ETV Bharat / bharat

ಜಮ್ಮು ಕಾಶ್ಮೀರ: ಇಸ್ಲಾಮಿಕ್ ಸಹಕಾರ ಸಂಘಟನೆ ಹೇಳಿಕೆ ವಿರುದ್ಧ ಭಾರತ ಕಿಡಿ! - ಇಸ್ಲಾಮಿಕ್ ಸಹಕಾರ ಸಂಘಟನೆ ವಿರುದ್ಧ ಭಾರತ ಕಿಡಿ

ಭಾರತದ ಆಂತರಿಕ ವಿಚಾರಗಳ ಬಗ್ಗೆ ಹೇಳಿಕೆ ನೀಡಲು ತನ್ನ ವೇದಿಕೆ ದುರ್ಬಳಕೆ ಮಾಡಿಕೊಳ್ಳದಂತೆ ಒಐಸಿ ಪ್ರಧಾನ ಕಾರ್ಯಾಲಯಕ್ಕೆ ಭಾರತ ಹೇಳಿದೆ.

India slams OIC's statement
India slams OIC's statement
author img

By

Published : Aug 6, 2021, 8:37 PM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುರಿತಾಗಿ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ನೀಡಿರುವ ಹೇಳಿಕೆ ವಿರುದ್ಧ ಭಾರತ ಕಿಡಿಕಾರಿದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಅದರ ಕುರಿತು ಹೇಳಿಕೆ ನೀಡಲು ಸಂಘಟನೆಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದೆ.

"ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕುರಿತು ಒಐಸಿಯ ಪ್ರಧಾನ ಕಾರ್ಯಾಲಯ ನೀಡಿರುವ ಮತ್ತೊಂದು ಒಪ್ಪಲಾಗದ ಹೇಳಿಕೆಯನ್ನು ನಾವು ಖಡಾಖಂಡಿತವಾಗಿ ತಿರಸ್ಕರಿಸುತ್ತೇವೆ. ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮೂಗು ತೂರಿಸಲು ಒಐಸಿಗೆ ಯಾವುದೇ ಅಧಿಕಾರ ಇಲ್ಲ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಾರವಾಗಿ ಪ್ರತಿಕ್ರಿಯಿಸಿದೆ.

ಭಾರತದ ಆಂತರಿಕ ವಿಚಾರಗಳ ಬಗ್ಗೆ ಹೇಳಿಕೆ ನೀಡಲು ತನ್ನ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳದಂತೆ ಒಐಸಿ ಪ್ರಧಾನ ಕಾರ್ಯಾಲಯಕ್ಕೆ ಭಾರತ ಹೇಳಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಮರಳಿ ಸ್ಥಾಪಿಸಬೇಕು ಎಂದು ಒಐಸಿ ಭಾರತಕ್ಕೆ ಆಗ್ರಹಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.