ETV Bharat / bharat

ಭಾರತದ ಜಿ20 ಅಧ್ಯಕ್ಷತೆ ಆರಂಭ: 100 ಸ್ಮಾರಕಗಳಿಗೆ ಝಗಮಗಿಸುವ ದೀಪಾಲಂಕಾರ - G 20 logo

ಇಂದಿನಿಂದ ಭಾರತವು ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ. ಆಜಾದಿ ಕಾ ಅಮೃತ ಮಹೋತ್ಸವದ ವರ್ಷದಲ್ಲಿ ಮಹತ್ವದ ಶೃಂಗಸಭೆಯು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ 1 ರಿಂದ 7 ರವರೆಗೆ ದೇಶದ 100 ಸ್ಮಾರಕಗಳು ದೀಪಾಲಂಕಾರದಿಂದ ಝಗಮಗಿಸಲಿವೆ.

indias g20 presidency
ಜಿ20
author img

By

Published : Dec 1, 2022, 8:43 AM IST

ನವ ದೆಹಲಿ: ಅಂತಾರಾಷ್ಟ್ರೀಯ ಆರ್ಥಿಕ ಸಹಕಾರದ ಪ್ರಧಾನ ವೇದಿಕೆಯಾದ ಜಿ20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಇಂದಿನಿಂದ ಭಾರತ ಅಧಿಕೃತವಾಗಿ ವಹಿಸಿಕೊಳ್ಳಲಿದೆ. ಇದರ ಜೊತೆಗೆ, ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣಗಳೂ ಸೇರಿದಂತೆ ಜಿ20 ಲಾಂಛನವನ್ನು ಹೊಂದಿರುವ ದೇಶದ 100 ಸ್ಮಾರಕಗಳು ಡಿಸೆಂಬರ್ 1 ರಿಂದ 7 ರವರೆಗೆ ಝಗಮಗಿಸಲಿವೆ.

ಶ್ರೀನಗರದ ಶಂಕರಾಚಾರ್ಯ ದೇವಸ್ಥಾನ, ದೆಹಲಿಯ ಕೆಂಪು ಕೋಟೆ, ತಂಜಾವೂರಿನ ಚೋಳರ ದೇವಸ್ಥಾನ, ಹುಮಾಯೂನ್ ಸಮಾಧಿ, ಗುಜರಾತ್‌ನ ಮೊಧೇರಾ ಸೂರ್ಯ ದೇವಾಲಯ, ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯ, ಬಿಹಾರದ ಶೇರ್ ಶಾ ಸೂರಿಯ ಸಮಾಧಿ ಸೇರಿದಂತೆ ನೂರು ಸ್ಮಾರಕಗಳು ಪಟ್ಟಿಯಲ್ಲಿದ್ದು, ಏಳು ದಿನಗಳ ಕಾಲ ಪ್ರಕಾಶಿಸಲ್ಪಡುತ್ತವೆ.

ಈ ವರ್ಷದ ಅಧ್ಯಕ್ಷೀಯ ಅವಧಿಯಲ್ಲಿ ಭಾರತವು 50 ಕ್ಕೂ ಹೆಚ್ಚು ನಗರಗಳು ಮತ್ತು 32 ವಿವಿಧ ವಲಯಗಳಲ್ಲಿ ರಾಷ್ಟ್ರಾದ್ಯಂತ 200 ಸಭೆಗಳನ್ನು ಆಯೋಜಿಸಲಿದೆ. ಮುಂದಿನ ವರ್ಷದ ಶೃಂಗಸಭೆಯಲ್ಲಿ ಸುಸ್ಥಿರ ಪರಿಸರ ಅಭಿವೃದ್ಧಿಗಾಗಿ ಕೈಗೆಟುಕುವ ತಂತ್ರಜ್ಞಾನ ಪೂರೈಕೆಯ ಉದ್ದೇಶವನ್ನು ಒಳಗೊಂಡಿವೆ. ಅಷ್ಟೇ ಅಲ್ಲದೇ, ದೇಶದ ಡಿಜಿಟಲ್ ರೂಪಾಂತರವನ್ನು ಜಗತ್ತಿಗೆ ತೋರಿಸುತ್ತದೆ.

ಇದನ್ನೂ ಓದಿ: 'ಇದು ಯದ್ಧದ ಯುಗವಲ್ಲ' ಮೋದಿ G20 ಜಂಟಿ ಘೋಷಣೆಗೆ ಜೋ ಬೈಡನ್​ ಶ್ಲಾಘನೆ

G-20 ಅನ್ನು 1999 ರಲ್ಲಿ ಏಷ್ಯಾದ ಆರ್ಥಿಕ ಬಿಕ್ಕಟ್ಟಿನ ನಂತರ ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳಿಗೆ ಜಾಗತಿಕ, ಆರ್ಥಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಚರ್ಚಿಸಲು ವೇದಿಕೆಯಾಗಿ ಸ್ಥಾಪಿಸಲಾಯಿತು. ಗ್ರೂಪ್ ಆಫ್ ಟ್ವೆಂಟಿಯು (G-20) ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ತುರ್ಕಿ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್ ಅನ್ನು ಒಳಗೊಂಡಿದೆ.

