ಜಬಲ್ಪುರ್( ಮಧ್ಯಪ್ರದೇಶ): ವಜ್ರ ವೈಡೂರ್ಯ ಮತ್ತು ಪ್ರತಿಷ್ಠಿತ ವ್ಯಕ್ತಿಗಳ ರಕ್ಷಣೆಗೆ ಬಿಗಿ ಭದ್ರತೆ ನೀಡುವ ಕಾಲದಲ್ಲಿ ಮಾವಿನ ಹಣ್ಣಿಗೂ ಝಡ್ ಫ್ಲಸ್ ಸೆಕ್ಯೂರಿಟಿ ನೀಡುವಂತಾಗಿದ್ದು, ರೈತನೊರ್ವ ಬೆಳೆದ ದುಬಾರಿ ಮಾವಿನ ಹಣ್ಣಿನ ರಕ್ಷಣೆಗೆ ಪ್ರತಿ ತಿಂಗಳು 50,000 ರೂ. ಖರ್ಚು ಮಾಡಬೇಕಾಗಿದೆ.
ಹೌದು, ವಿಚಿತ್ರ ಎನಿಸಿದರು ಇದು ಸತ್ಯ. ನಗರದ ಚಾರ್ಗವಾನ್ ರಸ್ತೆಯಲ್ಲಿರುವ ಸಂಕಲ್ಪ ಸಿಂಗ್ ಪರಿಹಾರ್ ಎಂಬುವರಿಗೆ ಸೇರಿದ ಸಂಕಲ್ಪ ಪರಿಹಾರ್ ಉದ್ಯಾನದಲ್ಲಿ ಜಪಾನಿನ 'TAIYO NO TAMAGO' (’’ತಿಯೋ ನೋ ತಮಂಗ’’) ಎಂಬ ತಳಿಯ ಎಂಟು ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯಲಾಗಿದೆ.
ಒಂದು ಕೆ.ಜಿ.ಗೆ 2 ಲಕ್ಷ ರೂ. ಬೆಲೆಬಾಳುವ ಮಾವಿನ ಹಣ್ಣಿಗೆ ಬಂಗಾರಕ್ಕಿಂತಲೂ ಹೆಚ್ಚು ಬೇಡಿಕೆ. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೆ ಕಳ್ಳಕಾಕರ ಹಾವಳಿ ಹೆಚ್ಚಾಗಿದ್ದು, ದಿನದ 24 ಗಂಟೆಗಳ ಕಾಲ ಭದ್ರತೆ ಒದಗಿಸಬೇಕಾಗಿದೆ.
ವಿಭಿನ್ನ ಪಾಳೆಯಲ್ಲಿ ಶ್ವಾನಗಳ ಜೊತೆ ಕಾವಲುಗಾರರ ಜಮೀನನ್ನು ಸುತ್ತುತ್ತಿರುತ್ತಾರೆ. ಅಷ್ಟೇ ಅಲ್ಲದೆ ಜಮೀನಿನ ಮೂಲೆ ಮೂಲೆಗಳಲ್ಲಿ 9 ನಾಯಿಗಳನ್ನು ನಿಯೋಜನೆ ಮಾಡಲಾಗಿದ್ದು, ಯಾರೇ ಜಮೀನು ಪ್ರವೇಶ ಮಾಡಿದ್ರೆ ನಾಯಿಗಳು ಬೊಗಳುವ ಮೂಲಕ ಎಚ್ಚರಿಕೆ ಸಂದೇಶ ನೀಡುತ್ತವೆ. ಅಲ್ಲದೇ ರಾತ್ರಿಹೊತ್ತಿನಲ್ಲಿಯೂ ಸಹ ಎಚ್ಚರವಹಿಸಬೇಕು. ಕಳೆದ ವರ್ಷ ಮಾವಿನಹಣ್ಣನ್ನು ಕದಿಯಲಾಗಿತ್ತು. ಅದಕ್ಕೆ ಈ ವರ್ಷ ಭದ್ರತೆ ಹೆಚ್ಚಿಸಲಾಗಿದೆ ಎಂದು ಜಮೀನು ಮಾಲೀಕ ಪಾರಿಹಾರ್ ಹೇಳುತ್ತಾರೆ.
'ಸೂರ್ಯನ ಮೊಟ್ಟೆ'ಎಂಬ ವಿಶೇಷ ಹಣ್ಣು
ಈ ಮಾವಿನಹಣ್ಣುಗಳು ಜಪಾನ್‌ನಲ್ಲಿ ಕಂಡು ಬರುತ್ತವೆ, ಇದನ್ನು TAIYO NO TAMAGO' ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಇದಕ್ಕೆ 'ಸೂರ್ಯನ ಮೊಟ್ಟೆ' ಎಂದೂ ಕರೆಯುತ್ತಾರೆ.
ಜಬಲ್ಪುರದ ಚಾರ್ಗವಾನ್ ರಸ್ತೆಯಲ್ಲಿ ಸಂಕಲ್ಪ ಪರಿಹಾರ್ ಮತ್ತು ರಾಣಿ ಪರಿಹಾರ್ ಎಂಬ ಉದ್ಯಾನದಲ್ಲಿ 14 ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯಲಾಗಿದ್ದು, ಅವುಗಳ ಜೊತೆಯಲ್ಲಿ ಈ 'TAIYO NO TAMAGO' ಎಂಬ ಅತ್ಯಂತ ದುಬಾರಿ ಮಾವಿನ ಕೆಲವು ಮರಗಳೂ ಇವೆ. ಈ ಋತುವಿನಲ್ಲಿ ಹೆಚ್ಚಾಗಿ ಈ ಹಣ್ಣು ಬೆಳೆಯುತ್ತದೆ.
ಸುಮಾರು 1 ಕೆ.ಜಿ ತೂಕದ ಈ ಮಾವು ಜುಲೈ 15 ರ ಸುಮಾರಿಗೆ ಸಂಪೂರ್ಣವಾಗಿ ಮಾಗುತ್ತದೆ. ಅಲ್ಲಿಯವರೆಗೆ ಅದರ ಸುರಕ್ಷತೆ ಬಹಳ ಮುಖ್ಯ. ಇತ್ತೀಚೆಗೆ, ಈಟಿವಿ ಭಾರತ್ ವಿಶೇಷ ಮಾವಿನ ಹಣ್ಣಿನ ಕುರಿತು ಸುದ್ದಿ ಪ್ರಸಾರ ಮಾಡಿತ್ತು.
ವರದಿ ಪ್ರಸಾರದ ಬೆನ್ನಲೆ ಮಾವಿನ ವಿಚಾರಣೆ ಹೆಚ್ಚಾಗಿದೆ. ಮುಂಬೈ, ಹೈದರಾಬಾದ್, ಉತ್ತರಾಖಂಡದ ಹೊರತಾಗಿ, ಮಾವಿನ ಮಾಹಿತಿಯ ಬಗ್ಗೆ ವಿದೇಶದಿಂದಲೂ ಕರೆಗಳು ಬರುತ್ತಿವೆ. ಹೆಚ್ಚು ಚರ್ಚೆಯಲ್ಲಿರುವುದರಿಂದ ಈ ಮಾವನ್ನು ರಕ್ಷಿಸುವುದು ಕಷ್ಟಕರವಾಗುತ್ತಿದೆ ಎಂದು ಸಂಕಲ್ಪ ಪರಿಹಾರ್ ಹೇಳುತ್ತಾರೆ.