ETV Bharat / bharat

ಕ್ರಯೋಜನಿಕ್​​​ ಇಂಜಿನ್​​​ ’ಧವನ್​’​ ಪರೀಕ್ಷೆ ಯಶಸ್ವಿ.. ಇದು ಮೊದಲ ಖಾಸಗಿ ಇಂಜಿನ್​​ - ನಾಗ್ಪುರದಲ್ಲಿ ಮೊದಲ ಖಾಸಗಿ ಕ್ರಯೋಜನಿಕ್​ ಇಂಜಿನ್​ ಯಶಸ್ವಿ ಪ್ರಯೋಗ

ನಾಗ್ಪುರದ ಬಜಾರ್‌ಗಾಂವ್‌ನಲ್ಲಿರುವ ಕಂಪನಿಯ ಆವರಣದಲ್ಲಿ ಈ ಕ್ರಯೋಜನಿಕ್​ ಇಂಜಿನ್​​​ ಧವನ್​-1 ಅನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಭಾರತದಲ್ಲಿ ಖಾಸಗಿಯಾಗಿ ನಿರ್ಮಿಸಲಾದ ಕ್ರಯೋಜೆನಿಕ್ ಇಂಜಿನ್ 'ಧವನ್-1' ಪರೀಕ್ಷೆ ಯಶಸ್ವಿ

author img

By

Published : Nov 27, 2021, 8:06 AM IST

Updated : Nov 27, 2021, 9:00 AM IST

ನಾಗ್ಪುರ: ಭಾರತದಲ್ಲಿ ಖಾಸಗಿಯಾಗಿ ನಿರ್ಮಿಸಲಾದ ಕ್ರಯೋಜನಿಕ್ ಇಂಜಿನ್ 'ಧವನ್-1' ಪರೀಕ್ಷೆ ಯಶಸ್ವಿಯಾಗಿ ಮಾಡಲಾಗಿದೆ. ದೇಶದ ಮೊದಲ ಖಾಸಗಿ ಕ್ರಯೋಜನಿಕ್​ ಇಂಜಿನ್​ ಪರೀಕ್ಷೆಯಾಗಿದೆ. ಧವನ್-1 ಎಂಬ ಹೆಸರಿನ ಈ ಇಂಜಿನ್​ ಅನ್ನು ಸಂಪೂರ್ಣವಾಗಿ ದೇಶದಲ್ಲೇ ತಯಾರಿಸಲಾಗಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಈ ಇಂಜಿನ್​ ಅಭಿವೃದ್ಧಿಪಡಿಸಿದೆ.

ಈ ಎಲ್‌ಎನ್‌ಜಿಯನ್ನು ಇಂಧನವಾಗಿ ಬಳಸಲಾಗುತ್ತಿದೆ. LNG ಬಳಕೆಯು ರಾಕೆಟ್ ಉಡಾವಣೆ ಮಾಡುವಾಗ ಪರಿಸರ ಹಾನಿ ಕಡಿಮೆ ಎಂಬುದು ಗಮನಾರ್ಹವಾಗಿದೆ. ಎಲ್​ಎನ್​ಜಿ ಬಳಕೆಯಿಂದ ಇಂಧನ ವೆಚ್ಚದಲ್ಲಿ ಶೇಕಡಾ 40 ರಷ್ಟು ಉಳಿತಾಯವಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಕ್ರಯೋಜೆನಿಕ್‌ ರಾಕೆಟ್‌ ಎಂಜಿನ್‌ ಅನ್ನು 3ಡಿ ಪ್ರಿಂಟಿಂಗ್‌ ಬಳಸಿ ಅಭಿವೃದ್ಧಿಪಡಿಸಲಾಗಿದ್ದು, ಶೇ.95ರಷ್ಟು ಉತ್ಪಾದನಾ ಅವಧಿ ಉಳಿತಾಯವಾಗಿದೆ. ಈ ಪ್ರಯೋಗದಿಂದಾಗಿ ಇಂಥ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿದ ಜಗತ್ತಿನ ಬೆರಳೆಣಿಕೆಯ ಕಂಪನಿಗಳಲ್ಲಿ ನಮ್ಮದೂ ಒಂದು ಎಂಬ ಹೆಗ್ಗಳಿಕೆ ಸಿಕ್ಕಿದೆ ಎಂದು ಸ್ಕೈರೂಟ್‌ ಏರೋಸ್ಪೇಸ್‌ ಹೇಳಿದೆ.

ಇದನ್ನೂ ಓದಿ:ಮುಂದಿನ ತಿಂಗಳ ಹೊತ್ತಿಗೆ ಟೊಮೆಟೊ ದರ ಇಳಿಕೆಯಾಗಲಿದೆ : ಯಾಕೆ ಗೊತ್ತಾ?

ನಾಗ್ಪುರದ ಬಜಾರ್‌ಗಾಂವ್‌ನಲ್ಲಿರುವ ಕಂಪನಿಯ ಆವರಣದಲ್ಲಿ ಈ ಕ್ರಯೋಜನಿಕ್​ ಇಂಜಿನ್​​​ ಧವನ್​-1 ಅನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸ್ಕೈರೂಟ್ ಏರೋಸ್ಪೇಸ್ ಪ್ರಕಾರ ಕಂಪನಿಯ ವಿಕ್ರಮ್ ಸರಣಿಯ ರಾಕೆಟ್‌ನಲ್ಲಿ ಈ ಇಂಜಿನ್​ ಬಳಸಲಾಗುತ್ತದೆ.

ಸ್ಕೈರೂಟ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಹೈದರಾಬಾದ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಭಾರತೀಯ ಖಾಸಗಿ ಏರೋಸ್ಪೇಸ್ ತಯಾರಕ ಮತ್ತು ವಾಣಿಜ್ಯ ಉಡಾವಣಾ ಸೇವಾ ಪೂರೈಕೆದಾರ ಕಂಪನಿಯಾಗಿದೆ. ಪವನ್ ಕುಮಾರ್ ಚಂದನ ಮತ್ತು ನಾಗಾ ಭಾರತ್ ಡಾಕಾ ಎಂಬುವವರು ಈ ಕಂಪನಿಯ ಸ್ಥಾಪಕರಾಗಿದ್ದಾರೆ.

Last Updated : Nov 27, 2021, 9:00 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.