಂದು ರಾಷ್ಟ್ರ ಧರ್ಮಕ್ಕಿಂತ ಭಾಷೆಯಿಂದ ಹೆಚ್ಚು ನಂಟು ಹೊಂದಿದೆ ಎಂಬ ಅಂಶವನ್ನು ಸಾಬೀತುಪಡಿಸಿತು. ಅಂತರರಾಷ್ಟ್ರೀಯ 'ತಾಯ್ನುಡಿ ದಿನದ' ಹಿಂದಿನ ಪ್ರೇರಣೆ ಬಾಂಗ್ಲಾದೇಶದ ಸೃಷ್ಟಿ ಆಗಿದೆ. ದೇಶ ಸ್ಥಾಪನೆಯ ಸಮಯದಲ್ಲಿ ಅಮೆರಿಕ ರಾಜ್ಯ ಕಾರ್ಯದರ್ಶಿ ಆಗಿದ್ದ ಹೆನ್ರಿ ಕಿಸ್ಸಿಂಜರ್ ಅವರು ಇದೊಂದು 'ಬ್ಯಾಸ್ಕೆಟ್ ಕೇ' ಎಂದು ಅಪಹಾಸ್ಯ ಮಾಡಿದರೂ, ಬಾಂಗ್ಲಾದೇಶವು ಎಲ್ಲಾ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಪಾಕಿಸ್ತಾನವನ್ನು ಮೀರಿದೆ. ಆದ್ದರಿಂದ ಇದು ನಿಜ ಅರ್ಥದಲ್ಲಿಯೂ ಬಾಂಗ್ಲಾದೇಶದ ಸುವರ್ಣ ಮಹೋತ್ಸವ ಆಗಿದೆ.
1975ರಲ್ಲಿ ಇಂದಿರಾ ಗಾಂಧಿ ಮತ್ತು ಮುಜಿಬುರ್ ರೆಹಮಾನ್ ಅವರು ಸಹಿ ಮಾಡಿದ ಇಂಡೋ - ಬಾಂಗ್ಲಾ ಒಪ್ಪಂದ ತರುವಾಯ ತೀವ್ರ ಏರಿಳಿತಕ್ಕೆ ತುತ್ತಾಯಿತು. ನಿರಾಶ್ರಿತರು, ನದಿ ನೀರು ಹಂಚಿಕೆ, ಗಡಿ ವಿವಾದಗಳು ಹಾಗೂ ಗಡಿಯಲ್ಲಿನ ವಿಚ್ಛಿದ್ರಕಾರಿ ಚಟುವಟಿಕೆಗಳು ಬಾಂಗ್ಲಾದೇಶದೊಳಗಿನ ಭಾರತ ವಿರೋಧಿ ಪಡೆಗಳ ಶಿಬಿರಗಳು, ಬಾಂಗ್ಲಾದೇಶ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಭಾರತವನ್ನು ದೂಷಿಸುವ ಪ್ರಚಾರ ರೀತಿಯ ಎಲ್ಲಾ ಸಮಸ್ಯೆಗಳು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಅಂತರ ಸೃಷ್ಟಿಸಿವೆ. ಬಾಂಗ್ಲಾದೇಶದಲ್ಲಿ ಮಿಲಿಟರಿ ಆಡಳಿತ ಮುಗಿದ ನಂತರ ಪ್ರಜಾಪ್ರಭುತ್ವ ಬೇರು ಬಿಟ್ಟಂತೆ, ಇಬ್ಬರು ನೆರೆಹೊರೆಯವರ ನಡುವಿನ ತಪ್ಪುಗ್ರಹಿಕೆಯು ನಿಧಾನವಾಗಿ ಕರಗಿ ಹೋಯಿತು. ಭೂ ವಿವಾದವನ್ನು 2015 ರಲ್ಲಿ ಶಾಶ್ವತವಾಗಿ ಇತ್ಯರ್ಥಪಡಿಸಲಾಯಿತು. ಹತ್ತು ವರ್ಷ ಹಳೆಯ ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದವನ್ನು ಸಹ ಜಾರಿಗೆ ತಂದರೆ, ಉಪಖಂಡದಲ್ಲಿ ಪ್ರಗತಿಯ ಹೊಸ ಇತಿಹಾಸ ಬರೆದಂತಾಗುತ್ತದೆ.
