ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರ ದಮನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾಗ ಗುಂಡು ತಗುಲಿ ತೀವ್ರ ಗಾಯಗೊಂಡ ಭಾರತೀಯ ಸೇನೆಯ ಶ್ವಾನ "ಅಕ್ಸೆಲ್" ತನ್ನ ಉಸಿರು ನಿಲ್ಲಿಸಿದೆ. ಸೇನೆಯ ತುಕಡಿಯಿಂದ ಸಕಲ ಗೌರವಗಳೊಂದಿಗೆ ಇಂದು ಅಂತಿಮ ನಮನ ಸಲ್ಲಿಸಿ ಬೀಳ್ಕೊಡಲಾಯಿತು.
ಬಾರಾಮುಲ್ಲಾದಲ್ಲಿ ನಿನ್ನೆ ಉಗ್ರರು ಅಡಗಿದ್ದ ಪ್ರದೇಶದ ಮೇಲೆ ಭದ್ರತಾ ಪಡೆಗಳು ದಾಳಿ ಮಾಡಿದ್ದವು. ಕಾರ್ಯಾಚರಣೆಯಲ್ಲಿ ಶ್ವಾನ ಅಕ್ಸೆಲ್ ಉಗ್ರರ ಪತ್ತೆ ಕಾರ್ಯ ನಡೆಸುತ್ತಿತ್ತು. ಈ ವೇಳೆ ಉಗ್ರರ ಗುಂಡಿನ ದಾಳಿಗೀಡಾಗಿ ಸಾವನ್ನಪ್ಪಿದೆ.
ವೈದ್ಯಕೀಯ ಪರೀಕ್ಷೆಯ ವೇಳೆ ತಲೆ, ದೇಹದಲ್ಲಿ ಮೂರು ಗುಂಡುಗಳು ಹೊಕ್ಕಿದ್ದು ಕಂಡುಬಂದಿದೆ. 10 ಕ್ಕೂ ಹೆಚ್ಚು ಕಡೆ ಗಾಯವಾಗಿತ್ತು. ಎಲುಬು ಮುರಿದಿದ್ದು ಗೊತ್ತಾಗಿತ್ತು. ಅಕ್ಸೆಲ್ನನ್ನು ಕೆಲ ದಿನಗಳ ಹಿಂದಷ್ಟೇ ಬಾರಾಮುಲ್ಲಾ ಪ್ರದೇಶದಲ್ಲಿ ಉಗ್ರರ ಪತ್ತೆ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಇದಕ್ಕಾಗಿ ಕಠಿಣ ತರಬೇತಿ ನೀಡಲಾಗಿತ್ತು. ಆಕ್ಸೆಲ್ ಈ ಮೊದಲು ಹಲವು ಯಶಸ್ವಿ ಕಾರ್ಯಾಚರಣೆಗಳ ಭಾಗವಾಗಿತ್ತು. ಸಮರ್ಥ ಆಕ್ರಮಣಕಾರಿ ಸೇನಾ ನಾಯಿಯಾಗಿತ್ತು.
ಇದನ್ನೂ ಓದಿ: ಚೆಸ್ ಬೋರ್ಡ್ ಮೇಲೆ ಕಾಯಿಗಳ ರಣೋತ್ಸಾಹದ ನೃತ್ಯ, ಈ ವಿಡಿಯೋ ನೋಡಿ!