ETV Bharat / bharat

ರಷ್ಯಾ ಮೇಲೆ ನಿರ್ಬಂಧದ ಕರೆಗಳಿಗೆ ಭಾರತ ಒಪ್ಪದೇ ಇರುವುದು ಏಕೆ ಗೊತ್ತಾ?

ಭಾರತದ ನೆರೆಯ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾ ಎರಡೂ ದೇಶಗಳು ರಷ್ಯಾವನ್ನು ಬೆಂಬಲಿಸುತ್ತಿವೆ. ಗಡಿ ಸಮಸ್ಯೆ ಬಂದಾಗ ನಮ್ಮ ವಿರುದ್ಧ ರಷ್ಯಾ ನಿಲ್ಲಬಾರದು ಎಂಬ ಕಾರಣಕ್ಕೆ ಕೂಡ ಭಾರತ ರಷ್ಯಾ ವಿರುದ್ಧ ಮತದಾನ ಮಾಡಿಲ್ಲ ಎಂಬುದು ನಾವಿಲ್ಲಿ ಗಮನಿಸಬೇಕಾಗಿದೆ.

ರಷ್ಯಾ ಮೇಲೆ ನಿರ್ಬಂಧದ ಕರೆಗಳಿಗೆ ಭಾರತ ಒಪ್ಪದೇ ಇರುವುದು ಏಕೆ ಗೊತ್ತಾ?
ರಷ್ಯಾ ಮೇಲೆ ನಿರ್ಬಂಧದ ಕರೆಗಳಿಗೆ ಭಾರತ ಒಪ್ಪದೇ ಇರುವುದು ಏಕೆ ಗೊತ್ತಾ?
author img

By

Published : Feb 26, 2022, 8:03 PM IST

ನವದೆಹಲಿ: ಉಕ್ರೇನ್‌ನ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ನಿಲ್ಲಿಸುವಂತೆ ಒತ್ತಾಯಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಮೇಲೆ ಮತದಾನದಿಂದ ದೂರವಿರಲು ಭಾರತದ ನಿರ್ಧಾರವು ರಷ್ಯಾಗೆ ಬೆಂಬಲ ಎಂದರ್ಥವಲ್ಲ. ಆದರೆ, ರಷ್ಯಾ ವಿರುದ್ಧ ವೋಟ್​ ಮಾಡಿದರೆ ಅದು ಇಂಧನ, ಶಸ್ತ್ರಾಸ್ತ್ರಗಳ ಪೂರೈಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಏಳು ದಶಕಗಳಿಂದ ವ್ಯಾಪಿಸಿರುವ ರಷ್ಯಾದೊಂದಿಗಿನ ತನ್ನ ಸಂಬಂಧವನ್ನು ಬದಲಾಯಿಸುವ ನಿರ್ಣಯದ ಮೇಲೆ ಅಮೆರಿಕದೊಂದಿಗೆ ಮತದಾನದಿಂದ ದೂರವಿತ್ತು. "ರಷ್ಯಾ ಮಾಡಿದ್ದನ್ನು ನಾವು ಬೆಂಬಲಿಸಿಲ್ಲ. ಆದರೆ, ನಾವು ದೂರ ಉಳಿದಿದ್ದೇವೆ. ಇದು ಈಗಿನ ಪರಿಸ್ಥಿತಿಯಲ್ಲಿ ಸರಿಯಾದ ಕ್ರಮವಾಗಿದೆ," ಎಂದು ನಿವೃತ್ತ ಭಾರತೀಯ ರಾಜತಾಂತ್ರಿಕ ಜಿ. ಪಾರ್ಥಸಾರಥಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ "ತಕ್ಷಣದ ಹಿಂಸಾಚಾರವನ್ನು ನಿಲ್ಲಿಸಬೇಕು" ಎಂದು ಮನವಿ ಮಾಡಿದ್ದರು, ರಾಜತಾಂತ್ರಿಕ ಮಾತುಕತೆ ಮೂಲಕ ಶಾಂತಿ ಕಾಪಾಡಬೇಕು ಎಂದು ಮೋದಿ ಕರೆ ನೀಡಿದರು. "ರಷ್ಯಾ ಮತ್ತು ನ್ಯಾಟೋ ಗುಂಪಿನ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಪುಟಿನ್​​ ಅವರಿಗೆ ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ: ನಿರ್ಬಂಧಗಳಿಂದ ಕೆರಳಿದ ರಷ್ಯಾ.. ಅಮೆರಿಕಕ್ಕೆ ಬಾಹ್ಯಾಕಾಶ ಕೇಂದ್ರದ ಬೆದರಿಕೆ

ಆದರೆ, ಉಕ್ರೇನ್​ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬೆನ್ನಲ್ಲೇ ಅಮೆರಿಕ, ಬ್ರಿಟನ್​​, ಜರ್ಮನಿ ಸೇರಿದಂತೆ ಯುರೋಪ್​ ಮಿತ್ರ ರಾಷ್ಟ್ರಗಳು ರಷ್ಯಾದ ಮೇಲೆ ಕಠಿಣ ಆರ್ಥಿಕ ಹಾಗೂ ಇತರ ನಿರ್ಬಂಧಗಳನ್ನು ಹೇರಿವೆ. ಈ ಹಿಂದೆ ರಷ್ಯಾ ಆಪತ್ಕಾಲದಲ್ಲಿ ಭಾರತದ ಸಹಾಯಕ್ಕೆ ಬಂದಿತ್ತು. ಈ ಕಾರಣದಿಂದಾಗಿಯೇ ರಷ್ಯಾ ವಿರುದ್ಧ ಭಾರತ ಮತದಾನ ಮಾಡದೇ ಇರಲು ಇದೂ ಒಂದು ಕಾರಣ ಎಂದು ಪಾರ್ಥಸಾರಥಿ ತಿಳಿಸಿದ್ದಾರೆ.

ಮತ್ತೊಂದು ಕಾರಣವೆಂದರೆ ಭಾರತದ ನೆರೆಯ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾ ಎರಡೂ ದೇಶಗಳು ರಷ್ಯಾವನ್ನು ಬೆಂಬಲಿಸುತ್ತಿವೆ. ಗಡಿ ಸಮಸ್ಯೆ ಬಂದಾಗ ನಮ್ಮ ವಿರುದ್ಧ ರಷ್ಯಾ ನಿಲ್ಲಬಾರದು ಎಂಬ ಕಾರಣವೂ ಒಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.