G-20 ಸದಸ್ಯರು ಜಾಗತಿಕ GDPಯ ಸುಮಾರು 85 ಪ್ರತಿಶತವನ್ನು ಪ್ರತಿನಿಧಿಸುತ್ತಾರೆ. ಶೃಂಗಸಭೆಯು ಜಾಗತಿಕ ಆರ್ಥಿಕ ಸ್ಥಿರತೆ, ಸುಸ್ಥಿರ ಬೆಳವಣಿಗೆಯನ್ನು ಸಾಧಿಸಲು ಅದರ ಸದಸ್ಯರ ನಡುವೆ ಸಮನ್ವಯ ಮೂಡಿಸಲು ಸಹಕಾರಿ. ಜೊತೆಗೆ ಭವಿಷ್ಯದ ಆರ್ಥಿಕ ಬಿಕ್ಕಟ್ಟುಗಳನ್ನು ತಡೆಗಟ್ಟಲು ಹಾಗೂ ಹಣಕಾಸಿನ ಮುನ್ನೆಚ್ಚರಿಕಾ ಕ್ರಮಗಳನ್ನು ಉತ್ತೇಜಿಸುತ್ತದೆ. ಭಾರತ ಡಿಸೆಂಬರ್ 1, 2022 ರಿಂದ ಒಂದು ವರ್ಷದವರೆಗೆ G20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.

ಇದನ್ನೂ ಓದಿ: ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ಹಸ್ತಾಂತರಿಸಿದ ಇಂಡೋನೇಷ್ಯಾ: ಒಂದೇ ಭೂಮಿ, ಕುಟುಂಬ, ಭವಿಷ್ಯದ ಪರಿಕಲ್ಪನೆ ನೀಡಿದ ಮೋದಿ

ಭಾರತವು ತನ್ನ ಅಧ್ಯಕ್ಷತೆಯಲ್ಲಿ 2023 ರಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ಜಿ-20 ನಾಯಕರ ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 16ರಂದು ಬಾಲಿಯಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಅವರಿಂದ ಭಾರತದ ಜಿ20 ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಸ್ವೀಕರಿಸಿದ್ದರು. ಶೃಂಗದ ಸಮಾರೋಪದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಜಿ 20 ಅಧ್ಯಕ್ಷ ಸ್ಥಾನವು ಎಲ್ಲರನ್ನೂ ಒಳಗೊಳ್ಳುವ, ಮಹತ್ವಾಕಾಂಕ್ಷೆಯ, ನಿರ್ಣಾಯಕ ಮತ್ತು ಕಾರ್ಯ ಆಧಾರಿತವಾಗಿರುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ಜಿ20 ಲೋಗೋದಲ್ಲಿರುವ ಕಮಲ ನಮ್ಮ ಸಂಪ್ರದಾಯದ ಗುರುತು: ರಾಜನಾಥ್ ಸಿಂಗ್

ಜಿ20 ಲೋಗೋ ಭಾರತದ ರಾಷ್ಟ್ರಧ್ವಜದ ಬಣ್ಣಗಳಿಂದ ಕೂಡಿದೆ. ಸವಾಲುಗಳ ನಡುವೆ ಬೆಳವಣಿಗೆಯನ್ನು ಪ್ರತಿಬಿಂಬಿಸುವ, ಭಾರತದ ರಾಷ್ಟ್ರೀಯ ಪುಷ್ಪವಾದ ಕಮಲದ ಏಳು ದಳಗಳ ಮೇಲೆ ವಿಶ್ವವನ್ನು ಚಿತ್ರಿಸಿ, ಅದರಲ್ಲಿ G20 ಎಂದು ಇಂಗ್ಲಿಷ್‌ನಲ್ಲಿ ಬರೆದಿರುವ ಲೋಗೋ ಇದಾಗಿದೆ. ಜಿ20 ಲೋಗೋದ ಕೆಳಗೆ ದೇವನಾಗರಿ ಲಿಪಿಯಲ್ಲಿ ಭಾರತ್ ಎಂದು ಬರೆಯಲಾಗಿದೆ. 'ವಸುಧೈವ ಕುಟುಂಬಕಂ' ಎಂಬ ಧ್ಯೇಯವಾಕ್ಯದ ಜತೆ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬುದು ಭಾರತದ ಜಿ20 ಅಧ್ಯಕ್ಷತೆಯ ಥೀಮ್ ಆಗಿದೆ. ಈ ಥೀಮ್ ಮಾನವ, ಪ್ರಾಣಿ, ಸಸ್ಯ ಮತ್ತು ಸೂಕ್ಷ್ಮಜೀವಿಗಳು ಮತ್ತು ಭೂಮಿಯ ಮೇಲೆ ಮತ್ತು ವಿಶಾಲ ವಿಶ್ವದಲ್ಲಿ ಅವುಗಳ ಪರಸ್ಪರ ಸಂಬಂಧ ಸೇರಿದಂತೆ ಎಲ್ಲಾ ಜೀವನದ ಮೌಲ್ಯವನ್ನು ದೃಢೀಕರಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.