ನವದೆಹಲಿ: ಕೆಲವು ಗಂಟೆಗಳ ಅಂತರದಲ್ಲಿ ಎರಡು ವಿಮಾನಗಳಲ್ಲಿ ಇಂಜಿನ್ ದೋಷ ಕಂಡು ಬಂದು, ತಕ್ಷಣ ಸೇಪ್ ಲ್ಯಾಂಡಿಂಗ್ ಮಾಡಿದ ಘಟನೆ ವರದಿಯಾಗಿದೆ. ಮಂಗಳವಾರ ಕೋಲ್ಕತ್ತಾದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಇಂಡಿಗೋ ವಿಮಾನದಲ್ಲಿ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ತಕ್ಷಣವೇ ಮಾಹಿತಿ ತಿಳಿದಿ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿ ಆಗುವ ಭಾರಿ ಅನಾಹುತವೊಂದನ್ನು ತಡೆದಿದ್ದಾರೆ.
ಎರಡೂ ವಿಮಾನಗಳು ಸುರಕ್ಷಿತವಾಗಿ ಲ್ಯಾಂಡಿಂಗ್ ಆಗುವ ಮೂಲಕ ಪ್ರಯಾಣಿಕರನ್ನ ಸುರಕ್ಷಿತವಾಗಿ ನೋಡಿಕೊಳ್ಳಲಾಗಿದೆ. ಇದರಿಂದಾಗಿ ಪ್ರಯಾಣಿಕರು ಕೂಡಾ ನಿಟ್ಟುಸಿರು ಬಿಟ್ಟಿದ್ದಾರೆ.
ಈ ವಿಮಾನಗಳು ಎಲ್ಲಿಂದ ಎಲ್ಲಿಗೆ ಸಂಚರಿಸುತ್ತಿದ್ದವು: ಇನ್ನು ಮಧುರೈ - ಮುಂಬೈ ವಿಮಾನದಲ್ಲೂ ಇಂತಹದೇ ಘಟನೆ ವರದಿಯಾಗಿದೆ. ಇದು ಸಹ ಇಂಡಿಗೋ ವಿಮಾನ ಎಂದು ತಿಳಿದು ಬಂದಿದೆ. “ಇಂಜಿನ್ 2 ದಲ್ಲಿ ದೋಷ ಇದೆ ಎಂಬುದು ಕಂಡುಬಂದ ಎಚ್ಚರಿಕೆ ಸಂದೇಶ ಬಂದಿದೆ. ಈ ಎಚ್ಚರಿಕೆ ಸಂದೇಶದಂತೆ ಇಂಜಿನ್ 2 ಅನ್ನು ಸ್ಥಗಿತಗೊಳಿಸಲಾಗಿದೆ. ಆ ಬಳಿಕ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ ಎಂದು ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ ಡಿಜಿಸಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೇಳಿದ್ದೇನು?: ಇಂಡಿಗೋ ವಿಮಾನವು ಮಧುರೈನಿಂದ ಮುಂಬೈ ಹಾರಾಟ ನಡೆಸುತ್ತಿರುವಾಗ ಇಂತಹ ತಾಂತ್ರಿಕ ದೋಷ ಕಂಡು ಬಂದಿತ್ತು ಎಂದು ಘಟನೆಯ ಬಳಿಕ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಮುಂಬೈನಲ್ಲಿ ಇಂಡಿಗೋ ವಿಮಾನ ಲ್ಯಾಂಡ್ ಆಗುವ ಮುನ್ನ ತಾಂತ್ರಿಕ ದೋಷ ಇತ್ತು ಎಂಬುದು ಗೊತ್ತಾಗಿದೆ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇಂಡಿಗೋ ಏರ್ಲೈನ್ಸ್ನಿಂದಲೂ ಹೇಳಿಕೆ ಬಿಡುಗಡೆ: ’’ ವಿಮಾನದ ಇಂಜಿನ್ನಲ್ಲಿ ದೋಷ ಕಂಡು ಬಂದ ತಕ್ಷಣ ಪೈಲಟ್ ಮುಂಬೈನಲ್ಲಿ ವಿಮಾನವನ್ನು ತುರ್ತಾಗಿ ಇಳಿಸಲು ಆದ್ಯತೆ ನೀಡಿದರು. ವಿಮಾನವನ್ನು ಮುಂಬೈನಲ್ಲೇ ಇರಿಸಲಾಗಿದ್ದು, ಅಗತ್ಯ ನಿರ್ವಹಣೆಯ ನಂತರ ಮತ್ತೆ ಕಾರ್ಯಾಚರಣೆಗೆ ಬಳಕೆ ಮಾಡಿಕೊಳ್ಳಲಾಗುವುದು. ಈ ಘಟನೆಯಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಇಂಡಿಗೋ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಈ ಎರಡೂ ಇಂಡಿಗೋ ವಿಮಾನಗಳು ಪ್ರಾಟ್ ಮತ್ತು ವಿಟ್ನಿ ಎಂಜಿನ್‌ಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದವು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. (ANI)
ಇದನ್ನು ಓದಿ: ನಾಗ್ಪುರದಲ್ಲಿ ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್: ಅನಾರೋಗ್ಯಕ್ಕೆ ಒಳಗಾದ ಪ್ರಯಾಣಿಕ, ಆಸ್ಪತ್ರೆಯಲ್ಲಿ ನಿಧನ