ನವದೆಹಲಿ: ಭಾರತ ಮತ್ತು ಅಮೆರಿಕ ನೌಕಾಪಡೆಗಳು ಹಿಂದೂ ಮಹಾಸಗರದಲ್ಲಿ ಎರಡು ದಿನಗಳ ಜಂಟಿ ಸಮರಾಭ್ಯಾಸ ನಡೆಸುತ್ತಿದ್ದು, ಅದಕ್ಕೆ ಇಂದಿನಿಂದ ಚಾಲನೆ ಸಿಕ್ಕಿದೆ.
ಈ ಸಮರಾಭ್ಯಾಸದಲ್ಲಿ ಯುಎಸ್ಎಸ್ ರೊನಾಲ್ಡ್, ಎಫ್-18 ಫೈಟರ್ ಜೆಟ್, ಇ-2 ಸಿ ಯುದ್ಧ ವಿಮಾನಗಳು ಅಮೆರಿಕದಿಂದ ಭಾಗಿಯಾಗಿವೆ. ಭಾರತದಿಂದ ಜಾಗ್ವಾರ್, ಸುಖೋಯ್-30 ಎಂಕೆಐ ಯುದ್ಧ ವಿಮಾನ ಭಾಗಿಯಾಗಿದ್ದು, ಐಎಲ್-78, ಐಎನ್ಎಸ್ ಕೊಚ್ಚಿ ಹಾಗೂ ಐಎನ್ಎಸ್ ತೇಗ್ ಯುದ್ಧನೌಕೆ ನಿಯೋಜನೆಗೊಂಡಿವೆ.
ಇದನ್ನೂ ಓದಿರಿ: ಪೊಲೀಸರಿಂದ ಕ್ರೂರವಾಗಿ ಥಳಿತಕ್ಕೊಳಗಾಗಿ ಪ್ರಾಣಬಿಟ್ಟ ವ್ಯಕ್ತಿ.. SI ಅರೆಸ್ಟ್
ಅಮೆರಿಕ - ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಜಂಟಿ ಸಮರಾಭ್ಯಾಸ ಕೈಗೊಳ್ಳಲಾಗಿದೆ. ಜತೆಗೆ ಇಂಡೋ- ಫೆಸಿಫಿಕ್ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಚೀನಾಗೆ ತಿರುಗೇಟು ನೀಡುವ ಉದ್ದೇಶದಿಂದ ಈ ಸಮರಾಭ್ಯಾಸ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.