ETV Bharat / bharat

ದೇಶದಲ್ಲಿ ಮತ್ತೆ 6,538 ಕೋವಿಡ್‌ ಪ್ರಕರಣ; ಮಹಾರಾಷ್ಟ್ರ,ದೆಹಲಿಯಲ್ಲಿ ಒಮಿಕ್ರಾನ್ ಅಬ್ಬರ - ದೇಶದಲ್ಲಿ ಕೋವಿಡ್‌ ಪ್ರಕರಣಗಳು

India Covid-19 cases: ದೇಶದಲ್ಲಿ ಹೊಸದಾಗಿ 6,538 ಮಂದಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಇದರ ನಡುವೆ ಒಮಿಕ್ರಾನ್‌ ಪ್ರಕರಣ ಸಂಖ್ಯೆ 653ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 167 ಒಮಿಕ್ರಾನ್‌ ಕೇಸುಗಳಿದ್ದರೆ, ನವದೆಹಲಿಯಲ್ಲಿ 165 ರೂಪಾಂತರಿ ಸೋಂಕು ಪ್ರಕರಣಗಳು ವರದಿಯಾಗಿವೆ.

india reports 6358 new cases
India Covid cases: ದೇಶದಲ್ಲಿ ಮತ್ತೆ 6,538 ಕೋವಿಡ್‌ ಪ್ರಕರಣಗಳು; 293 ಮಂದಿ ಬಲಿ
author img

By

Published : Dec 28, 2021, 10:43 AM IST

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 6,538 ಮಂದಿಗೆ ಕೊರೊನಾ ಸೋಂಕು ತಗಲಿದ್ದು, 293 ಸೋಂಕಿತರು ಬಲಿಯಾಗಿದ್ದಾರೆ. ಇದೇ ಅವಧಿಯಲ್ಲಿ 6,450 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತೊಂದೆಡೆ, ರೂಪಾಂತರಿ ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ 653 ತಲುಪಿದೆ.

ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3 ಕೋಟಿ 47 ಲಕ್ಷ 99 ಸಾವಿರದ 691ಕ್ಕೆ ಏರಿಕೆಯಾಗಿದೆ. ಈ ಪೈಕಿ 4 ಲಕ್ಷ 80 ಸಾವಿರದ 290 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 75,456 ಸಕ್ರಿಯ ಪ್ರಕರಣಗಳಿವೆ. ಈವರೆಗೆ 3 ಕೋಟಿ 42 ಲಕ್ಷದ 43 ಸಾವಿರದ 945 ಮಂದಿ ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ.

ಲಸಿಕೆ ವಿತರಣೆಗೆ ವೇಗ:

ದೇಶದಲ್ಲಿ ಲಸಿಕೆ ವಿತರಣೆ ವೇಗವಾಗಿ ಮುಂದುವರೆದಿದ್ದು, ನಿನ್ನೆ 72,87,547 ಜನರಿಗೆ ಲಸಿಕೆ ನೀಡಲಾಗಿದೆ. ಈವರೆಗೆ ವಿತರಿಸಿರುವ ಒಟ್ಟು ಡೋಸ್‌ಗಳ ಸಂಖ್ಯೆಯನ್ನು 1,42,46,81,736ಕ್ಕೆ ಏರಿಕೆಯಾಗಿದೆ.

ಒಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ನಿರ್ಬಂಧಗಳಿಗೆ ಮುಂದಾಗಿವೆ. ರಾಜ್ಯದಲ್ಲಿ ಇಂದಿನಿಂದ 10 ದಿನಗಳ ಕಾಲ ನೈಟ್‌ ಕರ್ಫ್ಯೂ ಜಾರಿಗೆ ಬರಲಿದೆ.

ಜಗತ್ತಿನ ಕೋವಿಡ್‌ ವಿವರ ಹೀಗಿದೆ..

ಜಗತ್ತಿನಾದ್ಯಂತ ನಿನ್ನೆ ಒಂದೇ ದಿನ 3,81,872 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದರೆ, 3,022 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ದೇಶವಾರು ಕೋವಿಡ್‌ ಮಾಹಿತಿ:

ದೇಶವಾರು ನೋಡುವುದಾದರೆ, ಅಮೆರಿಕದಲ್ಲಿ 2.13 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದು, 654 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 8,39,429 ಕ್ಕೆ ಏರಿದೆ.

ಬ್ರಿಟನ್‌ನಲ್ಲಿ ಹೊಸದಾಗಿ 98 ಸಾವಿರ ಪ್ರಕರಣಗಳು ದಾಖಲಾಗಿದ್ದರೆ, 143 ಮಂದಿ ಸಾವನ್ನಪ್ಪಿದ್ದಾರೆ.

ಫ್ರಾನ್ಸ್‌ನಲ್ಲಿ 30,000 ಪ್ರಕರಣಗಳ ವರದಿಯಾಗಿವೆ. 256 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿ ಒಟ್ಟು ಸಾವಿನ ಸಂಖ್ಯೆ 1,22,898ಕ್ಕೆ ಏರಿದೆ.

ಇಟಲಿಯಲ್ಲೂ ಮಹಾಮಾರಿ ವೈರಸ್‌ ತೀವ್ರವಾಗಿದ್ದು, ಹೊಸದಾಗಿ 30,000 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. 142 ಜನರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಆರೋಗ್ಯ ಸಿಬ್ಬಂದಿಗೆ ಬೂಸ್ಟರ್ ಡೋಸ್,15-18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್.. ಕೇಂದ್ರದ ಮಾರ್ಗಸೂಚಿ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.