ದೆಹಲಿ : ದೇಶದ ಗಡಿ ಕಾಯುವ ಯೋಧರು ಇಂದು ಸಂಭ್ರಮದಿಂದ ಹೊಸ ವರ್ಷ ಆಚರಿಸಿದರು. ಭಾರತೀಯ ಸೇನೆ ಮತ್ತು ಪಾಕಿಸ್ತಾನ ಸೇನೆಯ ಯೋಧರು ಇಂದು ಗಡಿ ನಿಯಂತ್ರಣ ರೇಖೆಯ ನಾಲ್ಕು ಸ್ಥಳಗಳಲ್ಲಿ ಪರಸ್ಪರ ಶುಭಾಶಯ ತಿಳಿಸಿ, ಸಿಹಿ ಹಂಚಿಕೊಂಡರು.
ಎಲ್ಲೆಡೆ ಇಂದು ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಪ್ರತಿಯೊಬ್ಬರು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.
ಸಿಹಿ ಹಂಚೋದು, ಕೇಕ್ ಕತ್ತರಿಸೋದು, ಪಟಾಕಿ ಸಿಡಿಸೋದು, ಹೀಗೆ ಆತ್ಮೀಯರೆಲ್ಲ ಸೇರಿ ಹೊಸ ವರ್ಷ ಆಚರಿಸಿದ್ದಾರೆ. ಗಡಿ ಕಾಯುವ ಯೋಧರು ಸಹ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಮಾನವೀಯತೆ ನೆರವು: ಅಫ್ಘಾನಿಸ್ತಾನಕ್ಕೆ ಭಾರತದಿಂದ 5 ಲಕ್ಷ ಕೋವಿಡ್ ಲಸಿಕೆ ಪೂರೈಕೆ
ಅಧಿಕಾರಿಗಳೆಲ್ಲ ಸೇರಿ ಸಿಹಿ ಹಂಚಿ ಹೊಸ ವರ್ಷದ ಸಂಭ್ರಮ ವಿನಿಮಯ ಮಾಡಿಕೊಂಡರು. ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಜಮ್ಮು ಕಾಶ್ಮೀರದ ಪೂಂಛ್ ಹಾಗೂ ಗುಜರಾತ್‌ನ ಕಛ್‌ನಲ್ಲಿ ಯೋಧರು ನೃತ್ಯ ಮಾಡಿ ಗಮನ ಸೆಳೆದರು.