ನವದೆಹಲಿ: ಚೀನಾದ ಗಡಿಯಲ್ಲಿ ಭಾರತ ಮತ್ತೊಮ್ಮೆ ಭಾರಿ ಸಮರಾಭ್ಯಾಸ ನಡೆಸಲು ಸಿದ್ಧತೆ ನಡೆಸಿದೆ. ಮುಂದಿನ ತಿಂಗಳ ಆರಂಭದಲ್ಲಿ ಪೂರ್ವ ವಲಯದಲ್ಲಿ ಪ್ರಳಯ್ ಹೆಸರಿನಲ್ಲಿ ಈ ಯುದ್ಧ ವ್ಯಾಯಮಾ ನಡೆಸಲಿದೆ. ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಮುಂದುವರೆದಿದ್ದು, ಭಾರತೀಯ ವಾಯುಪಡೆ (ಐಎಎಫ್) ಗಡಿಯಲ್ಲಿ ಬೃಹತ್ ಸಮರಾಭ್ಯಾಸಕ್ಕೆ ಸಿದ್ಧವಾಗಿದೆ.
ಪೂರ್ವ ವಲಯದಲ್ಲಿ, ಅರುಣಾಚಲ ಪ್ರದೇಶ, ಅಸ್ಸೋಂ ಮತ್ತು ಈಶಾನ್ಯ ರಾಜ್ಯಗಳು ಫೈಟರ್ ಜೆಟ್‌ಗಳು, ಪ್ರಳಯ್ ಕ್ಷಿಪಣಿ, ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳೊಂದಿಗೆ ದೊಡ್ಡ ಪ್ರಮಾಣದ ಕಸರತ್ತುಗಳನ್ನು ನಡೆಸುತ್ತವೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಲಡಾಖ್ ಗಡಿಯಲ್ಲಿ ಯುದ್ಧ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಈ ಬೆಳವಣಿಗೆ ನಡೆದಿದೆ ಎಂಬುದು ಗಮನಾರ್ಹ.
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಭಾರತೀಯ ವಾಯುಪಡೆ (ಐಎಎಫ್) ಫೆಬ್ರವರಿ 1 ರಿಂದ 5 ರವರೆಗೆ ಪೂರ್ವ ವಾಯು ಕಮಾಂಡ್‌ನಲ್ಲಿ 'ಪ್ರಳಯ್' ಹೆಸರಿನಲ್ಲಿ 'ಕಮಾಂಡ್ ಲೆವೆಲ್' ಸಮರಾಭ್ಯಸ ನಡೆಸಲು ಸಿದ್ಧತೆ ನಡೆಸಿದೆ. ರಾಷ್ಟ್ರೀಯ ಮಾಧ್ಯಮ ವರದಿಗಳು ಇದನ್ನು ಬಹಿರಂಗಪಡಿಸಿವೆ. ಈ ಸೇನಾ ವ್ಯಾಯಾಮವು ಹಸಿಮಾರಾ, ತೇಜ್‌ಪುರ್ ಮತ್ತು ಚಬುವಾ ಮುಂತಾದ ವಾಯುನೆಲೆಗಳಿಂದ ನಡೆಸಲಾಗುವುದು. ರಫೇಲ್, ಸುಖೋಯ್-30MKI, ಚಿನೂಕ್, ಅಪಾಚೆ ಹೆಲಿಕಾಪ್ಟರ್‌ಗಳು, C-130J ಸೂಪರ್ ಹರ್ಕ್ಯುಲಸ್ ವಿಮಾನಗಳು ಮತ್ತು ಡ್ರೋನ್‌ಗಳಂತಹ ಯುದ್ಧ ವಿಮಾನಗಳು ಈ ಕವಾಯತುಗಳಲ್ಲಿ ಭಾಗವಹಿಸಲಿವೆ.
ಇತ್ತೀಚಿನ ದಿನಗಳಲ್ಲಿ ಪೂರ್ವ ವಲಯದಲ್ಲಿ ನಡೆಯುತ್ತಿರುವ ಎರಡನೇ ಪ್ರಮುಖ ಯುದ್ಧ ವ್ಯಾಯಾಮಾ ಇದಾಗಿದೆ. ಕಳೆದ ವರ್ಷ ಡಿಸೆಂಬರ್ 15-16 ರಂದು ಪೂರ್ವ ವಲಯದಲ್ಲಿ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಎರಡು ದಿನಗಳ ಯುದ್ಧ ವ್ಯಾಯಾಮ ನಡೆಸಿದೆ. ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಡಿಸೆಂಬರ್ 9 ರಂದು ನಡೆದ ಸಂಘರ್ಷದ ಕೆಲವೇ ದಿನಗಳಲ್ಲಿ ಈ ತಂತ್ರಗಳು ನಡೆದವು. ಆದಾಗ್ಯೂ, ಯುದ್ಧ ಕುಶಲತೆಗೂ ಘರ್ಷಣೆಗೂ ಯಾವುದೇ ಸಂಬಂಧವಿಲ್ಲ ಎಂದು ವಾಯುಪಡೆ ನಂತರ ಘೋಷಿಸಿತು.
