ETV Bharat / bharat

ದೇಶದ ಮೊದಲ ಮಾನವ ರಹಿತ ಗ್ರಂಥಾಲಯ.. ಇರುವುದೆಲ್ಲಿ ಗೊತ್ತಾ? - ದೇಶದ ಮೊದಲ ಮಾನವ ರಹಿತ ಗ್ರಂಥಾಲಯ ಜುನಾಗಢದಲ್ಲಿ ಆರಂಭ

ದೇಶದ ಮೊದಲ ಮಾನವ ಗ್ರಂಥಾಲಯವನ್ನು ಶುಕ್ರವಾರ ಜುನಾಗಢದಲ್ಲಿ ಉದ್ಘಾಟಿಸಲಾಯಿತು. ಡೆನ್ಮಾರ್ಕ್‌ ನಂತಹ ದೇಶಗಳು ಈ ರೀತಿಯ ಗ್ರಂಥಾಲಯವನ್ನು ಹೊಂದಿವೆ. ಜುನಾಗಢ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಈ ಒಂದು ಪ್ರಯೋಗವನ್ನು ನಡೆಸಲಾಯಿತು.

India's first human library
ದೇಶದ ಮೊದಲ ಮಾನವ ರಹಿತ ಗ್ರಂಥಾಲಯ ಜುನಾಗಢದಲ್ಲಿ ಆರಂಭ
author img

By

Published : May 20, 2022, 10:07 PM IST

ಜುನಾಗಢ (ಗುಜರಾತ್​): ರಾಜ್ಯ ಹಾಗೂ ದೇಶದ ಮೊದಲ ಮಾನವ ಗ್ರಂಥಾಲಯವನ್ನು ಶುಕ್ರವಾರ ಜುನಾಗಢ ನಗರದಲ್ಲಿ ಜಿಲ್ಲಾಧಿಕಾರಿ ರಚಿತ್ ರಾಜ್ ಉದ್ಘಾಟಿಸಿದರು. ಡೆನ್ಮಾರ್ಕ್‌ ನಂತಹ ದೇಶಗಳು ಮಾನವ ಗ್ರಂಥಾಲಯ ವ್ಯವಸ್ಥೆ ಹೊಂದಿವೆ. ಈ ಮಾನವ ಗ್ರಂಥಾಲಯದಲ್ಲಿ ಪುಸ್ತಕಗಳು ಇರುವುದಿಲ್ಲ. ಬದಲಿಗೆ ಜನರು ತಮ್ಮ ವಿರಾಮದ ಸಮಯದಲ್ಲಿ ಇಲ್ಲಿಗೆ ಬಂದು ಅವರ ಸಂತೋಷ ಮತ್ತು ದುಃಖವನ್ನು ಪರಸ್ಪರ ಹಂಚಿಕೊಳ್ಳಬಹುದಾಗಿದೆ.

ದೇಶದ ಮೊದಲ ಮಾನವ ರಹಿತ ಗ್ರಂಥಾಲಯ ಜುನಾಗಢದಲ್ಲಿ ಆರಂಭ

ಮಧ್ಯಾಹ್ನ ನೌಕರರು 1 ಗಂಟೆಯಿಂದ 3 ಗಂಟೆಯವರೆಗೆ ಇಲ್ಲಿ ಊಟ ಮಾಡಬಹುದು. ಅಷ್ಟೇ ಅಲ್ಲದೇ ಇತರ ಉದ್ಯೋಗಿಗಳೊಂದಿಗೆ ಮಾತನಾಡಬಹುದಾಗಿದೆ. ಮಾನವ ಲೈಬ್ರರಿ ಉದ್ಘಾಟನೆ ಬಳಿಕ ಮಾತನಾಡಿದ ಜುನಾಗಢ ಜಿಲ್ಲಾಧಿಕಾರಿ ರಚಿತ್ ರಾಜ್, ಪ್ರಸ್ತುತ ದಿನಗಳಲ್ಲಿ ನಾವೆಲ್ಲಾರೂ ಯಾಂತ್ರಿಕ ಜೀವನ ಶೈಲಿಯಲ್ಲಿ ಬದುಕುತ್ತಿದ್ದೇವೆ. ಹಾಗಾಗಿ ಇಂತಹ ಲೈಬ್ರರಿಗಳ ಅವಶ್ಯಕತೆ ಇದೆ ಎಂದರು.

ಇಲ್ಲಿಗೆ ಸಿಬ್ಬಂದಿ ಬಂದು ತಮ್ಮ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಬಹುದು. ಅಲ್ಲದೇ ಸಂತೋಷದ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳ ಬಹುದಾಗಿದೆ. ಉದ್ಯೋಗಿಗಳು ತಮ್ಮ ಜೀವನದ ಅನುಭವಗಳನ್ನು ಸಹೋದ್ಯೋಗಿಗಳೊಂದಿಗೆ ಚರ್ಚಿಸುವುದರಿಂದ ಅವರ ಮಾನಸಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಅವರು ಕಚೇರಿಯಲ್ಲಿ ತುಂಬಾ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಇದನ್ನೂ ಓದಿ: VIDEO: ಬರೋಬ್ಬರಿ 100 ಅಡಿ ಎತ್ತರದ ಜಲಪಾತದಿಂದ ಜಿಗಿದ ಯುವತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.