ನವದೆಹಲಿ: ತೌಕ್ತೆ ಚಂಡಮಾರುತ ಗುಜರಾತ್ ಪ್ರವೇಶಿಸಿದ್ದು, ತೀವ್ರ ಕಡಲ್ಕೊರೆತ ಉಂಟಾಗಿದ್ದು ಎಚ್ಚರಿಕೆ ವಹಿಸುತ್ತಿದ್ದರೆ, ಇತ್ತ ಭಾರತೀಯ ರೈಲ್ವೆ 150 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ದೇಶದ ಇತರ ಭಾಗಗಳಿಗೆ ವಿತರಿಸುವ ಮೂಲಕ ತನ್ನದೇ ಆದ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಗುಜರಾತ್‌ನಲ್ಲಿ 20 ದಿನಗಳಿಂದ ದಿನಕ್ಕೆ ಸರಾಸರಿ 134 ಮೆ.ಟನ್ ಎಲ್‌ಎಂಒ ಆಮ್ಲಜನಕ ವಿತರಿಸುತ್ತಿದೆ. ಇಂದು ಚಂಡಮಾರುತದ ಎಚ್ಚರಿಕೆಯ ಹೊರತಾಗಿಯೂ, ರೈಲ್ವೆ ತನ್ನ ಟರ್ಮಿನಲ್‌ಗಳಿಂದ ಆಕ್ಸಿಜನ್ (ಎಲ್‌ಎಂಒ) ಅನ್ನು ಗುಜರಾತ್‌ನ ಚಂಡಮಾರುತ ಪೀಡಿತ ಪ್ರದೇಶಗಳಾದ ಹಪಾ, ಮುಂಡ್ರಾ ಮತ್ತು ವಡೋದರಾದಲ್ಲಿ ಯಾವುದೇ ವಿರಾಮವಿಲ್ಲದೇ ಸಾಗಿಸಿತು.
"ನಾವು ಎಲ್ಲ ಅಂಶಗಳಲ್ಲೂ ಸಿದ್ಧರಿದ್ದೇವೆ. ನಾವು ಈಗಾಗಲೇ ನಮ್ಮ ರೈಲುಗಳನ್ನು ನಿಯಂತ್ರಿಸಿದ್ದೇವೆ. ನಮ್ಮ ವಿಪತ್ತು ನಿರ್ವಹಣಾ ರೈಲುಗಳನ್ನು ಜನರೇಟರ್ ಸೆಟ್‌ಗಳು, ಮತ್ತು ಪೋರ್ಟಬಲ್ ಕುಡಿಯುವ ನೀರು, ವಿವಿಧ ಸ್ಥಳಗಳಲ್ಲಿ ಯಾಂತ್ರಿಕ, ವಿದ್ಯುತ್ ಮತ್ತು ಇಂಜಿನಿಯರಿಂಗ್ ಸಿಬ್ಬಂದಿಯನ್ನು ಒಳಗೊಂಡ ನಮ್ಮ ಗಸ್ತು ತಂಡಗಳನ್ನು ಸಹ ಇರಿಸಿದ್ದೇವೆ, ಇನ್ನು ಮರಗಳು ಹಳಿಗಳ ಮೇಲೆ ಬಿದ್ದಿದ್ದರೆ ಮರ ಕತ್ತರಿಸುವವರ ತಂಡವೂ ನಮ್ಮ ಬಳಿ ಇರಿಸಿಕೊಂಡಿದ್ದೇವೆ', ಎನ್ನುತ್ತಾರೆ ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ.
"ನಾವು ಈಗಾಗಲೇ ನಮ್ಮ ಎಲ್ಲ ಸಿಬ್ಬಂದಿಗೆ ವಿವಿಧ ಸ್ಥಳಗಳಲ್ಲಿ ಎಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಿದ್ದೇವೆ. ಗಾಳಿಯ ವೇಗವನ್ನು ತಿಳಿಯಲು ನಾವು ವಿವಿಧ ನಿಲ್ದಾಣಗಳಲ್ಲಿ ಎನಿಮೋಮೀಟರ್‌ಗಳನ್ನು ಸ್ಥಾಪಿಸಿದ್ದೇವೆ. ಇದರಿಂದ ಸ್ಟೇಷನ್ ಮಾಸ್ಟರ್ಸ್ ರೈಲುಗಳನ್ನು ನಿಯಂತ್ರಿಸಬಹುದು ಅಥವಾ ನಿಲ್ಲಿಸಬಹುದು ಎಂದಿದ್ದಾರೆ.
ಈ ಆಕ್ಸಿಜನ್ ಎಕ್ಸ್‌ಪ್ರೆಸ್ ತನ್ನ ವಿತರಣೆಯನ್ನು ಏಪ್ರಿಲ್ 24 ರಂದು ಮಹಾರಾಷ್ಟ್ರಕ್ಕೆ 126 ಮೆ.ಟನ್ ಲೋಡ್ನೊಂದಿಗೆ ಪ್ರಾರಂಭಿಸಿದೆ ಎಂದು ಗಮನಿಸಬಹುದು. 23 ದಿನಗಳ ಅವಧಿಯಲ್ಲಿ, ರೈಲ್ವೆ ತನ್ನ ಆಕ್ಸಿಜನ್ ಎಕ್ಸ್‌ಪ್ರೆಸ್ ಕಾರ್ಯಾಚರಣೆಯನ್ನು 13 ರಾಜ್ಯಗಳಿಗೆ ಹೆಚ್ಚಿಸಿ 10,300 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ತಲುಪಿಸುವ ಗುರಿ ಹೊಂದಿದೆ.