ಚೆನ್ನೈ(ತಮಿಳುನಾಡು): ಭಾರತೀಯ ಕೋಸ್ಟ್ ಗಾರ್ಡ್ ಕಂದಾಯ ಗುಪ್ತಚರ ಮತ್ತು ಕಸ್ಟಮ್ಸ್ ನಿರ್ದೇಶನಾಲಯ ಭರ್ಜರಿಯಾಗಿ ಜಂಟಿ ಕಾರ್ಯಾಚರಣೆ ನಡೆಸಿದೆ. ತಮಿಳುನಾಡಿನ ಮನ್ನಾರ್ ಗಲ್ಫ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎರಡು ಮೀನುಗಾರಿಕಾ ದೋಣಿಗಳಿಂದ ಸುಮಾರು 20 ಕೋಟಿ ರೂಪಾಯಿ ಮೌಲ್ಯದ 32 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ. ಶ್ರೀಲಂಕಾದಿಂದ ಭಾರತಕ್ಕೆ ಕಳ್ಳಸಾಗಣೆಯಾಗುತ್ತಿತ್ತು ಎಂದು ಕೋಸ್ಟ್ ಗಾರ್ಡ್ ಮೂಲಗಳಿಂದ ತಿಳಿದು ಬಂದಿದೆ.
ಇದನ್ನು ಓದಿ: ಡಿಜಿ, ಐಜಿಪಿ ಸೂಚನೆಯಿಂದ ಪೊಲೀಸರು ಅಲರ್ಟ್: ಮಾದಕ ದಂಧೆ ವಿರುದ್ಧ ವಿಶೇಷ ಕಾರ್ಯಾಚರಣೆ
ಈ ವರ್ಷದ ಫೆಬ್ರವರಿಯಲ್ಲಿ, ತಮಿಳುನಾಡಿನ ಮಂಡಪಂ ಕಡಲತೀರದಿಂದ ಸಮುದ್ರ ಮಾರ್ಗವಾಗಿ ಶ್ರೀಲಂಕಾದಿಂದ ಕಳ್ಳಸಾಗಣೆಯಾಗುತ್ತಿದ್ದಾಗ ಭಾರತೀಯ ಕೋಸ್ಟ್ ಗಾರ್ಡ್ ಸುಮಾರು 10.5 ಕೋಟಿ ಮೌಲ್ಯದ 17.74 ಕೆಜಿ ಚಿನ್ನದ ಸರಕನ್ನು ವಶಪಡಿಸಿಕೊಂಡಿತ್ತು. ಇಂತಹುದು ಘಟನೆ ಮತ್ತೆ ಮರುಕಳಿಸಿದೆ. ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ), ಚೆನ್ನೈನ ಗುಪ್ತಚರ ಇಲಾಖೆ ನೀಡಿದ ಅಧಿಕೃತ ಮಾಹಿತಿಯ ಆಧಾರದ ಮೇಲೆ, ಭಾರತೀಯ ಕೋಸ್ಟ್ ಗಾರ್ಡ್ ಸ್ಟೇಷನ್ ಮಂಡಪಂ ಫೆಬ್ರವರಿ 7 ರಂದು ಇಂಟರ್‌ಸೆಪ್ಟರ್ ಬೋಟ್ (ಐಬಿ) ಸಿ-432 ನಲ್ಲಿ ಜಂಟಿ ತಂಡವನ್ನು ನಿಯೋಜಿಸಿತ್ತು.
ಇದನ್ನು ಓದಿ:'ತೇಲುವ ಚಿನ್ನ'ವೆಂಬ ಅಂಬರ್ ಗ್ರಿಸ್ ತಂದು ಮಾರಾಟಕ್ಕೆ ಯತ್ನಿಸಿದ ಇಬ್ಬರ ಬಂಧನ..!
“ ಹೀಗೆ ನಿಯೋಜನೆಗೊಂಡ ತಂಡವು ಎರಡು ದಿನಗಳ ಕಾಲ ಮನ್ನಾರ್ ಕೊಲ್ಲಿಯಲ್ಲಿ ಅನುಮಾನಾಸ್ಪದ ಚಟುವಟಿಕೆಗಾಗಿ ಕಣ್ಗಾವಲು ಇಟ್ಟಿತ್ತು. ಫೆಬ್ರವರಿ 8 ರ ರಾತ್ರಿ, IB ಅನುಮಾನಾಸ್ಪದ ದೋಣಿಯನ್ನು ಏರಿತ್ತು, ಅದು ಪ್ರತಿಬಂಧಕವನ್ನು ತಪ್ಪಿಸಲು ಹೆಚ್ಚು ವೇಗದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿತು‘‘ ಎಂದು ಚೆನ್ನೈನ ಗುಪ್ತಚರ ಇಲಾಖೆ ಹೇಳಿಕೆ ತಿಳಿಸಿದೆ.
ಸಂಭಾವ್ಯ ಪ್ರದೇಶದಲ್ಲಿ ಐಸಿಜಿ ತಂಡ ಡೈವಿಂಗ್ ಕಾರ್ಯಾಚರಣೆ ನಡೆಸಿದ್ದು, ಸಮುದ್ರದ ತಳದಿಂದ 17.74 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮೀನುಗಾರಿಕಾ ದೋಣಿಯನ್ನು ಸಿಬ್ಬಂದಿ ಸಮೇತ ಮುಂದಿನ ಕಾನೂನು ಕ್ರಮಕ್ಕಾಗಿ ಕೋಸ್ಟಲ್ ಸೆಕ್ಯುರಿಟಿ ಗ್ರೂಪ್, ಮಂಡಪಂ ಇವರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನು ಓದಿ: ಕಾಸರಗೋಡಿನಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಶ.. ಒಬ್ಬ ಆರೋಪಿ ಬಂಧನ
ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಕಳ್ಳನ ಕೈಚಳಕ: ಸಿಸಿ ಕ್ಯಾಮರಾದಲ್ಲಿ ಕಳ್ಳನ ಸೆರೆ!