ETV Bharat / bharat

ರಾಷ್ಟ್ರಪತಿಗಳ ತಿಂಗಳ ಪಗಾರವೆಷ್ಟು? ಭತ್ಯೆ, ನಿವೃತ್ತಿ ಸೌಲಭ್ಯಗಳೇನು ಗೊತ್ತೇ? ಕಂಪ್ಲೀಟ್ಸ್‌ ಡಿಟೇಲ್ಸ್‌

author img

By

Published : Jul 21, 2022, 9:22 AM IST

Updated : Jul 21, 2022, 3:56 PM IST

ರಾಷ್ಟ್ರಪತಿ ಎಂಬುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ. ಮೂರು ಸಶಸ್ತ್ರ ಪಡೆಗಳ ದಂಡನಾಯಕ ಕೂಡಾ ರಾಷ್ಟ್ರಪತಿಗಳೇ ಆಗಿರುತ್ತಾರೆ. ಇಂಥ ಮಹತ್ವದ ಹುದ್ದೆಯ ಆಯ್ಕೆಯ ವಿಧಾನ, ಕರ್ತವ್ಯಗಳನ್ನು ಸಂವಿಧಾನದಲ್ಲಿ ಸವಿಸ್ತಾರವಾಗಿ ನೀಡಲಾಗಿದೆ. ಇದನ್ನು ಹೊರತುಪಡಿಸಿ, ರಾಷ್ಟ್ರಪತಿಯ ಸಂಬಳ, ಸೌಲಭ್ಯಗಳೇನು ಎಂಬುದರ ಕುರಿತು ಜನರಿಗೆ ಕುತೂಹಲಗಳಿರುತ್ತವೆ. ದೇಶಕ್ಕಿಂದು ನೂತನ ರಾಷ್ಟ್ರಪತಿಗಳು ಆಯ್ಕೆಯಾಗಲಿರುವ ಈ ಸಂದರ್ಭದಲ್ಲಿ ನೀವು ತಿಳಿದಿರಬೇಕಾದ ಸಂಗತಿಗಳಿಲ್ಲಿವೆ.

President of India
ರಾಷ್ಟ್ರಪತಿಗಳ ಸಂಬಳ, ಭತ್ಯೆ ನಿವೃತ್ತಿ ಸೌಲಭ್ಯಗಳೇನು ಗೊತ್ತಾ?

ನವದೆಹಲಿ: ದೇಶವು 16ನೇ ರಾಷ್ಟ್ರಪತಿಗಳ ಆಯ್ಕೆಯ ಹೊಸ್ತಿಲಲ್ಲಿದೆ. ಮುಂದಿನ ಅಧ್ಯಕ್ಷರಾಗಿ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಆಯ್ಕೆ ನಿಚ್ಚಳವಾಗಿದೆ. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೇರಲು ಇರುವ ಅರ್ಹತೆ, ಜೀವನ ಶೈಲಿ, ಸಂಬಳ, ಅವರಿಗಿರುವ ಸವಲತ್ತುಗಳು ಹಾಗು ಗೌರವ ದೇಶದ ಬೇರಾವ ಹುದ್ದೆಗೂ ಇರುವುದಿಲ್ಲ. ರಾಷ್ಟ್ರಪತಿಗಳಾದವರು ಕರ್ತವ್ಯ, ಹಕ್ಕುಗಳು ಅವರ ಸಂಬಳ ಮತ್ತು ರಜೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.

ರಾಷ್ಟ್ರಪತಿ ಹುದ್ದೆಗೇರುವ ಅರ್ಹತೆಗಳೇನು?

  • ಭಾರತದ ಪ್ರಜೆಯಾಗಿರಬೇಕು
  • 35 ವರ್ಷಗಳಾಗಿರಬೇಕು
  • ಲೋಕಸಭೆ ಸದಸ್ಯರಿಗಿರುವ ಎಲ್ಲ ಅರ್ಹತೆಗಳು ಕಡ್ಡಾಯ
  • ಸರ್ಕಾರಿ, ಖಾಸಗಿ ನಿಯಂತ್ರಣಕ್ಕೆ ಒಳಪಟ್ಟ ಲಾಭದಾಯಕ ಹುದ್ದೆಯಲ್ಲಿರಬಾರದು

ಸಂಬಳ: ರಾಷ್ಟ್ರಪತಿಗಳು ಪ್ರತಿ ತಿಂಗಳು 5 ಲಕ್ಷ ರೂಪಾಯಿಗಳ ಸಂಬಳವನ್ನು ಪಡೆಯುತ್ತಾರೆ. ವೇತನವನ್ನು 1951 ರ ಅಧ್ಯಕ್ಷರ ಸಾಧನೆ ಮತ್ತು ಪಿಂಚಣಿ ಕಾಯ್ದೆಯಡಿ ನಿರ್ಧರಿಸಲಾಗುತ್ತದೆ. ದೇಶದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ಏಕೈಕ ಸರ್ಕಾರಿ ಅಧಿಕಾರಿ ಇವರಾಗಿರುತ್ತಾರೆ. 2018 ರಲ್ಲಿ ಅಧ್ಯಕ್ಷರ ವೇತನವನ್ನು 1,50 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಯಿತು. ಮಾಸಿಕ ಸಂಬಳದ ಹೊರತಾಗಿ ರಾಷ್ಟ್ರಪತಿಗಳು ಹಲವಾರು ಭತ್ಯೆಗಳನ್ನೂ ಪಡೆಯುತ್ತಾರೆ.

