ETV Bharat / bharat

ಒಲಿಂಪಿಕ್ ಆತಿಥ್ಯಕ್ಕೆ ಭಾರತದ ಯತ್ನ: ಕ್ರೀಡಾ ಮೂಲಸೌಕರ್ಯ ಸುಧಾರಣೆಗೆ ಬೇಕಿದೆ ಒತ್ತು - ಪ್ಯಾರಿಸ್​ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟ

2038ರಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸಲು ಭಾರತ ಒಲವು ವ್ಯಕ್ತಪಡಿಸಿದೆ.

India plans to secure the honor of hosting the 2036 Olympics

author img

By ETV Bharat Karnataka Team

Published : Oct 17, 2023, 7:02 PM IST

2036ರ ಒಲಿಂಪಿಕ್ಸ್ ಆತಿಥ್ಯ ವಹಿಸುವ ಗೌರವ ಪಡೆಯಲು ಭಾರತ ಯೋಜಿಸುತ್ತಿದೆ. ಆದರೆ, ಇದನ್ನು ವಹಿಸಿಕೊಳ್ಳುವ ಜಾಗತಿಕ ಪೈಪೋಟಿಯನ್ನು ಎದುರಿಸಿ ಈ ಗೌರವವನ್ನು ತನ್ನದಾಗಿಸಿಕೊಳ್ಳಲು ತಕ್ಷಣವೇ ಪೂರ್ವಭಾವಿ ಕಾರ್ಯತಂತ್ರ ರೂಪಿಸುವುದು ಬಹಳ ಅಗತ್ಯವಾಗಿದೆ.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟವು ಶತಕೋಟಿ ಉತ್ಸಾಹಿ ಅಭಿಮಾನಿಗಳು ಮತ್ತು ವಿಶ್ಲೇಷಕರನ್ನು ಆಕರ್ಷಿಸುತ್ತದೆ. ಇದು ಅಥ್ಲೆಟಿಕ್​ನ ಪರಾಕ್ರಮ ಮತ್ತು ಜಾಗತಿಕ ಏಕತೆಯ ಅದ್ಭುತ ದೃಶ್ಯವನ್ನು ನೀಡುತ್ತದೆ. ಈ ಕ್ರೀಡಾಕೂಟವು "ವಸುಧೈವ ಕುಟುಂಬಕಂ" ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎಂಬ ಆಳವಾದ ತತ್ವವನ್ನು ಸಾಕಾರಗೊಳಿಸುತ್ತದೆ. ಸುಮಾರು 140 ಕೋಟಿ ಭಾರತೀಯರ ಕನಸುಗಳೊಂದಿಗೆ ಅನುರಣಿಸುವ ದೃಷ್ಟಿಕೋನದ ಪ್ರತಿಷ್ಠಿತ ಒಲಿಂಪಿಕ್ ಕ್ರೀಡಾಕೂಟವನ್ನು ಭಾರತಕ್ಕೆ ತರುವ ಅಚಲ ಬದ್ಧತೆಯನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಶೃಂಗಸಭೆಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ಈ ಸಭೆಯಲ್ಲಿ 2036 ರ ಒಲಿಂಪಿಕ್ಸ್ ಆತಿಥ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅಚಲ ಸಮರ್ಪಣಾ ಪ್ರತಿಜ್ಞೆ ಮಾಡಿದ್ದಾರೆ.

ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟ ಮತ್ತು 2028 ರಲ್ಲಿ ಲಾಸ್ ಏಂಜಲೀಸ್​ನಲ್ಲಿ ನಡೆಯಲಿರುವ ವಿಶ್ವ ಕ್ರೀಡಾಕೂಟವನ್ನು ಜಗತ್ತು ಕುತೂಹಲದಿಂದ ನಿರೀಕ್ಷಿಸುತ್ತಿರುವ ಮಧ್ಯೆ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರವು 2032 ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸಲಿದೆ ಎಂಬ ಸುದ್ದಿ ಬಂದಿದೆ. ಭಾರತ ಕೂಡ ಒಲಿಂಪಿಕ್​ನ ಆತಿಥ್ಯ ವಹಿಸಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಡಿಸೆಂಬರ್​ನಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದರು. ವಿಶೇಷವಾಗಿ ಅಹಮದಾಬಾದ್ ನಗರದಲ್ಲಿ ಈ ಕ್ರೀಡಾಕೂಟ ನಡೆಸುವ ಉದ್ದೇಶ ಸರ್ಕಾರಕ್ಕಿದೆ.

