ನವದೆಹಲಿ: ಭಾರತವು ಪ್ಯಾಲೆಸ್ಟೈನ್ ಜನರಿಗಾಗಿ ವೈದ್ಯಕೀಯ ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನು ಒಳಗೊಂಡಿರುವ ಮಾನವೀಯ ನೆರವು ರವಾನಿಸಿದೆ. ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ವಾಯುಪಡೆಯ ವಿಮಾನವು ಈಜಿಪ್ಟ್‌ನತ್ತ ಹಾರಾಟ ಮಾಡಿದೆ. ಈ ಕುರಿತು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಭಾನುವಾರ ಮಾಹಿತಿ ನೀಡಿದ್ದಾರೆ.
-
🇮🇳 sends Humanitarian aid to the people of 🇵🇸!
— Arindam Bagchi (@MEAIndia) October 22, 2023 " class="align-text-top noRightClick twitterSection" data="
An IAF C-17 flight carrying nearly 6.5 tonnes of medical aid and 32 tonnes of disaster relief material for the people of Palestine departs for El-Arish airport in Egypt.
The material includes essential life-saving medicines,… pic.twitter.com/28XI6992Ph
">🇮🇳 sends Humanitarian aid to the people of 🇵🇸!
— Arindam Bagchi (@MEAIndia) October 22, 2023
An IAF C-17 flight carrying nearly 6.5 tonnes of medical aid and 32 tonnes of disaster relief material for the people of Palestine departs for El-Arish airport in Egypt.
The material includes essential life-saving medicines,… pic.twitter.com/28XI6992Ph🇮🇳 sends Humanitarian aid to the people of 🇵🇸!
— Arindam Bagchi (@MEAIndia) October 22, 2023
An IAF C-17 flight carrying nearly 6.5 tonnes of medical aid and 32 tonnes of disaster relief material for the people of Palestine departs for El-Arish airport in Egypt.
The material includes essential life-saving medicines,… pic.twitter.com/28XI6992Ph
ಭಾರತದ ಕಲ್ಪಿಸಿರುವ ವೈದ್ಯಕೀಯ ನೆರವಿನಲ್ಲಿ ಅಗತ್ಯ ಜೀವರಕ್ಷಕ ಔಷಧಗಳು, ತುರ್ತು ವೈದ್ಯಕೀಯ ಪರಿಸ್ಥಿತಿಗಳನ್ನು ನಿಭಾಯಿಸುವ ರಕ್ಷಣಾತ್ಮಕ ಮತ್ತು ಶಸ್ತ್ರಚಿಕಿತ್ಸಾ ವಸ್ತುಗಳನ್ನು ಒಳಗೊಂಡಿವೆ. ಗಾಯಾಳುಗಳ ಆರೈಕೆಗೆ ಸಂಬಂಧಿಸಿದ ಸಾಮಗ್ರಿಗಳು ಸಹ ಇದೆ. ಜೊತೆಗೆ ವಿಪತ್ತು ಪರಿಹಾರ ಸಾಮಗ್ರಿಗಳಾದ ಟೆಂಟ್‌ಗಳು, ಬ್ಯಾಗ್ಗಳು, ಟಾರ್ಪಾಲಿನ್‌ಗಳು, ನೀರು ಶುದ್ಧೀಕರಣ ಮಾತ್ರೆಗಳು, ಮೂಲಭೂತ ನೈರ್ಮಲ್ಯ ವಸ್ತುಗಳ ನೆರವನ್ನು ಭಾರತ ಕಲ್ಪಿಸಿದೆ. ಈ ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಸಿ17 ವಿಮಾನವು ದೆಹಲಿ ಸಮೀಪದ ಹಿಂಡನ್ ವಾಯುನೆಲೆಯಿಂದ ಬೆಳಗ್ಗೆ 8 ಗಂಟೆಗೆ ಹಾರಾಟ ಮಾಡಿದ್ದು, ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 3 ಗಂಟೆಗೆ ಇಳಿಯಲಿದೆ.
-
#WATCH | Hindon Air Base, Ghaziabad (Uttar Pradesh) | An IAF C-17 flight carrying nearly 6.5 tonnes of medical aid and 32 tonnes of disaster relief material for the people of Palestine departs for El-Arish airport in Egypt.
— ANI (@ANI) October 22, 2023 " class="align-text-top noRightClick twitterSection" data="
The material includes essential life-saving medicines,… pic.twitter.com/aAlNbhEJ9L
">#WATCH | Hindon Air Base, Ghaziabad (Uttar Pradesh) | An IAF C-17 flight carrying nearly 6.5 tonnes of medical aid and 32 tonnes of disaster relief material for the people of Palestine departs for El-Arish airport in Egypt.
— ANI (@ANI) October 22, 2023
The material includes essential life-saving medicines,… pic.twitter.com/aAlNbhEJ9L#WATCH | Hindon Air Base, Ghaziabad (Uttar Pradesh) | An IAF C-17 flight carrying nearly 6.5 tonnes of medical aid and 32 tonnes of disaster relief material for the people of Palestine departs for El-Arish airport in Egypt.