1980ರ ದಶಕದಿಂದ, ಬಾಂಗ್ಲಾದೇಶದ ಬೆಳವಣಿಗೆಯ ದರ ವೇಗ ಪಡೆಯಲಾರಂಭಿಸಿದೆ. ತಲಾದಾಯ ದೃಷ್ಟಿಯಿಂದ ಇದು ಭಾರತದೊಂದಿಗೂ ಸ್ಪರ್ಧಿಸಲು ಪ್ರಾರಂಭಿಸಿತು. ಬಾಂಗ್ಲಾದೇಶ ಸಾಧಿಸಿದ ಕೈಗಾರಿಕಾ ಯಶಸ್ಸು ನಿಜಕ್ಕೂ ಆಶ್ಚರ್ಯಕರವಾಗಿದೆ. ನಾಲ್ಕು ದಶಕಗಳ ಹಿಂದೆ ಬಾಂಗ್ಲಾದೇಶದ ಜಿಡಿಪಿಯಲ್ಲಿ ಕೃಷಿಯ ಪಾಲು ಶೇಕಡಾ 33. 2ರಷ್ಟಿತ್ತು . ಕೃಷಿ ಕೊಡುಗೆ ಶೇ 14. 2 ಕ್ಕೆ ಕುಸಿಯಿತು ಮತ್ತು ಅದರ ಜಿಡಿಪಿಗೆ ಉದ್ಯಮದ ಕೊಡುಗೆ ಶೇ 17 ರಿಂದ ಶೇ 36. 6 ಕ್ಕೆ ಏರಿಕೆ ಆಯಿತು. ಸುಮಾರು ಒಂದು ತಿಂಗಳ ಹಿಂದೆ, ಅಭಿವೃದ್ಧಿ ನೀತಿಯ ಕುರಿತ ವಿಶ್ವಸಂಸ್ಥೆ ಸಮಿತಿ ಬಾಂಗ್ಲಾದೇಶವನ್ನು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಿಂದ ತೆಗೆದುಹಾಕಲು ಮುಂದಾಗಿದೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಶಿಫಾರಸು ಮಾಡಿದೆ. ಶಿಫಾರಸನ್ನು ಅಂಗೀಕರಿಸಿದರೆ, ಬಾಂಗ್ಲಾದೇಶವು ಸುಂಕ ಮತ್ತು ರಫ್ತು ಕೋಟಾಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಂದುವರಿದ ದೇಶಗಳೊಂದಿಗೆ ವ್ಯಾಪಾರ ನಡೆಸಲು ಸಾಧ್ಯವಾಗುತ್ತದೆ.
ಯಾವುದೇ ಸುಂಕ ಇಲ್ಲದೆ, ಚೀನಾಕ್ಕೆ ಶೇ 97ರಷ್ಟು ಉತ್ಪನ್ನಗಳನ್ನು ರಫ್ತು ಮಾಡಲು ಬಾಂಗ್ಲಾದೇಶಕ್ಕೆ ಅನುಮತಿ ನೀಡಲಾಗಿದೆ. ಈ ಆದ್ಯತೆಯ ವ್ಯವಹಾರದಿಂದಾಗಿ ಬಾಂಗ್ಲಾದೇಶಕ್ಕೆ 140 ಅಮೆರಿಕನ್ ಡಾಲರ್ ಗಳಿಸಲು ಸಾಧ್ಯ ಆಗುತ್ತದೆ ಎಂದು ಚೀನಾ ಹೇಳಿದೆ.
ಚೀನಾ, ಭಾರತವನ್ನು ಸುತ್ತುವರೆದಿರುವ ಎಲ್ಲಾ ದೇಶಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ, ಬೆಲ್ಟ್ ಮತ್ತು ರಸ್ತೆ ಯೋಜನೆ ( ಬಿ ಆರ್ ಐ ) ಅಡಿಯಲ್ಲಿ ಬೀಜಿಂಗ್ ಬಾಂಗ್ಲಾದೇಶವನ್ನೂ ಬಿಟ್ಟಿಲ್ಲ. 'ಲುಕ್ ಈಸ್ಟ್' ನೀತಿಗೆ ಪ್ರಧಾನಿ ಮೋದಿ ಹಲವಾರು ಸುಧಾರಣೆಗಳನ್ನು ಮಾಡಿದ್ದಾರೆ . ಜೊತೆಗೆ 'ಆಕ್ಟ್ ಈಸ್ಟ್' ನೀತಿಯನ್ನು ಕೈಗೆತ್ತಿಕೊಂಡಿದ್ದಾರೆ . ಅವರು ಬಾಂಗ್ಲಾದೇಶದೊಂದಿಗಿನ ಸಂಬಂಧಗಳಿಗೆ ಹೊಸ ದೆಸೆ ನೀಡುವ ಹಲವಾರು ಯೋಜನೆಗಳನ್ನು ಪ್ರಾರಂಭ ಮಾಡಿದ್ದಾರೆ. ಕೋವಿಡ್ ಲಸಿಕೆ ರಫ್ತು ಮಾಡುವ ವಿಚಾರದಲ್ಲಿ ಭಾರತ ಬಾಂಗ್ಲಾದೇಶಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಢಾಕಾ ಜೊತೆಗಿನ ಸಂಬಂಧವನ್ನು ಬಲಪಡಿಸುವ ಮೂಲಕ ತಾನು ಮ್ಯಾನ್ಮಾರ್, ಥಾಯ್ಲೆಂಡ್, ಕಾಂಬೋಡಿಯಾ, ಲಾವೋಸ್ ಹಾಗೂ ವಿಯೆಟ್ನಾಂಗಳೊಂದಿಗಿನ ಸಂಬಂಧವನ್ನು ಬಲಪಡಿಸಿಕೊಳ್ಳಬಹುದು ಎಂಬ ಅಂಶವನ್ನು ಭಾರತ ಕಡೆಗಣಿಸಿಲ್ಲ. ವಿಶ್ವದ ಚುರುಕಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ವ್ಯವಸ್ಥೆಗಳಲ್ಲಿ ಒಂದು ಎಂದು ಕರೆಯಲಾದ ಬಾಂಗ್ಲಾದೇಶದೊಂದಿಗಿನ ಸಂಬಂಧವನ್ನು ಬಲಪಡಿಸುವುದು ಭಾರತಕ್ಕೂ ಪ್ರಯೋಜನಕಾರಿ ಆಗಲಿದೆ.