ಹಲವು ರಾಷ್ಟ್ರಗಳಿಂದ ಪೈಪೋಟಿ: ಈ ಪ್ರತಿಷ್ಠಿತ ಕ್ರೀಡಾಕೂಟವನ್ನು ಆಯೋಜಿಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಿರುವ ಇಂಡೋನೇಷ್ಯಾ, ಜರ್ಮನಿ ಮತ್ತು ಕತಾರ್ ನಂತಹ ದೇಶಗಳಿಂದ ಭಾರತ ತೀವ್ರ ಪೈಪೋಟಿ ಎದುರಿಸಬೇಕಿದೆ. ಒಲಿಂಪಿಕ್ಸ್ ಆಯೋಜಿಸುವುದು ಒಂದು ಸ್ಮರಣೀಯ ಪ್ರಯತ್ನವಾಗಿದೆ. ಇದಕ್ಕಾಗಿ ವ್ಯಾಪಕವಾದ ಮೂಲಸೌಕರ್ಯ ಅಭಿವೃದ್ಧಿ, ಸುಧಾರಿತ ನಗರ ಸೌಲಭ್ಯಗಳು, ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆಗಳು, ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಮತ್ತು ದೋಷರಹಿತ ನೈರ್ಮಲ್ಯ ಮಾನದಂಡಗಳನ್ನು ಒಳಗೊಂಡಿರುವ ಗಣನೀಯ ಹಣಕಾಸಿನ ಬದ್ಧತೆಯನ್ನು ನಿರ್ವಹಿಸಬೇಕಾಗುತ್ತದೆ. 200 ಕ್ಕೂ ಹೆಚ್ಚು ರಾಷ್ಟ್ರಗಳ ಸಾವಿರಾರು ಕ್ರೀಡಾಪಟುಗಳು ಮತ್ತು ಅಸಂಖ್ಯಾತ ಸಂದರ್ಶಕರಿಗೆ ಆತಿಥ್ಯ ನೀಡುವಲ್ಲಿ ಈ ಅಂಶಗಳು ನಿರ್ಣಾಯಕವಾಗಿವೆ.

ಇತ್ತೀಚಿನ ಟೋಕಿಯೊ ಒಲಿಂಪಿಕ್ಸ್ ಸಮಯದಲ್ಲಿ ಕ್ರೀಡಾಕೂಟಕ್ಕೆ 700 ಕೋಟಿ ಡಾಲರ್ (ಸುಮಾರು 58,000 ಕೋಟಿ ರೂ.) ವೆಚ್ಚವಾಗಲಿದೆ ಎಂದು ಆರಂಭದಲ್ಲಿ ಅಂದಾಜಿಸಲಾಗಿತ್ತು. ಆದರೆ ಈ ವೆಚ್ಚ ಅಂತಿಮವಾಗಿ ದ್ವಿಗುಣಗೊಂಡಿತು. ಹೀಗಾಗಿ ಇಷ್ಟು ದೊಡ್ಡ ಕ್ರೀಡಾಕೂಟ ಆಯೋಜಿಸುವಾಗ ಆರ್ಥಿಕ ವಿವೇಚನೆ ಮತ್ತು ಪಾರದರ್ಶಕತೆ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಸ್ಪಷ್ಟ.

ಹಿಂದಿನ ಘಟನೆಗಳಿಂದ ಕಲಿಯಬೇಕಿದೆ ಪಾಠ: ನವದೆಹಲಿಯಲ್ಲಿ ನಡೆದ 2010 ರ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಹಾಳುಗೆಡವಿದ ಭ್ರಷ್ಟಾಚಾರದ ಹಿಂದಿನ ಅನುಭವಗಳಿಂದ ದೇಶ ಪಾಠ ಕಲಿಯಬೇಕು. ಅಂತಾರಾಷ್ಟ್ರೀಯ ಆತಿಥ್ಯ ಮಾನದಂಡಗಳನ್ನು ಎತ್ತಿಹಿಡಿಯುವುದು ಶ್ಲಾಘನೀಯ, ಆದರೆ ಕ್ರೀಡೆ ಮತ್ತು ಪದಕದ ಅನ್ವೇಷಣೆಯಲ್ಲಿ ಉತ್ಕೃಷ್ಟತೆಯ ಮಾನದಂಡಗಳನ್ನು ಸ್ಥಾಪಿಸುವುದು ಮತ್ತು ಎತ್ತಿಹಿಡಿಯುವುದು ಅಷ್ಟೇ ನಿರ್ಣಾಯಕ.

