ನವದೆಹಲಿ: ದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ‘ದೇಕೋ ಅಪ್ನಾ ದೇಶ್’ ಎನ್ನುವ ಭಾರತೀಯ ರೈಲ್ವೆ ಶ್ರೀರಾಮಾಯಣ ಯಾತ್ರೆ ಡಿಲಕ್ಸ್ ಎಸಿ ಟೂರಿಸ್ಟ್ ರೈಲಅನ್ನು ಆರಂಭಿಸಿದೆ.
ಇದಕ್ಕೂ ಮೊದಲು ಈ ರೈಲು ಕೇವಲ ಸ್ಲೀಪರ್ ಕ್ಲಾಸ್ ಸೌಲಭ್ಯದೊಂದಿಗೆ ಮಾತ್ರ ಸಂಚರಿಸುತ್ತಿತ್ತು. ಈ ಪ್ರವಾಸವು 7ನೇ ನವೆಂಬರ್ 2021ರಂದು ದೆಹಲಿಯ ಸಫ್ದರ್ಜಂಗ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುತ್ತದೆ ಮತ್ತು ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳ ಭೇಟಿಯನ್ನು ಈ ಪ್ರವಾಸ ಒಳಗೊಂಡಿರಲಿದೆ ಎಂದು ಇಲಾಖೆ ತಿಳಿಸಿದೆ.
ಇಡೀ ಪ್ರವಾಸವು ಪೂರ್ಣಗೊಳ್ಳಲು 17 ದಿನಗಳನ್ನು ತೆಗೆದುಕೊಳ್ಳುತ್ತದೆ, ಸರಿಸುಮಾರು 7,500 ಕಿ.ಮೀ. ನಷ್ಟು ದೂರ ಈ ಪ್ರವಾಸ ಸಾಗಲಿದೆ. ಈ ರೈಲು ಆರಂಭದಲ್ಲಿ ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಹನುಮಾನ್ ಮಂದಿರ್ ಬಳಿಕ ನಂದಿಗ್ರಾಮದ ಭಾರತ್ ಮಂದಿರ್ ವೀಕ್ಷಿಸಬಹುದಾಗಿದೆ.
ಅಯೋಧ್ಯೆಯ ಬಳಿಕ ಬಿಹಾರದ ಸೀತಾಮರ್ಹಿ ಮತ್ತು ಸೀತಾ ಜಿ ಅವರ ಜನ್ಮಸ್ಥಳ ಮತ್ತು ಜನಕಪುರದ (ನೇಪಾಳ) ರಾಮ-ಜಂಕಿ ದೇವಾಲಯದ ಭೇಟಿಯಾಗಿದೆ. ಇದಾದ ಬಳಿಕ ರೈಲು ವಾರಣಾಸಿಗೆ ಚಲಿಸಲಿದೆ. ಇಲ್ಲಿಂದ ಪ್ರಯಾಗ್ರಾಜ್, ಶೃಂಗವರ್ಪುರ ಮತ್ತು ಚಿತ್ರಕೂಟ ತಲುಪಲಿದೆ. ಇದಾದ ಬಳಿಕ ನಾಸಿಕ್ ತೆರಳಿ ಹಂಪಿಯಲ್ಲಿ ಕೊನೆಯಾಗಲಿದೆ.
ಈ ವಿಶೇಷ ರೈಲಿನಲ್ಲಿ ಇಡೀ ಪ್ರವಾಸದ ಬೆಲೆ ರೂ. 82,950 ರೂ. ಪ್ರತಿ ವ್ಯಕ್ತಿಗೆ 2AC ಮತ್ತು ರೂ. 1,02,095 1AC ಗೆ ಎಂದು ನಿಗದಿ ಮಾಡಲಾಗಿದೆ.
ಓದಿ: 44 ಶಿಕ್ಷಕರಿಗೆ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್