ನವದೆಹಲಿ: ರುಚಿ ಕಲ್ರಾ ಮತ್ತು ಆಶಿಶ್ ಮೊಹಾಪಾತ್ರ ತಮ್ಮ ವಿವಿಧ ಸ್ಟಾರ್ಟ ಅಪ್ ಮೌಲ್ಯ ಒಂದು ಬಿಲಿಯನ್ ಡಾಲರ್ (7500 ಕೋಟಿ ರೂ) ಮೀರಿದ ಭಾರತದ ಮೊದಲ ಪತಿ ಮತ್ತು ಪತ್ನಿಯಾಗಿದ್ದಾರೆ. ಒಂದು ಬಿಲಿಯನ್ ಡಾಲರ್ ಸ್ಟಾರ್ಟಪ್ ಅನ್ನು ಯುನಿಕಾರ್ನ್ ಎಂದೂ ಕರೆಯಲಾಗುತ್ತದೆ.
ಆಲ್ಫಾ ವೇವ್ ಗ್ಲೋಬಲ್, ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್, ನಾರ್ವೆಸ್ಟ್ ವೆಂಚರ್ ಪಾರ್ಟ್‌ನರ್ಸ್ ಮತ್ತು ಇತರರು ನೇತೃತ್ವದ 200 ಮಿಲಿಯನ್ ಡಾಲರ್ ಮೊತ್ತದ ಮೊದಲ ನಿಧಿಯೊಂದಿಗೆ ಗಮನಾರ್ಹ ಯಶಸ್ಸು ಸಾಧಿಸಿದೆ ಎಂದು ರುಚಿ ಕಲ್ರಾ ಅವರ ಸಹ-ಸ್ಥಾಪಿತವಾದ ಡಿಜಿಟಲ್ ಸಾಲದ ಸ್ಟಾರ್ಟ್‌ಅಪ್ ಓಕ್ಸಿಜೋ ಹಣಕಾಸು ಸೇವೆಗಳು (Oxyzo Financial Services) ಹೇಳಿದೆ.
ಓದಿ: ಜಮ್ಮು ಕಾಶ್ಮೀರ ಕುರಿತು ಪ್ರತಿಕ್ರಿಯಿಸಲು ಚೀನಾಕ್ಕೆ ಯಾವುದೇ ಹಕ್ಕಿಲ್ಲ: ಭಾರತ
ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ, ಸಾಫ್ಟ್‌ಬ್ಯಾಂಕ್ ಗ್ರೂಪ್ ಕಾರ್ಪ್ ಮತ್ತು ಇತರರು ಬೆಂಬಲಿಸಿದ ನಂತರ ಅವರ ಪತಿ ಆಶಿಶ್ ಮೊಹಾಪಾತ್ರ ಅವರ ಆಫ್ - ಬ್ಯುಸಿನೆಸ್ ಕಂಪನಿ 5 ಶತಕೋಟಿ ಮೌಲ್ಯವನ್ನು ತಲುಪಿ ಗಮನಾರ್ಹ ಸಾಧನೆ ಮಾಡಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಂಗ: 38 ವರ್ಷದ ಕಲ್ರಾ ಮತ್ತು 41 ವರ್ಷದ ಮೊಹಾಪಾತ್ರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು. ಮೆಕಿನ್ಸೆ ಅಂಡ್ ಕಂಪನಿಯಲ್ಲಿ ಕೆಲಸ ಮಾಡುವಾಗ ಇಬ್ಬರೂ ಭೇಟಿಯಾದರು. ಅವರ ಪರಿಚಯ ಪ್ರೀತಿಗೆ ತಿರುಗಿ ನಂತರ ದಾಂಪತ್ಯಕ್ಕೆ ಪ್ರವೇಶಿಸಿತು. ಈಗ ದಂಪತಿಗಳು ಎರಡು ಸ್ಟಾರ್ಟ್ಅಪ್ ಕಂಪನಿಗಳನ್ನು ಪ್ರಾರಂಭಿಸಿ, ಲಾಭದಾಯಕವಾಗಿಸಿದ್ದಾರೆ. ಈ ಬೆಳವಣಿಗೆ ಯುವ ಕಂಪನಿಗಳಿಗೆ ಮಾದರಿಯಾಗಿದೆ.
ಓದಿ: ಅಮೆರಿಕದ ಕ್ರಮಕ್ಕೆ ಪ್ರತೀಕಾರ ಕೈಗೊಂಡ ರಷ್ಯಾ.. ಮಾಸ್ಕೋ ತೆಗೆದುಕೊಂಡ ಆ ನಿರ್ಧಾರವೇನು?
