ಕೋಲ್ಕತ್ತಾ: ಭಾರತೀಯ ಅಂಚೆ ಪಾರ್ಸೆಲ್ಗೆ ಬಳಸುತ್ತಿದ್ದ ಬಟ್ಟೆ ಮತ್ತು ಸೆಣಬಿನ ಕವರ್ ಇನ್ಮುಂದೆ ಕಣ್ಮರೆಯಾಗುವ ಸಾಧ್ಯತೆ ಇದೆ. ಕಾರಣ ಬಟ್ಟೆ ಮತ್ತು ಸೆಣಬಿನ ಕವರ್ಗಳು ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗುತ್ತಿರುವುದು. ಈ ಹಿನ್ನೆಲೆ ಅಂಚೆ ಇಲಾಖೆ ಕೂಡ ದೇಶಾದ್ಯಂತ ಕಾರ್ಪೊರೇಟ್ ಮಾದರಿ ಬಬಲ್, ಪ್ಲಾಸ್ಟಿಕ್ ಮತ್ತು ಪಾಲಿಥೆನ್ ಪಾರ್ಸೆಲ್ ಮಾದರಿ ಅಳವಡಿಸಿಕೊಳ್ಳಲಿದೆ.
ಶತಮಾನದ ಹಿಂದಿನ ಈ ಪದ್ದತಿ ಬದಲಾವಣೆ ಆಗುತ್ತಿರುವ ಕುರಿತು ಮಾತನಾಡಿರುವ ಪಶ್ಚಿಮ ಬಂಗಾಳ ಸರ್ಕಲ್, ಅಂಚೆ ಕಚೇರಿ ಆಧುನೀಕರಣ ಆಗುತ್ತಿದ್ದು, ಬದಲಾವಣೆ ಸಮಯದಲ್ಲಿ ವೇಗವನ್ನು ಉಳಿಸಿಕೊಳ್ಳಲು ಸಮರ್ಥನೀಯವಾಗಿದೆ ಎಂದಿದೆ.
ಸೆಣಬು ಅಥವಾ ಬಟ್ಟೆ ಟ್ಯಾಂಪರ್ ಪ್ರೂವ್ ಆಗಿರುವುದಿಲ್ಲ. ಇದರಲ್ಲಿ ಅನೇಕ ಸಮಸ್ಯೆ ಇದೆ. ಬಹುತೇಕ ಪ್ರಕರಣದಲ್ಲಿ ವಸ್ತುಗಳು ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಆಧುನೀಕರಣದ ಪ್ಲಾಸ್ಟಿಕ್ ಕವರ್ ರ್ಯಾಪ್ ಮಾಡುವುದು ವಸ್ತುಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಯಾವುದೇ ನೈಸರ್ಗಿಕ ಅನಾಹುತ ಅಥವಾ ಇನ್ನಿತರ ಸಮಸ್ಯೆಯಲ್ಲೂ ವಸ್ತುಗಳ ಸಹಜ ಸ್ಥಿತಿ ಕಾಪಾಡಬಹುದು. ಖಾಸಗಿ ಆನ್ಲೈನ್ ಡೆಲಿವರಿ ವ್ಯವಸ್ಥೆಯಂತೆ ನಾವು ಪ್ಯಾಕಿಂಗ್ ಮಾಡುತ್ತೇವೆ ಎಂದು ಪಶ್ಚಿಮ ಬಂಗಾಳ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಜೆ ಚಾರುಕೆಶಿ ತಿಳಿಸಿದ್ದಾರೆ.
ಅಂಚೆ ಇಲಾಖೆ ಮಾಹಿತಿ ಅನುಸಾರ, ಸರಕುಗಳನ್ನು ಏಳು ರೀತಿಯಲ್ಲಿ ಪ್ಯಾಕಿಂಗ್ ಮಾಡಲಾಗುವುದು. ಅದು ಕೂಡ ಕಡಿಮೆ ವೆಚ್ಚದಲ್ಲಿ. ದೇಶದ ಯಾವುದೇ ಮೂಲೆಗೂ ನೀವು ಪಾರ್ಸೆಲ್ ಮಾಡಿದರೆ, ದೊಡ್ಡ ವಸ್ತುಗಳಿಗೆ 77 ರೂ ರಿಂದ 450 ರೂ ವೆಚ್ಚದಲ್ಲಿ ಕಳುಹಿಸಬಹುದಾಗಿದೆ. ಪ್ಯಾಕೆಟ್ ಚಾರ್ಜ್ ಅನ್ನು ಮಾತ್ರ ಗ್ರಾಹಕರು ನೀಡಬೇಕಿದ್ದು, ಉಳಿದ ಪ್ಯಾಕಿಂಗ್ ಹಣ ಇಲಾಖೆ ಭರಿಸಲಿದೆ.
ಸದ್ಯ ಈ ವ್ಯವಸ್ಥೆಯನ್ನು ಪಾರ್ಕ್ ಸ್ಟ್ರೀಟ್ ಮತ್ತು ಹೌರಾದಲ್ಲಿನ ಪಶ್ಚಿಮ ಬಂಗಾಳ ಸರ್ಕಲ್ ಜಿಪಿಒದಲ್ಲಿ ಮಾಡಲಾಗಿದೆ. ರಾಜ್ಯದ ಉಳಿದ ಕಡೆ ಶೀಘ್ರದಲ್ಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.
ಇದನ್ನೂ ಓದಿ: ಹೈಫೈ ಕೆಲಸ ಬಿಟ್ಟು ಸ್ವಂತ ಕಂಪನಿ ಕಟ್ಟಿದ ಯುವಕರು: 100 ಮಂದಿಗೆ ಉದ್ಯೋಗ ಕೊಟ್ಟ 'ಡಿಸೈನ್ ವಾಲ್ಸ್'