ETV Bharat / bharat

ನ. 26ರಂದು ಭಾರತದ ವಿದೇಶಾಂಗ ಕಾರ್ಯದರ್ಶಿಯಿಂದ ನೇಪಾಳ ಭೇಟಿ - ಮನೋಜ್ ಮುಕುಂದ್ ನರವಾಣೆ ನೇಪಾಳ ಭೇಟಿ

ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ನೇಪಾಳಕ್ಕೆ ಭೇಟಿ ನೀಡಲಿದ್ದು, ದ್ವಿಪಕ್ಷೀಯ ಸಹಕಾರ ಸಂಬಂಧ ಚರ್ಚೆ ನಡೆಸಲಿದ್ದಾರೆ.

Harsh Vardhan Shringla
ಹರ್ಷ್​ ವರ್ಧನ್ ಶ್ರಿಂಗ್ಲಾ
author img

By

Published : Nov 23, 2020, 6:58 PM IST

ಕಠ್ಮಂಡು (ನೇಪಾಳ): ಭಾರತ ಹಾಗೂ ನೇಪಾಳದ ನಡುವೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ನವೆಂಬರ್ 26ರಂದು ಉನ್ನತಮಟ್ಟದ ರಾಜತಾಂತ್ರಿಕ ಅಧಿಕಾರಿಯೊಬ್ಬರು ನೇಪಾಳಕ್ಕೆ ಭೇಟಿ ನೀಡಲಿದ್ದಾರೆ.

ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯಾದ ಹರ್ಷವರ್ಧನ್ ಶ್ರಿಂಗ್ಲಾ ನೇಪಾಳಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದು, ನವೆಂಬರ್ 26-27ಕ್ಕೆ ಬರಲಿದ್ದಾರೆ ಎಂದು ನೇಪಾಳದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ.

ಕೇಂದ್ರ ಸರ್ಕಾರವೂ ಈ ಮಾಹಿತಿ ನೀಡಿದ್ದು, ಭಾರತೀಯ ಸೇನಾಪಡೆಯ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಹಾಗೂ ರಾ ಸಂಸ್ಥೆಯ ಸಮಂತ್ ಗೋಯೆಲ್​ ಇತ್ತೀಚೆಗಷ್ಟೇ ನೇಪಾಳ ಭೇಟಿ ನೀಡಿದ್ದು, ಇದಾದ ನಂತರ ಶ್ರಿಂಗ್ಲಾ ಎರಡು ದಿನಗಳ ಭೇಟಿ ನೀಡಲಿದ್ದಾರೆ.

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರ ಹಾಗೂ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲು ಶ್ರಿಂಗ್ಲಾ ನೇಪಾಳದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರಿಂಗ್ಲಾ ಅವರು ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ, ಪ್ರಧಾನಿ ಕೆ.ಪಿ.ಶರ್ಮಾ ಒಲಿ, ವಿದೇಶಾಂಗ ಸಚಿವ ಪ್ರದೀಪ್ ಗಯಾವಲಿ ಮತ್ತು ವಿರೋಧ ಪಕ್ಷದ ನಾಯಕ ಶೇರ್ ಬಹದ್ದೂರ್ ದೀಬಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.