ETV Bharat / bharat

ಕೊಚ್ಚಿಯಲ್ಲಿ ಸಿದ್ಧವಾಗ್ತಿದೆ ಸ್ವದೇಶಿ ಏರ್​​ಕ್ರಾಫ್ಟ್ ಕ್ಯಾರಿಯರ್: ಶೀಘ್ರದಲ್ಲೇ ಪ್ರಯೋಗ - INS Vikrant latest news

ಸ್ವದೇಶಿ ಏರ್​ಕ್ರಾಫ್ಟ್ ಕ್ಯಾರಿಯರ್ ದೇಶದ ಹೆಮ್ಮೆ ಮತ್ತು ಆತ್ಮನಿರ್ಭರ ಭಾರತಕ್ಕೆ ಅತ್ಯುತ್ತಮ ಉದಾಹರಣೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದರು.

India's Indigenous Aircraft Carrier gets ready in Kochi; sea trials soon
ಕೊಚ್ಚಿಯಲ್ಲಿ ಸಿದ್ಧವಾಗ್ತಿದೆ ಸ್ವದೇಶಿ ಏರ್​​ಕ್ರಾಫ್ಟ್ ಕ್ಯಾರಿಯರ್: ಶೀಘ್ರದಲ್ಲೇ ಪ್ರಯೋಗ
author img

By

Published : Jun 26, 2021, 2:25 PM IST

ಕೊಚ್ಚಿ, ಕೇರಳ: ಭಾರತದ ಮೊದಲ ಸ್ವದೇಶಿ ಏರ್​ಕ್ರಾಫ್ಟ್ ಕ್ಯಾರಿಯರ್​ ಸಿದ್ಧವಾಗುತ್ತಿದ್ದು, ಶೀಘ್ರದಲ್ಲಿ ಸಮುದ್ರದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ. ಕೇರಳದ ಕೊಚ್ಚಿ ನೌಕಾನೆಲೆಯಲ್ಲಿ ಏರ್​ಕ್ರಾಫ್ಟ್ ಕ್ಯಾರಿಯರ್​ ನಿರ್ಮಾಣ ಕೊನೆಯ ಹಂತದಲ್ಲಿದೆ.

ಸ್ವದೇಶಿ ಏರ್​ಕ್ರಾಫ್ಟ್ ಕ್ಯಾರಿಯರ್​ ಅತ್ಯಂತ ಸಂಕೀರ್ಣವಾಗಿದ್ದು, ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಒಮ್ಮೆಗೆ ಸುಮಾರು 30 ಏರ್​ಕ್ರಾಫ್ಟ್​ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ನೌಕೆಗೆ ಇರಲಿದೆ.

India's Indigenous Aircraft Carrier gets ready in Kochi; sea trials soon
ಕೊಚ್ಚಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಈ ನೌಕೆ ಸುಮಾರು 262 ಮೀಟರ್ ಉದ್ದವಿದ್ದು, 28 ನಾಟಿಕಲ್ ಮೈಲುಗಳ ವೇಗದಲ್ಲಿ ಚಲಿಸಬಲ್ಲದಾಗಿದೆ. ಇಷ್ಟು ಮಾತ್ರವಲ್ಲದೇ ಸುಮಾರು 1500 ನೌಕಾಪಡೆಯ ಸಿಬ್ಬಂದಿಗೆ ವಸತಿ ಒದಗಿಸುವ ಸಾಮರ್ಥ್ಯ ಈ ನೌಕೆಯಲ್ಲಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಸ್ವದೇಶಿ ಏರ್​ಕ್ರಾಫ್ಟ್ ಕ್ಯಾರಿಯರ್ ನಿರ್ಮಾಣವಾಗುತ್ತಿರುವ ಕೊಚ್ಚಿನ್ ಶಿಪ್​ಯಾರ್ಡ್​ಗೆ ಭೇಟಿ ನೀಡಿ, ಈ ಏರ್​ಕ್ರಾಫ್ಟ್ ಕ್ಯಾರಿಯರ್ ದೇಶದ ಹೆಮ್ಮೆ ಮತ್ತು ಆತ್ಮ ನಿರ್ಭರ ಭಾರತಕ್ಕೆ ಅತ್ಯುತ್ತಮ ಉದಾಹರಣೆ ಎಂದು ಬಣ್ಣಿಸಿದರು.

ಇದನ್ನೂ ಓದಿ: COVID 3rd Wave: ಐಸಿಎಂಆರ್​ನಿಂದ ಗುಡ್ ​ನ್ಯೂಸ್

ಪ್ರಸ್ತುತ ತಯಾರಾಗುತ್ತಿರುವ ಸ್ವದೇಶಿ ಏರ್​ಕ್ರಾಫ್ಟ್ ಕ್ಯಾರಿಯರ್ ಅನ್ನು ಐಎನ್​ಎಸ್ ವಿಕ್ರಾಂತ್ ಎಂದು ನಾಮಕರಣ ಮಾಡಲಿದ್ದು, ಮುಂದಿನ ವರ್ಷ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.