125 ಪ್ರತಿಭಾವಂತ ಕ್ರೀಡಾಪಟುಗಳನ್ನು ಒಳಗೊಂಡ ಭಾರತೀಯ ನಿಯೋಗವು 2021 ರ ಟೋಕಿಯೊ ಒಲಿಂಪಿಕ್​ನಲ್ಲಿ ಭಾಗವಹಿಸಿತ್ತು. ಈ ತಂಡ ಏಳು ಪದಕಗಳೊಂದಿಗೆ ಸ್ವದೇಶಕ್ಕೆ ಮರಳಿತು. ಇದರಲ್ಲಿ ಒಂದು ಚಿನ್ನ ಮತ್ತು ಎರಡು ಬೆಳ್ಳಿ ಪದಕ ಸೇರಿವೆ. ಈ ಪ್ರಶಂಸನೀಯ ಸಾಧನೆಯು ಒಟ್ಟಾರೆ ಶ್ರೇಯಾಂಕದಲ್ಲಿ ಭಾರತದ ಸ್ಥಾನವನ್ನು 48 ನೇ ಸ್ಥಾನಕ್ಕೆ ಎತ್ತರಿಸಿತು. ಆದಾಗ್ಯೂ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ಮೊದಲ ಮತ್ತು ಎರಡನೇ ಶ್ರೇಯಾಂಕದ ರಾಷ್ಟ್ರಗಳಾಗಿ ಪ್ರಾಬಲ್ಯ ಮುಂದುವರಿಸಿವೆ. ಆತಿಥೇಯ ಜಪಾನ್ 27 ಚಿನ್ನ, 14 ಬೆಳ್ಳಿ ಮತ್ತು 17 ಕಂಚಿನ ಪದಕಗಳೊಂದಿಗೆ ಮೂರನೇ ಸ್ಥಾನ ಗಳಿಸಿತ್ತು. ಜಪಾನ್ ಗಿಂತ ಹತ್ತು ಪಟ್ಟು ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ತಂಡ 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಎರಡಂಕಿಯ ಪದಕಗಳನ್ನು ಗೆಲ್ಲುವ ಭರವಸೆ ಹೊಂದಿದೆ.

ಒಲಿಂಪಿಕ್​​​ನಲ್ಲಿ ಬೇಕಿದೆ ಇನ್ನಷ್ಟು ಉತ್ತಮ ಪ್ರದರ್ಶನ: ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ತನ್ನ ಪ್ರಾಬಲ್ಯ ಸಾಧಿಸುವ ಈ ಸಮಯದಲ್ಲಿ ಒಲಿಂಪಿಕ್​ನಲ್ಲಿ ದೇಶದ ಪ್ರದರ್ಶನ ನಿರೀಕ್ಷೆಗಿಂತಲೂ ಉತ್ತಮವಾಗಿರಬೇಕಾಗುತ್ತದೆ. ಒಲಿಂಪಿಕ್​ನಲ್ಲಿ ಭಾರತದ ತ್ರಿವರ್ಣ ಧ್ವಜ ಹೆಮ್ಮೆಯಿಂದ ಹಾರಬೇಕು ಮತ್ತು ಭಾರತವು ತನ್ನನ್ನು ತಾನು ಕ್ರೀಡಾ ಶಕ್ತಿಯಾಗಿ ಸಾಧಿಸಿ ತೋರಿಸಬೇಕು. ಇದನ್ನು ಸಾಧಿಸಲು, ಎಲ್ಲ ಕ್ರೀಡಾ ವಿಭಾಗಗಳಲ್ಲಿ ಕ್ರೀಡಾಪಟುಗಳ ಆಯ್ಕೆ ಮತ್ತು ಸಮಗ್ರ ತರಬೇತಿಗೆ ಬಲವಾದ ಅಡಿಪಾಯ ಹಾಕುವುದು ಕಡ್ಡಾಯವಾಗಿದೆ. ಪ್ರಸ್ತುತ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಮೇಲೆ ವಿವಾದದ ಕಾರ್ಮೋಡ ಕವಿದಿರುವುದು ರಾಷ್ಟ್ರದ ಕ್ರೀಡಾ ಪ್ರತಿಷ್ಠೆಯನ್ನು ಅಪಾಯಕ್ಕೆ ಸಿಲುಕಿಸಿದೆ.