ರಾಷ್ಟ್ರಪತಿ ಭವನದಲ್ಲಿ ನಿವಾಸ: ಇದು ವಿಶ್ವದಲ್ಲಿಯೇ ಅತಿ ದೊಡ್ಡ ನಿವಾಸವಾಗಿದೆ. 1929 ರಲ್ಲಿ ಇದನ್ನು ನಿರ್ಮಿಸಲಾಗಿದೆ. 340 ಕೋಣೆಗಳ ಅಧಿಕೃತ ನಿವಾಸದಲ್ಲಿ ಸ್ವಾಗತ ಸಭಾಂಗಣಗಳು, ಅತಿಥಿ ಕೊಠಡಿಗಳು, ಉದ್ಯಾನಗಳು, ದೊಡ್ಡ ತೆರೆದ ಸ್ಥಳಗಳು, ಅಂಗರಕ್ಷಕ ಮತ್ತು ಸಿಬ್ಬಂದಿ, ಅಶ್ವಶಾಲೆಗಳು, ಕಚೇರಿಗಳು ಇವೆ.

ರಾಷ್ಟ್ರಪತಿ ಭವನವನ್ನು ಅಸಾಧಾರಣ ಕಲ್ಪನೆಯ ಮೇಲೆ ನಿರ್ಮಿಸಲಾಗಿದೆ. ವಾಸ್ತುಶಿಲ್ಪಿಗಳಾದ ಸರ್.ಎಡ್ವಿನ್ ಲುಟಿನ್ಸ್ ಮತ್ತು ಹರ್ಬರ್ಟ್ ಬೇಕರ್ ಅವರ ರಚನೆಯಾಗಿದೆ. ಇದರ ಪೂರ್ಣ ವಿಸ್ತೀರ್ಣ 320 ಎಕರೆಯಷ್ಟಿದ್ದು, ನಿವಾಸದ ಕಟ್ಟಡವು 5 ಎಕರೆಯಷ್ಟಿದೆ. ಇದು "ಎಚ್" ಆಕಾರದಲ್ಲಿದೆ. ಇದಲ್ಲದೇ, ಶಿಮ್ಲಾ ಮತ್ತು ಹೈದರಾಬಾದ್​ನಲ್ಲಿ ರಾಷ್ಟ್ರಪತಿ ಭವನಗಳಿವೆ.

ಮತ್ತೊಂದು ಸಂಗತಿಯೆಂದರೆ, ರಾಷ್ಟ್ರಪತಿಗಳು ಬಳಸುವ ಕಾರುಗಳಿಗೆ ಪರವಾನಗಿ ಫಲಕ ಇರುವುದಿಲ್ಲ. ಬದಲಿಗೆ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭವನ್ನು ಹೊಂದಿರುತ್ತವೆ. ಅಧ್ಯಕ್ಷರ ಅಂಗರಕ್ಷಕ ಪಡೆ (ಪಿಬಿಜಿ) ಭದ್ರತೆಯನ್ನು ನೀಡಲಾಗಿರುತ್ತದೆ. ಇದು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅತ್ಯಂತ ಹಿರಿಯ ಮಾತ್ರವಲ್ಲದೇ ಅತ್ಯಂತ ಹಳೆಯ ತುಕಡಿಯಾಗಿದೆ. ಇದು ವಿಶ್ವದ ಏಕೈಕ ಕುದುರೆ ಸವಾರಿ ಮಿಲಿಟರಿ ಘಟಕವಾಗಿದೆ.

ನಿವೃತ್ತಿಯ ಸವಲತ್ತುಗಳು:

  • ತಿಂಗಳಿಗೆ 1.5 ಲಕ್ಷ ರೂಪಾಯಿ ಪಿಂಚಣಿ
  • ಕಾರ್ಯದರ್ಶಿ ನೇಮಕ, ತಿಂಗಳಿಗೆ 30 ಸಾವಿರ ಸಂಬಳ
  • ಸುಸಜ್ಜಿತ ಮತ್ತು ಬಾಡಿಗೆ ಮುಕ್ತ ಬಂಗಲೆ
  • ಎರಡು ಉಚಿತ ಸ್ಥಿರ ದೂರವಾಣಿ ಹಾಗೂ ಮೊಬೈಲ್ ಫೋನ್
  • ಐದು ವೈಯಕ್ತಿಕ ಉದ್ಯೋಗಿಗಳು
  • ಉಚಿತ ರೈಲು ಅಥವಾ ವಿಮಾನ ಪ್ರಯಾಣ

ಇದನ್ನೂ ಓದಿ: ಇಂದು ಹೊಸ ರಾಷ್ಟ್ರಪತಿ ಘೋಷಣೆ: ಒಡಿಶಾದಲ್ಲಿ ಸಿದ್ಧವಾದ ಗೆಲುವಿನ "ಸಿಹಿ"

Last Updated : Jul 21, 2022, 3:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.