ETV Bharat / bharat

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್ ದೃಢ

author img

By

Published : Apr 27, 2021, 10:02 AM IST

ನಿನ್ನೆ 16 ಲಕ್ಷಕ್ಕೂ ಅಧಿಕ ಸ್ಯಾಂಪಲ್​​​​ಗಳನ್ನು ಪರೀಕ್ಷೆ ಮಾಡಲಾಗಿದ್ದು, 3 ಲಕ್ಷಕ್ಕೂ ಅಧಿಕ ಜನರಿಗೆ ಕೊರೊನಾ ದೃಢಪಟ್ಟಿದೆ. 14 ಕೋಟಿಗೂ ಹೆಚ್ಚು ಮಂದಿಗೆ ಕೋವಿಡ್​ ಲಸಿಕೆ ನೀಡಲಾಗಿದೆ.

India reports 3,23,144 new COVID19 cases
ಭಾರತದಲ್ಲಿ ಕೊರೊನಾ ವೈರಸ್‌

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,23,144 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 2,771 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 2,51,827 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈವರೆಗಿನ ಅಂಕಿ-ಅಂಶ:

ದೇಶದಲ್ಲಿ ಈವರೆಗೆ ಒಟ್ಟು 1,76,36,307 ಕೊರೊನಾ ಪ್ರಕರಣಗಳು ದಾಖಲಾಗಿವೆ. 1,45,56,209 ಸೋಂಕಿತರು ಗುಣಮುಖರಾಗಿದ್ದಾರೆ. ಸುಮಾರು 1,97,894 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 28,82,204 ಸಕ್ರಿಯ ಕೋವಿಡ್​ ಪ್ರಕರಣಗಳಿವೆ.

ಕೋವಿಡ್ ಪರೀಕ್ಷೆ:

ಏಪ್ರಿಲ್​ 26ರವರೆಗೆ 28,09,79,877 ಮಂದಿಗೆ ಕೊರೊನಾ ಟೆಸ್ಟ್​ ಮಾಡಲಾಗಿದೆ. ನಿನ್ನೆ ಒಂದೇ 16,58,700 ದಿನ ಸ್ಯಾಂಪಲ್​​​ಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ICMR ತಿಳಿಸಿದೆ.

ಲಸಿಕೆ ವಿತರಣೆ:

ದೇಶಾದ್ಯಂತ ಇಲ್ಲಿಯವರೆಗೆ 14,52,71,186 ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ.

ಓದಿ: 3 ದಿನ 1000 ಸಾವು: ದೆಹಲಿಯ ಶವಾಗಾರದ ಪಾರ್ಕಿಂಗ್​ ಸ್ಥಳದಲ್ಲೇ ಅಂತ್ಯಸಂಸ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.