ನವದಹೆಲಿ: ಪೂರ್ವ ಲಡಾಖ್‌ನಲ್ಲಿ ಚೀನಾ ಹಾಗೂ ಪಾಕಿಸ್ತಾನದ ಗಡಿಯಲ್ಲಿನ ಕಾರ್ಯಾಚರಣೆ ಮತ್ತು ಪರಿಸ್ಥಿತಿಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ನೇತೃತ್ವದ ಕಮಾಂಡರ್‌ಗಳ ಸಮಾವೇಶವನ್ನು ಇಂದಿನಿಂದ ಆರಂಭವಾಗಿದೆ. ಉನ್ನತ ಮಟ್ಟದ ದ್ವೈವಾರ್ಷಿಕ ಸಭೆ ಇದಾಗಿದ್ದು, ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ನಿರ್ಧಾರಗಳನ್ನು ಕೈಗೊಳ್ಳಲಿದೆ.
ಸೇನಾ ಸಿಬ್ಬಂದಿಯ ಉಪಾಧ್ಯಕ್ಷರು, ಎಲ್ಲಾ ಕಮಾಂಡರ್‌ಗಳು, ಸೇನಾ ಪ್ರಧಾನ ಕಚೇರಿಯ ಪ್ರಧಾನ ಸಿಬ್ಬಂದಿ ಅಧಿಕಾರಿಗಳು (ಪಿಎಸ್‌ಒ) ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ.
ಎರಡು ದಿನಗಳ ಸಮ್ಮೇಳನದಲ್ಲಿ, ಪೂರ್ವ ಲಡಾಕ್‌ನ ಗೋಗ್ರಾ, ಹಾಟ್ ಸ್ಪ್ರಿಂಗ್ಸ್, ಡೆಮ್‌ಚಾಕ್ ಮತ್ತು ಡೆಪ್ಸಾಂಗ್‌ನಲ್ಲಿ ವಿವಾದಿತ ಪ್ರದೇಶಗಳಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಪ್ರಸ್ತುತ ನಿಯೋಜಿಸಿರುವ ಸೈನ್ಯ, ಕಾರ್ಯಾಚರಣೆ ಬಗ್ಗೆ ಉನ್ನತ ಅಧಿಕಾರಿಗಳು ಚರ್ಚಿಸಲಿದ್ದಾರೆ.
ಇದನ್ನೂ ಓದಿ: ಮೂವರು ಗಗನಯಾತ್ರಿಗಳನ್ನು ಹೊತ್ತು ಆಕಾಶಕ್ಕೆ ಜಿಗಿದ ಮೊದಲ ಮಾನವ ಸಹಿತ ಬಾಹ್ಯಾಕಾಶ ನೌಕೆ..!
ಪಶ್ಚಿಮ (ಲಡಾಖ್), ಮಧ್ಯಮ (ಉತ್ತರಾಖಂಡ್, ಹಿಮಾಚಲ) ಮತ್ತು ಪೂರ್ವ (ಸಿಕ್ಕಿಂ, ಅರುಣಾಚಲ) ವಲಯಗಳ ಮೂರು ಕ್ಷೇತ್ರಗಳಲ್ಲಿ ಚೀನಾ ಸೈನ್ಯ, ಫಿರಂಗಿ ಮತ್ತು ರಕ್ಷಾಕವಚ ನಿಯೋಜನೆಯನ್ನು ಹೆಚ್ಚಿಸಿದೆ.
ಪೂರ್ವ ಲಡಾಕ್‌ನಲ್ಲಿ ಗಾಲ್ವಾನ್ ಕಣಿವೆ ಘರ್ಷಣೆಯ ಒಂದು ವರ್ಷದ ನಂತರ, ಚೀನಾ ಇನ್ನೂ ಎಲ್‌ಎಸಿಯಲ್ಲೇ ಮೊಕ್ಕಾಂ ಹೂಡಿದೆ. ಚೀನಾವನ್ನು ಎದುರಿಸಲು ಭಾರತೀಯ ಸೇನೆಯೂ ಸಜ್ಜಾಗಿದೆ. ಘರ್ಷಣೆಯ ಹಂತಗಳಲ್ಲಿ ಗಡಿ ವಿವಾದಗಳನ್ನು ಪರಿಹರಿಸಲು ಭಾರತ ಮತ್ತು ಚೀನಾದ ಮಿಲಿಟರಿ ಪ್ರತಿನಿಧಿಗಳು 11 ಸುತ್ತಿನ ಮಾತುಕತೆ ನಡೆಸಿದರು.