— ANI (@ANI) October 22, 2023
The material includes essential life-saving medicines,… pic.twitter.com/aAlNbhEJ9L
ಈ ಕುರಿತ ವಿದೇಶಾಂಗ ವಕ್ತಾರ ಅರಿಂದಮ್ ಬಾಗ್ಚಿ ಮಾಹಿತಿ ನೀಡಿದ್ದು, ''ಭಾರತವು ಪ್ಯಾಲೆಸ್ಟೈನ್ ಜನರಿಗೆ ಮಾನವೀಯ ನೆರವು ರವಾನಿಸುತ್ತದೆ. ಪ್ಯಾಲೆಸ್ಟೈನ್ ಜನರಿಗಾಗಿ ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ವಾಯುಪಡೆಯ ವಿಮಾನವು ಸಿ-17 ವಿಮಾನವು ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಟಿದೆ. ಈ ವಸ್ತುವು ಅಗತ್ಯ ಜೀವ ಉಳಿಸುವ ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್‌ಗಳು, ಮಲಗುವ ಬ್ಯಾಗ್ಗಳು, ಟಾರ್ಪಾಲಿನ್‌ಗಳು, ನೈರ್ಮಲ್ಯ ಉಪಯುಕ್ತತೆಗಳು, ನೀರು ಶುದ್ಧೀಕರಣ ಮಾತ್ರೆಗಳು ಇತರ ಅಗತ್ಯ ವಸ್ತುಗಳನ್ನು ಒಳಗೊಂಡಿದೆ'' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
-
#WATCH | Hindon Air Base, Ghaziabad (Uttar Pradesh) | An IAF C-17 flight carrying nearly 6.5 tonnes of medical aid and 32 tonnes of disaster relief material for the people of Palestine departs for El-Arish airport in Egypt. pic.twitter.com/sjWGlzsqSZ
— ANI (@ANI) October 22, 2023 " class="align-text-top noRightClick twitterSection" data="
">#WATCH | Hindon Air Base, Ghaziabad (Uttar Pradesh) | An IAF C-17 flight carrying nearly 6.5 tonnes of medical aid and 32 tonnes of disaster relief material for the people of Palestine departs for El-Arish airport in Egypt. pic.twitter.com/sjWGlzsqSZ
— ANI (@ANI) October 22, 2023#WATCH | Hindon Air Base, Ghaziabad (Uttar Pradesh) | An IAF C-17 flight carrying nearly 6.5 tonnes of medical aid and 32 tonnes of disaster relief material for the people of Palestine departs for El-Arish airport in Egypt. pic.twitter.com/sjWGlzsqSZ
— ANI (@ANI) October 22, 2023
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ಭಾರತವು ಪ್ಯಾಲೆಸ್ಟೈನ್ಗೆ ಮಾನವೀಯ ನೆರವು ರವಾನಿಸಿದೆ. ಅಕ್ಟೋಬರ್ 7ರಂದು ಹಮಾಸ್ನ ದಾಳಿ' ನಡೆಸಿದ ನಂತರ ಇಸ್ರೇಲ್ ಪ್ರತಿದಾಳಿ ಆರಂಭಿಸಿದೆ. ಇದರ ನಡುವೆ ಶನಿವಾರ ಮಾನವೀಯ ನೆರವನ್ನು ಹೊತ್ತ 20 ಟ್ರಕ್‌ಗಳಿಗೆ ಈಜಿಪ್ಟ್‌ನ ರಫಾ ಗಡಿಯ ಮೂಲಕ ಗಾಜಾ ಪಟ್ಟಿಯನ್ನು ಪ್ರವೇಶಿಸಲು ಅನುಮತಿಸಲಾಗಿದೆ.
ಮತ್ತೊಂದೆಡೆ, ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಎರಡು ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಹೊಂದಿರುವ ಎನ್‌ಕ್ಲೇವ್‌ನಲ್ಲಿ ನೆರವಿನ ತುಂಬಾ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ವೈದ್ಯಕೀಯ ನರೆವು ರಾಫಾ ಗಡಿಯನ್ನು ದಾಟಿದೆ. ಗಾಜಾದಲ್ಲಿರುವ ಎಲ್ಲ ಜನರ ತುರ್ತು ಆರೋಗ್ಯ ಅಗತ್ಯಗಳನ್ನು ಪೂರೈಸಲು, ಎಲ್ಲ ಮಾನವೀಯ ಕಾರ್ಯಕರ್ತರ ರಕ್ಷಣೆ, ಆರೋಗ್ಯ ಸಹಾಯಕ್ಕಾಗಿ ನಿರಂತರ ಪ್ರವೇಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. (ಎಎನ್ಐ)
ಇದನ್ನೂ ಓದಿ: ಹಮಾಸ್ ಉಗ್ರರಿರುವ ಗಾಜಾ ಮೇಲೆ ಇಸ್ರೇಲ್ ಭೂದಾಳಿ ತಡೆದ ಅಮೆರಿಕ, ಇಂಗ್ಲೆಂಡ್: ವರದಿ