ETV Bharat / bharat

ಮೊಟ್ಟಮೊದಲ ಬಾರಿಗೆ ನಾಮಕ್ಕಲ್‌ನಿಂದ ಮಲೇಷ್ಯಾಕ್ಕೆ 90 ಸಾವಿರ ಮೊಟ್ಟೆ ರಫ್ತು - ಮೊಟ್ಟೆಗಳ ಕೊರತೆ

ತಮಿಳುನಾಡಿದ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಿಂದ ಮೊಟ್ಟಮೊದಲ ಬಾರಿಗೆ ಸುಮಾರು 90,000 ಮೊಟ್ಟೆಗಳನ್ನು ಮಲೇಷ್ಯಾಕ್ಕೆ ರಪ್ತು ಮಾಡಲಾಗಿದೆ.

egg
ಮೊಟ್ಟೆ ರಫ್ತು
author img

By

Published : Dec 16, 2022, 8:48 AM IST

ಚೆನ್ನೈ: ಮೊಟ್ಟಮೊದಲ ಬಾರಿಗೆ ಭಾರತವು ತಮಿಳುನಾಡಿನ ನಾಮಕ್ಕಲ್‌ನಿಂದ ಮಲೇಷ್ಯಾಕ್ಕೆ ಮೊಟ್ಟೆಗಳನ್ನು ರಫ್ತು ಮಾಡಿದೆ. ಇದು ಮೊಟ್ಟೆಯ ಕೊರತೆಯನ್ನು ಎದುರಿಸುತ್ತಿರುವ ಮಲೇಷ್ಯಾಕ್ಕೆ ಅನುಕೂಲಕರ ಎಂದು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಗುರುವಾರ ತಿಳಿಸಿದೆ.

ಡಿಸೆಂಬರ್ 14 ರಂದು ತಿರುಚಿರಾಪಳ್ಳಿ ವಿಮಾನ ನಿಲ್ದಾಣದಿಂದ ಮೊಟ್ಟಮೊದಲ ಬಾರಿಗೆ ಸುಮಾರು 90,000 ಮೊಟ್ಟೆಗಳನ್ನು ರಪ್ತು ಮಾಡಲಾಯಿತು. ಡಿಸೆಂಬರ್ 15 ರ ಮುಂಜಾನೆ ಮೊಟ್ಟೆಗಳು ಮಲೇಷ್ಯಾವನ್ನು ತಲುಪಿದೆ. ಇದು ಮೊದಲ ಪ್ರಾಯೋಗಿಕ ಸಾಗಣೆಯಾಗಿದ್ದು, ಮಲೇಷಿಯನ್ನರು ಮೊಟ್ಟೆ ಅಮದು ಮಾಡಿಕೊಳ್ಳಲು ಅನುಮೋದಿಸಿದ ನಂತರ ರಫ್ತು ಮುಂದುವರಿಯುವ ನಿರೀಕ್ಷೆಯಿದೆ ಎಂದು ಎಪಿಇಡಿಎ ಪ್ರಾದೇಶಿಕ ಮುಖ್ಯಸ್ಥ ಶೋಬನಾ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಈ ಮೊಟ್ಟೆಯ ಬೆಲೆ ಕೇಳಿದ್ರೆ ಹೌಹಾರುವಿರಿ.. ಇದು ಕೋಟಿ ಮೊಟ್ಟೆ ಕಣ್ರೀ..

ಮಲೇಷಿಯಾದ ಕೃಷಿ ಮತ್ತು ಆಹಾರ ಭದ್ರತಾ ಸಚಿವರು ಕೌಲಾಲಂಪುರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ಉಂಟಾಗಿರುವ ಮೊಟ್ಟೆಗಳ ಕೊರತೆ ಕುರಿತು ಮಾಹಿತಿ ನೀಡಿ, ಭಾರತೀಯ ಮೊಟ್ಟೆಗಳನ್ನು ಆಮದು ಮಾಡಿಕೊಳ್ಳುವ ಕೋರಿಕೆ ವ್ಯಕ್ತಪಡಿಸಿದ್ದರು. ಈ ಕುರಿತು ಕೌಲಾಲಂಪುರ್‌ನಲ್ಲಿರುವ ಭಾರತೀಯ ಹೈಕಮಿಷನರ್ ಡಿಸೆಂಬರ್ 12 ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಇದನ್ನೂ ಓದಿ: ನೀವೂ ಮೊಟ್ಟೆ ತಿನ್ನುತ್ತೀರಾ? ಗುಣಮಟ್ಟದ ಮೊಟ್ಟೆಗಳಿಗೆ ಬಂದಿದೆ ಜಪಾನಿ ತಂತ್ರಜ್ಞಾನ!

ಪತ್ರದಲ್ಲಿ 'ಮಲೇಷ್ಯಾದಲ್ಲಿ ಮೊಟ್ಟೆಗಳ ಕೊರತೆ ಎದುರಾಗಿದ್ದು, ಭಾರತದಿಂದ ಆಮದು ಮಾಡಿಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದೆ. ಅಲ್ಲದೇ, ಕೋಳಿ ಮತ್ತು ಮೊಟ್ಟೆಗಳು ಮಲೇಷ್ಯಾದಲ್ಲಿ ಆಹಾರದ ಪ್ರಧಾನ ಭಾಗವಾಗಿದೆ. ಆದ್ದರಿಂದ, ಈ ಕೊರತೆಯನ್ನು ಮಲೇಷಿಯಾ ಸರ್ಕಾರವು ಗಂಭೀರ ಆಹಾರ ಭದ್ರತೆಯ ಸಮಸ್ಯೆ ಎಂದು ಪರಿಗಣಿಸಿದೆ' ಅಂತ ತಿಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.