ಕಲ್ರಾ ಆಕ್ಸಿಜೋದ ಸಿಇಒ ಆಗಿದ್ದರೆ, ಮೊಹಪಾತ್ರ ಆಫ್‌ಬಿಸಿನೆಸ್‌ನ ಸಿಇಒ ಆಗಿದ್ದಾರೆ. ಮ್ಯಾಟ್ರಿಕ್ಸ್ ಪಾರ್ಟ್‌ನರ್ಸ್ ಮತ್ತು ಕ್ರಿಯೇಶನ್ ಇನ್ವೆಸ್ಟ್‌ಮೆಂಟ್ಸ್ ಕೂಡ ಆಕ್ಸಿಜೋದಲ್ಲಿ ಹೂಡಿಕೆ ಮಾಡಿದೆ. ಇದು ಭಾರತದ ಸ್ಟಾರ್ಟ್ಅಪ್ ಉದ್ಯಮದಲ್ಲಿ ಅತಿದೊಡ್ಡ ಸರಣಿ ಎ ಸುತ್ತುಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ. ಆಕ್ಸಿಜೋ Oxygen ಮತ್ತು Ozone ಪದಗಳ ಸಂಯೋಜನೆಯಿಂದ ಕೂಡಿದೆ.
ಕಲ್ರಾ, ಮೊಹಾಪಾತ್ರ ಮತ್ತು ಇತರ ಮೂವರು ಸೇರಿ 2017 ರಲ್ಲಿ ಆಫ್ ಬ್ಯುಸಿನೆಸ್ನ ಮತ್ತೊಂದು ಭಾಗವಾಗಿ ಓಕ್ಸಿಜೋ ಎಂಬ ಸ್ಟಾರ್ಟಪ್ ಕಂಪನಿ ಸ್ಥಾಪಿಸಿದರು. ಅತ್ತ ಮೊಹಾಪಾತ್ರ ಇತರ ಮೂವರೊಂದಿಗೆ ಸೇರಿ 2016 ರ ಆರಂಭದಲ್ಲಿ ಆಫ್ ಬ್ಯುಸಿನೆಸ್ ಕಂಪನಿಯನ್ನು ಪ್ರಾರಂಭಿಸಿದರು. ಓಕ್ಸಿಜೋ ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಸಾಲಗಳನ್ನು ಒದಗಿಸುತ್ತದೆ.
ಓದಿ: ನಾಲ್ಕು ವಾರ ದಾಟಿದ ರಷ್ಯಾ - ಉಕ್ರೇನ್ ಯುದ್ಧ.. ಉಕ್ರೇನ್ಗೆ ಬ್ರಿಟನ್, ಅಮೆರಿಕ ನೆರವು!
ಆಫ್-ಬ್ಯುಸಿನೆಸ್ 5 ಬಿಲಿಯನ್ ಡಾಲರ್ ಸಂಪಾದಿಸಿದ ಕಂಪನಿ: ಆಫ್-ಬ್ಯುಸಿನೆಸ್ ಅನ್ನು ಔಪಚಾರಿಕವಾಗಿ OFB Tech Pvt ಎಂದು ಕರೆಯಲಾಗುತ್ತದೆ. ಇದು ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ ಉಕ್ಕು, ಡೀಸೆಲ್, ಆಹಾರ ಧಾನ್ಯಗಳು ಮತ್ತು ಕೈಗಾರಿಕಾ ರಾಸಾಯನಿಕಗಳಂತಹ ಬೃಹತ್ ಕಚ್ಚಾ ವಸ್ತುಗಳನ್ನು ಪೂರೈಸುತ್ತದೆ.
ಮೊಹಾಪಾತ್ರ ಅವರ ಪ್ರಕಾರ, ಕಳೆದ ವರ್ಷ ಏಪ್ರಿಲ್‌ನಲ್ಲಿ ಸಾಫ್ಟ್‌ಬ್ಯಾಂಕ್ ಮತ್ತು ಇತರರು ಹೂಡಿಕೆ ಮಾಡಿದಾಗ, ಅದರ ಮೌಲ್ಯವು 1 ಬಿಲಿಯನ್‌ಗಿಂತಲೂ ಹೆಚ್ಚಿತ್ತು. ಸ್ಟಾರ್ಟಪ್‌ನ ಮೌಲ್ಯಮಾಪನವು ಡಿಸೆಂಬರ್‌ನಲ್ಲಿ ಸುಮಾರು 5 ಬಿಲಿಯನ್ ಡಾಲರ್ಗೆ ತಲುಪಿದೆ. ಸಾಫ್ಟ್‌ಬ್ಯಾಂಕ್ ಮತ್ತು ಇತರರು ಅದರಲ್ಲಿ ಹೆಚ್ಚಿನ ಹಣವನ್ನು ಹೂಡಿದ್ದಾರೆ ಎಂದು ಹೇಳಿದರು.