ETV Bharat / bharat

ಪಾಕ್​ ಸೇರಿ ಕೋವಿಡ್​ ನಿರ್ವಹಣೆ ಕುರಿತು ಪಿಎಂ ಮೋದಿ ಪ್ರಸ್ತಾಪಗಳನ್ನು ಶ್ಲಾಘಿಸಿದ ನೆರೆಯ ರಾಷ್ಟ್ರಗಳು - Prime Minister Narendra Modi

ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ನೆರಯ ರಾಷ್ಟ್ರಗಳೊಂದಿಗೆ ನಡೆದ ವರ್ಚುಯಲ್ ಕಾರ್ಯಾಗಾರದಲ್ಲಿ ಕೊರೊನಾ ಸಾಂಕ್ರಾಮಿಕ ನಿರ್ವಹಣೆ ಕುರಿತು ಪ್ರಧಾನಿ ಮೋದಿ ಐದು ಪ್ರಸ್ತಾಪಗಳನ್ನಿಟ್ಟಿದ್ದಾರೆ.

Prime Minister Narendra Modi
ಪಿಎಂ ಮೋದಿ
author img

By

Published : Feb 19, 2021, 12:19 PM IST

ನವದೆಹಲಿ: ಕೋವಿಡ್ -19 ನಿರ್ವಹಣೆ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಐದು ಪ್ರಸ್ತಾಪಗಳನ್ನು ಪಾಕಿಸ್ತಾನ ಸೇರಿದಂತೆ ಭಾರತದ ನೆರೆಯ ರಾಷ್ಟ್ರಗಳು ಬೆಂಬಲಿಸಿವೆ.

ಗುರುವಾರ ನಡೆದ 'ಕೋವಿಡ್ -19 ನಿರ್ವಹಣೆ: ಅನುಭವ, ಉತ್ತಮ ಅಭ್ಯಾಸಗಳು ಮತ್ತು ದೂರದೃಷ್ಟಿ' ಎಂಬ ವಿಷಯದ ಮೇಲೆ ನಡೆದ ವರ್ಚುಯಲ್ ಕಾರ್ಯಾಗಾರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಐದು ಪ್ರಸ್ತಾಪಗಳನ್ನಿಟ್ಟಿದ್ದಾರೆ.

1.ವಿಶೇಷ ವೀಸಾ ಯೋಜನೆ: ವೈದ್ಯರು ಮತ್ತು ದಾದಿಯರಿಗಾಗಿ ವಿಶೇಷ ವೀಸಾ ಯೋಜನೆ ರಚಿಸಲು ಸಲಹೆ ನೀಡಿದರು. ಆರೋಗ್ಯ ತುರ್ತು ಪರಿಸ್ಥಿತಿಗಳಲ್ಲಿ ಅವರು ವೇಗವಾಗಿ ಅಗತ್ಯವಿರುವ ಪ್ರದೇಶಗಳಿಗೆ ಪ್ರಯಾಣಿಸಬಹುದು ಎಂದು ಮೋದಿ ಹೇಳಿದ್ದಾರೆ.

2.ಪ್ರಾದೇಶಿಕ ವಾಯು ಆ್ಯಂಬುಲೆನ್ಸ್​​​​​​ ಒಪ್ಪಂದ: ವೈದ್ಯಕೀಯ ಪರಿಸ್ಥಿತಿಗಳಿಗಾಗಿ ನಮ್ಮ ನಾಗರಿಕ ವಿಮಾನಯಾನ ಸಚಿವಾಲಯಗಳು 'ಪ್ರಾದೇಶಿಕ ವಾಯು ಆ್ಯಂಬುಲೆನ್ಸ್ ಒಪ್ಪಂದ'ವನ್ನು ಸಂಘಟಿಸಬಹುದೆಂಬ ಸಲಹೆಯನ್ನೂ ಪ್ರಧಾನಿ ಮೋದಿ ನೀಡಿದ್ದಾರೆ.

3.ಪ್ರಾದೇಶಿಕ ವೇದಿಕೆ: ಜನರಿಂದ ಕೊರೊನಾ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ ಅಧ್ಯಯನ ಮಾಡಲು ಪ್ರಾದೇಶಿಕ ವೇದಿಕೆ ರಚಿಸಬಹುದು ಎಂದು ಪಿಎಂ ಪ್ರಸ್ತಾಪ ಮಂಡಿಸಿದ್ದಾರೆ.

4.ಪ್ರಾದೇಶಿಕ ಜಾಲ: ಭವಿಷ್ಯದಲ್ಲಿ ಬರುವ ಸಾಂಕ್ರಾಮಿಕ ರೋಗಗಳನ್ನು ತಡೆಯಲು ತಂತ್ರಜ್ಞಾನ ಆಧಾರಿತ ರೋಗಶಾಸ್ತ್ರವನ್ನು ಉತ್ತೇಜಿಸಲು ಪ್ರಾದೇಶಿಕ ಜಾಲವೊಂದನ್ನು ರಚಿಸಲು ಸಲಹೆ ನೀಡಿದ್ದಾರೆ.

5. ಸಾರ್ವಜನಿಕ ಆರೋಗ್ಯ ನೀತಿ, ಯೋಜನೆಗಳ ವಿನಿಮಯ: ಆಯಾ ದೇಶಗಳು ಅಲ್ಲಿನ ಸಾರ್ವಜನಿಕ ಆರೋಗ್ಯ ನೀತಿ ಹಾಗೂ ಯೋಜನೆಗಳನ್ನು ಇತರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಬಹುದೆಂದು ಮೋದಿ ಕಾರ್ಯಾಗಾರದಲ್ಲಿ ತಿಳಿಸಿದ್ದಾರೆ.

ಕಾರ್ಯಾಗಾರದಲ್ಲಿ ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ರಾಷ್ಟ್ರಗಳು ಭಾಗವಹಿಸಿದ್ದು, ಎಲ್ಲರೂ ಪ್ರಧಾನಿ ಮೋದಿಯ ಪ್ರಸ್ತಾಪಗಳನ್ನು ಶ್ಲಾಘಿಸಿ, ಇದಕ್ಕೆ ಸಹಕಾರ ನೀಡುವ ವಿಶ್ವಾಸ ವ್ಯಕ್ತಪಡಿಸಿವೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.