ಓದಿ: ಚೀನಾ ಮಿಸೈಲ್ಗಳ ಶತ್ರು 'ಪ್ರಳಯ್' ಖಂಡಾಂತರ ಕ್ಷಿಪಣಿ ಉಡ್ಡಯನ ಯಶಸ್ವಿ
ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶುಕ್ರವಾರ ಲಡಾಖ್‌ನ ಗಡಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. 'ಯುದ್ಧಕ್ಕೆ ಸಿದ್ಧನಾ?' ಅಂತಾ ಕ್ಸಿ ಜಿನ್‌ಪಿಂಗ್ ಅವರು ಪಿಎಲ್‌ಎ ಪ್ರಧಾನ ಕಚೇರಿಯಿಂದ ಸೇನಾ ಯೋಧರೊಂದಿಗೆ ಮಾತುಕತೆ ನಡೆಸಿದರು. ಯುದ್ಧದ ಸಿದ್ಧತೆಗಳು ಮತ್ತು ಗಡಿಗಳಲ್ಲಿನ ಪರಿಸ್ಥಿತಿಯ ಬಗ್ಗೆ ವಿಚಾರಿಸಿದರು ಎಂದು ಅಧಿಕೃತ ಮಾಧ್ಯಮಗಳು ಬಹಿರಂಗಪಡಿಸಿವೆ.
ಕ್ಸಿ ಜಿನ್‌ಪಿಂಗ್ ತಮ್ಮ ಗಡಿ ಪಡೆಗಳ ಗಸ್ತು ಮತ್ತು ನಿರ್ವಹಣಾ ಕಾರ್ಯದ ಬಗ್ಗೆಯೂ ವಿಚಾರಿಸಿದರು. ಇಷ್ಟೇ ಅಲ್ಲ, ಸೈನಿಕರನ್ನು ಗಡಿ ರಕ್ಷಣೆಯ ಮಾದರಿಗಳ ಬಗ್ಗೆ ಶ್ಲಾಘಿಸಿದರು. ಸೈನಿಕರ ತಮ್ಮ ಪ್ರಯತ್ನಗಳು ಮುಂದುವರೆಸಲು ಮತ್ತು ಹೊಸ ಲಾಭಗಳನ್ನು ನೀಡಲು ಯೋಧರಿಗೆ ಪ್ರೋತ್ಸಾಹಿಸಿದರು ಎಂದು ಅಧಿಕೃತ ಮಾಧ್ಯಮವು ವರದಿ ಮಾಡಿದೆ. 2020ರ ಮೇ 5ರಂದು ಪೂರ್ವ ಲಡಾಖ್ ಪ್ರದೇಶವು ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ನಡೆದ ಘರ್ಷಣೆ ನಂತರ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ.
ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ಕುರಿತು ಉಭಯ ರಾಷ್ಟ್ರಗಳು 17 ಸುತ್ತಿನ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗಳನ್ನು ನಡೆಸಿವೆ. ಆದರೆ, ಉಳಿದ ಸಮಸ್ಯೆಗಳ ಪರಿಹಾರದಲ್ಲಿ ಯಾವುದೇ ಮಹತ್ವದ ಮಾತುಕತೆ ಮುಂದುವರಿಸಲು ಸಾಧ್ಯವಾಗಿಲ್ಲ. ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧದ ಒಟ್ಟಾರೆ ಅಭಿವೃದ್ಧಿಗೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಶಾಂತಿ ಮತ್ತು ನೆಮ್ಮದಿ ಅತ್ಯಗತ್ಯವಾಗಿದೆ ಎಂದು ಭಾರತ ಪ್ರತಿಪಾದಿಸುತ್ತಾ ಬಂದಿದೆ.
ಓದಿ: ಭಾರತ - ಚೀನಾ ಗಡಿ ಬಿಕ್ಕಟ್ಟು: ಸೈನಿಕರೊಂದಿಗೆ ಸಂವಾದ ನಡೆಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್