ETV Bharat / bharat

ಭಾರತದಲ್ಲಿ 2 ಕೋಟಿ ಗಡಿ ದಾಟಿದ ಕೋವಿಡ್​ ಕೇಸ್​.. ಒಂದೇ ದಿನ 3,449 ಮಂದಿ ಬಲಿ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,02,82,833 ಹಾಗೂ ಮೃತರ ಸಂಖ್ಯೆ 2,22,408ಕ್ಕೆ ಏರಿಕೆಯಾಗಿದ್ದು, 34,47,133 ಪ್ರಕರಣಗಳು ಸಕ್ರಿಯವಾಗಿದೆ.

India's covid cases tally crosses two crore mark with 3,57,229 new cases
ಭಾರತದಲ್ಲಿ 2 ಕೋಟಿ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
author img

By

Published : May 4, 2021, 10:12 AM IST

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 3,57,229 ಕೋವಿಡ್​ ಕೇಸ್​ಗಳು ಪತ್ತೆಯಾಗಿದ್ದು, ಭಾರತದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 2 ಕೋಟಿ ( 2,02,82,833) ಗಡಿ ದಾಟಿದೆ.

ಸೋಮವಾರ ಒಂದೇ ದಿನದಲ್ಲಿ 3,449 ಮಂದಿ ವೈರಸ್​ಗೆ ಬಲಿಯಾಗಿದ್ದು, ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 2,22,408ಕ್ಕೆ ಏರಿಕೆಯಾಗಿದೆ. 2 ಕೋಟಿ ಕೇಸ್​ಗಳಲ್ಲಿ ಪ್ರಸ್ತುತ 34,47,133 ಪ್ರಕರಣಗಳು ಸಕ್ರಿಯವಾಗಿದೆ.

ಒಂದೇ ದಿನ 3.20 ಲಕ್ಷ ಸೋಂಕಿತರು ಡಿಸ್ಚಾರ್ಜ್​

ದೇಶದ 2,02,82,833 ಸೋಂಕಿತರ ಪೈಕಿ ಇಲ್ಲಿಯವರೆಗೆ 1,66,13,292 ಜನರು ಗುಣಮುಖರಾಗಿದ್ದು, ನಿನ್ನೆ ಒಂದೇ ದಿನ 3,20,289 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ರಾಷ್ಟ್ರವ್ಯಾಪಿ ಲಾಕ್​ಡೌನ್ ಅನಿವಾರ್ಯ

ಕೋವಿಡ್ ಹರಡುವಿಕೆ ಸರಪಳಿಯನ್ನು ಪರಿಣಾಮಕಾರಿಯಾಗಿ ಮುರಿಯಲು ಹಂತ ಹಂತವಾಗಿ ರಾಷ್ಟ್ರವ್ಯಾಪಿ ಲಾಕ್​ಡೌನ್ ಅನಿವಾರ್ಯವಾಗಿದ್ದು, ಸದ್ಯಕ್ಕೆ ಕನಿಷ್ಠ ಎರಡು ವಾರಗಳ ಕಾಲ ಲಾಕ್‌ಡೌನ್ ವಿಧಿಸುವಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೇರಿದಂತೆ ದೇಶದ ಆರೋಗ್ಯ ರಕ್ಷಣಾ ಸಂಸ್ಥೆಗಳು ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡಿದ್ದಾರೆ.

15.89 ಕೋಟಿ ಮಂದಿಗೆ ವ್ಯಾಕ್ಸಿನ್​

ಕೊರೊನಾ ಲಸಿಕಾಭಿಯಾನದಡಿಯಲ್ಲಿ ದೇಶಾದ್ಯಂತ ಈವರೆಗೆ ಒಟ್ಟು 15,89,32,921 ಮಂದಿಗೆ ವ್ಯಾಕ್ಸಿನ್​ ನೀಡಲಾಗಿದೆ. ಲಸಿಕೆಯ ಅಭಾವದ ನಡುವೆಯೂ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್​ ಆರಂಭಿಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 18 ರಿಂದ 44 ವರ್ಷದೊಳಗಿನ 2,15,185 ಫಲಾನುಭವಿಗಳು ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.