ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬದ ಅಂಗವಾಗಿ ದೇಶಾದ್ಯಂತ ಇಂದು ವಿಶೇಷ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ನಡೆಯುತ್ತಿದೆ. ಇಂದು ರಾತ್ರಿ 10 ಗಂಟೆಯವರೆಗೆ ದಾಖಲೆಯ 2.25 ಕೋಟಿ ಲಸಿಕೆ ಡೋಸ್ ಹಾಕಲಾಗಿದೆ.
-
India has administered historic 2.25 crore #COVID19 vaccine doses until now - and we are still counting!#VaccineSeva https://t.co/mo45C3yIGp
— Mansukh Mandaviya (@mansukhmandviya) September 17, 2021 " class="align-text-top noRightClick twitterSection" data="
">India has administered historic 2.25 crore #COVID19 vaccine doses until now - and we are still counting!#VaccineSeva https://t.co/mo45C3yIGp
— Mansukh Mandaviya (@mansukhmandviya) September 17, 2021India has administered historic 2.25 crore #COVID19 vaccine doses until now - and we are still counting!#VaccineSeva https://t.co/mo45C3yIGp
— Mansukh Mandaviya (@mansukhmandviya) September 17, 2021
ಮಧ್ಯಾಹ್ನ 1 ಗಂಟೆಯವರೆಗೆ 1 ಕೋಟಿಗೂ ಅಧಿಕ ಕೋವಿಡ್ ವ್ಯಾಕ್ಸಿನೇಷನ್ ಹಾಕಲಾಗಿತ್ತು ಎಂಬ ಮಾಹಿತಿಯನ್ನು ಕೇಂದ್ರ ಆರೋಗ್ಯ ಇಲಾಖೆ ನೀಡಿತ್ತು. ಸಂಜೆ 5 ಗಂಟೆಯವರೆಗೆ ಅದು 2 ಕೋಟಿ ದಾಟಿದೆ ಎಂದು ತಿಳಿದು ಬಂದಿತ್ತು. ಇದೀಗ ರಾತ್ರಿ 10 ಗಂಟೆವರೆಗಿನ ಮಾಹಿತಿ ಪ್ರಕಾರ ದೇಶಾದ್ಯಂತ 2.25 ಕೋಟಿ ವ್ಯಾಕ್ಸಿನೇಷನ್ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ದೇಶಾದ್ಯಂತ 2.25 ಕೋಟಿ ಕೋವಿಡ್ ವ್ಯಾಕ್ಸಿನೇಷನ್ ಹಾಕಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮಾನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ದೇಶಾದ್ಯಂತ 2.25 ಕೋಟಿ ವ್ಯಾಕ್ಸಿನೇಷನ್ (1st & 2nd does)ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಆಗಸ್ಟ್ 31ರಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ದೇಶಾದ್ಯಂತ 1.30 ಕೋಟಿ ಕೋವಿಡ್ ವ್ಯಾಕ್ಸಿನೇಷನ್ ಹಾಕಲಾಗಿತ್ತು.
-
Union Health Minister Mansukh Mandaviya celebrates the administration of over 2 crore #COVID19 vaccines in a single day across the country, with health workers at Safdarjung Hospital in Delhi.
— ANI (@ANI) September 17, 2021 " class="align-text-top noRightClick twitterSection" data="
"Thanks to all health workers. Well done India!," he says pic.twitter.com/EVvKOUN9SD
">Union Health Minister Mansukh Mandaviya celebrates the administration of over 2 crore #COVID19 vaccines in a single day across the country, with health workers at Safdarjung Hospital in Delhi.
— ANI (@ANI) September 17, 2021
"Thanks to all health workers. Well done India!," he says pic.twitter.com/EVvKOUN9SDUnion Health Minister Mansukh Mandaviya celebrates the administration of over 2 crore #COVID19 vaccines in a single day across the country, with health workers at Safdarjung Hospital in Delhi.
— ANI (@ANI) September 17, 2021
"Thanks to all health workers. Well done India!," he says pic.twitter.com/EVvKOUN9SD
2 ಕೋಟಿ ಕೋವಿಡ್ ವ್ಯಾಕ್ಸಿನೇಷನ್ ಡೋಸ್ ಲಸಿಕೆ ನೀಡುತ್ತಿದ್ದಂತೆ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಸಿಹಿ ವಿತರಣೆ ಮಾಡಿ ಕೇಂದ್ರ ಆರೋಗ್ಯ ಸಚಿವರು ಸಂಭ್ರಮಾಚರಣೆ ಮಾಡಿದರು.
ಪ್ರಧಾನಿ ಮೋದಿ ಮೆಚ್ಚುಗೆ
-
Every Indian would be proud of today’s record vaccination numbers.
— Narendra Modi (@narendramodi) September 17, 2021 " class="align-text-top noRightClick twitterSection" data="
I acknowledge our doctors, innovators, administrators, nurses, healthcare and all front-line workers who have toiled to make the vaccination drive a success. Let us keep boosting vaccination to defeat COVID-19.
">Every Indian would be proud of today’s record vaccination numbers.
— Narendra Modi (@narendramodi) September 17, 2021
I acknowledge our doctors, innovators, administrators, nurses, healthcare and all front-line workers who have toiled to make the vaccination drive a success. Let us keep boosting vaccination to defeat COVID-19.Every Indian would be proud of today’s record vaccination numbers.
— Narendra Modi (@narendramodi) September 17, 2021
I acknowledge our doctors, innovators, administrators, nurses, healthcare and all front-line workers who have toiled to make the vaccination drive a success. Let us keep boosting vaccination to defeat COVID-19.
ದೇಶದಲ್ಲಿ ದಾಖಲೆಯ 2.25 ಕೋಟಿ ಕೋವಿಡ್ ವ್ಯಾಕ್ಸಿನೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದಿನ ದಾಖಲೆಯ ಕೋವಿಡ್ ಡೋಸ್ ಬಗ್ಗೆ ಪ್ರತಿ ಭಾರತೀಯನೂ ಹೆಮ್ಮೆ ಪಡುತ್ತಾನೆ ಎಂದಿದ್ದಾರೆ. ಲಸಿಕೆ ನೀಡುವಲ್ಲಿ ಯಶಸ್ವಿಯಾಗಿರುವ ನಮ್ಮ ವೈದ್ಯರು, ಆಡಳಿತ ವಿಭಾಗ, ದಾದಿಯರು, ಆರೋಗ್ಯ ಇಲಾಖೆ ಹಾಗೂ ಎಲ್ಲ ಮುಂಚೂಣಿ ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು. ಕೋವಿಡ್ ಸೋಲಿಸಲು ನಮ್ಮ ಲಸಿಕಾಭಿಯಾನ ಮುಂದುವರೆಸೋಣ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಕೋವಿಡ್ ಅಭಿಯಾನದಲ್ಲಿ ಹೆಚ್ಚಾಗಿ ಭಾಗಿಯಾಗುವಂತೆ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಮನವಿ ಮಾಡಿದ್ದರು. ಈ ಮನವಿಗೆ ಭಾರಿ ಸ್ಪಂದನೆ ಸಿಕ್ಕಿದೆ. ಭಾರತದಲ್ಲಿ ಇಲ್ಲಿಯವರೆಗೆ 85 ಕೋಟಿಗೂ ಅಧಿಕ ಕೋವಿಡ್ ಡೋಸ್ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದ್ದು, ಮುಂದಿನ ಕೆಲ ದಿನಗಳಲ್ಲಿ 100 ಕೋಟಿ ಗುರಿ ಮುಟ್ಟಲಿದ್ದೇವೆ ಎಂದಿದೆ.