ಪೂರ್ಣಾವಧಿ ಸಿಇಒ ನೇಮಕ ಮಾಡುವಲ್ಲಿ ಐಒಎ ವಿಫಲವಾದ ನಂತರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಈ ಬಗ್ಗೆ ಕಟು ಟೀಕೆ ಮಾಡಿದ್ದು, ಈ ಎರಡೂ ಪ್ರಮುಖ ಸಂಸ್ಥೆಗಳ ನಡುವಿನ ವಿಭಜನೆಯನ್ನು ಹೆಚ್ಚಿಸಿದೆ. 2025ರಲ್ಲಿ ಹೊಸ ಐಒಸಿ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಮುಂದಿನ ಕೆಲ ವರ್ಷಗಳಲ್ಲಿ 2036ರ ಒಲಿಂಪಿಕ್ಸ್ ಆತಿಥ್ಯದ ಬಗ್ಗೆ ನಿರ್ಧಾರವಾಗುವ ಸಾಧ್ಯತೆಯಿದೆ.

ಭಾರತದ ಆತಿಥ್ಯ ವಹಿಸುತ್ತದೋ ಬಿಡುತ್ತದೋ ಅದನ್ನು ಪಕ್ಕಕ್ಕಿಟ್ಟು ಜಾಗತಿಕ ಸ್ಪರ್ಧೆಗಳ ಅಗ್ರ ವಿಜೇತರಲ್ಲಿ ದೇಶದ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಪೂರ್ವಭಾವಿ ಕಾರ್ಯತಂತ್ರವನ್ನು ತಕ್ಷಣ ಜಾರಿಗೆ ತರುವುದು ಇಂದಿನ ಅಗತ್ಯವಾಗಿದೆ. ಪ್ರಾಥಮಿಕ ಶಾಲಾ ಹಂತದಿಂದಲೇ ಕ್ರೀಡಾ ತರಬೇತಿ ಆರಂಭಿಸುವದರಿಂದ ಹಿಡಿದು ವಿಶೇಷ ಕ್ರೀಡಾ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದು, ಕ್ರೀಡಾ ಬೋಧಕರ ಕೊರತೆಯನ್ನು ಪರಿಹರಿಸುವುದು, ರಾಷ್ಟ್ರವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಉನ್ನತ ದರ್ಜೆಯ ಕ್ರೀಡಾ ಸೌಲಭ್ಯಗಳನ್ನು ಸ್ಥಾಪಿಸುವುದು, ವಿಶ್ವ ದರ್ಜೆಯ ತರಬೇತುದಾರರನ್ನು ನೇಮಕ ಮಾಡುವುದು, ಸಹಜ ಸಾಮರ್ಥ್ಯ ಹೊಂದಿರುವ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಅವರಿಗೆ ಸಮಗ್ರ ವ್ಯವಸ್ಥಿತ ಬೆಂಬಲವನ್ನು ಒದಗಿಸುವಂಥ ಕ್ರಮಗಳನ್ನು ಭಾರತ ಜಾರಿಗೊಳಿಸಬೇಕಿದೆ. ಇದಲ್ಲದೆ, ಕ್ರೀಡಾಂಗಣಗಳು ರಾಷ್ಟ್ರೀಯ ಬೊಕ್ಕಸಕ್ಕೆ ಹೊರೆಯಾಗುವ ಬಿಳಿ ಆನೆಗಳಾಗಿ ರೂಪಾಂತರಗೊಳ್ಳುವುದನ್ನು ತಡೆಯಲು ಒಲಿಂಪಿಕ್ ನಂತರದ ಬಳಕೆಯ ಬಗ್ಗೆ ಸರ್ಕಾರ ಗಮನ ಹರಿಸುವ ತುರ್ತು ಅವಶ್ಯಕತೆಯಿದೆ.

ಇದನ್ನೂ ಓದಿ : SC on Same Sex Marriage: ಸಲಿಂಗ ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆಯಿಲ್ಲ.. ಸುಪ್ರೀಂ ಬಹುಮತದ ತೀರ್ಪು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.