ನವದೆಹಲಿ: ಇಂದಿನಿಂದ ದೇಶಾದ್ಯಂತ ಕೊರೊನಾ ಲಸಿಕೆ ವಿತರಿಲಾಗುತ್ತಿದೆ. ವಿಶ್ವದ ಅತಿದೊಡ್ಡ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಹೀಗಾಗಿ ವೈರಸ್ನಿಂದ ದೇಶದಲ್ಲಾಗುವ ಸಾವು-ನೋವು ತಡೆಗಟ್ಟಲು ಅಸ್ತ್ರ ಸಿದ್ಧವಾಗಿದೆ. ಈ ಲಸಿಕೆಗಳು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದ್ದು, ಜೀವಗಳನ್ನು ಉಳಿಸಲಿದೆ ಎಂದು ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.
-
#IndiaFightsCorona #LargestVaccineDrive #Unite2FightCorona pic.twitter.com/ismL1hltOF
— Ministry of Health (@MoHFW_INDIA) January 16, 2021 " class="align-text-top noRightClick twitterSection" data="
">#IndiaFightsCorona #LargestVaccineDrive #Unite2FightCorona pic.twitter.com/ismL1hltOF
— Ministry of Health (@MoHFW_INDIA) January 16, 2021#IndiaFightsCorona #LargestVaccineDrive #Unite2FightCorona pic.twitter.com/ismL1hltOF
— Ministry of Health (@MoHFW_INDIA) January 16, 2021
ದೇಶದಲ್ಲಿ ನಿನ್ನೆ 15,158 ಮಂದಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, 175 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಪ್ರಕರಣಗಳ ಸಂಖ್ಯೆ 1,05,42,841 ಹಾಗೂ ಮೃತರ ಸಂಖ್ಯೆ 1,52,093ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 1,01,79715 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 2,11,033 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜನವರಿ 15ರವರೆಗೆ 18,57,65,491 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 8,03,090 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.