ETV Bharat / bharat

ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಭಾರತಕ್ಕೆ ಭೇಟಿ: ಹೋಳಿ ಸಂಭ್ರಮದಲ್ಲಿ ಭಾಗಿ

ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಭಾರತ ಪ್ರವಾಸ ಕೈಗೊಂಡಿದ್ದಾರೆ. ಬುಧವಾರ ಗುಜರಾತ್​ನ ಅಹಮದಾಬಾದ್‌ಗೆ ಭೇಟಿ ನೀಡಿ, ಹೋಳಿ ಹಬ್ಬವನ್ನೂ ಆಚರಣೆ ಮಾಡಿ ಗಮನ ಸೆಳೆದರು.

author img

By

Published : Mar 8, 2023, 9:12 PM IST

Updated : Mar 8, 2023, 9:37 PM IST

Australian Prime Minister Anthony Albanese
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಭಾರತಕ್ಕೆ ಭೇಟಿ ನೀಡಿದರು

ನವದೆಹಲಿ: ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಭಾರತ ಪ್ರವಾಸ ಕೈಗೊಂಡಿದ್ದು, ಬುಧವಾರ ಅಹಮದಾಬಾದ್‌ಗೆ ಆಗಮಿಸಿದರು. ಮಾರ್ಚ್ 8ರಿಂದ 11ರವರೆಗೆ ಭಾರತಕ್ಕೆ ಅಧಿಕೃತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿಯನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸ್ವಾಗತಿಸಿದರು. ಅಹಮದಾಬಾದ್‌ನಲ್ಲಿರುವ ಸಾಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿಜೀಗೆ ಆಸೀಸ್‌ ಪ್ರಧಾನಿ ಗೌರವ ನಮನ ಸಲ್ಲಿಸಿದರು.

  • India eagerly awaits your arrival! Looking forward to productive deliberations to further the India-Australia friendship. @AlboMP https://t.co/LvYSe3Fsdn

    — Narendra Modi (@narendramodi) March 8, 2023 " class="align-text-top noRightClick twitterSection" data=" ">

ಹೋಳಿ ಆಚರಿಸಿದ ಆಸ್ಟ್ರೇಲಿಯಾ ಪ್ರಧಾನಿ: ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬನೀಸ್​ ಅವರು, ಅಹಮದಾಬಾದ್‌ನಲ್ಲಿರುವ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿ ಮಹಾತ್ಮ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದ ನಂತರ, ಹೋಳಿ ಹಬ್ಬ ಆಚರಿಸಿದರು. "ಭಾರತದ ಅಹಮದಾಬಾದ್‌ಗೆ ಅದ್ಧೂರಿ ಸ್ವಾಗತ ಮಾಡಲಾಗಿದೆ. ಆಸ್ಟ್ರೇಲಿಯಾ - ಭಾರತ ಸಂಬಂಧಗಳಿಗೆ ಒಂದು ಪ್ರಮುಖವಾದ ಪ್ರವಾಸವಾಗಲಿದೆ'' ಭಾರತಕ್ಕೆ ಆಗಮಿಸಿದ ಆಸ್ಟ್ರೇಲಿಯಾದ ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಅಲ್ಬನೀಸ್ ಭಾರತಕ್ಕೆ ಆಗಮಿಸುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಗಮನಕ್ಕಾಗಿ ಭಾರತವು ಕುತೂಹಲದಿಂದ ಕಾಯುತ್ತಿದೆ ಎಂದು ಬುಧವಾರ ಹೇಳಿದರು. ಭಾರತ - ಆಸ್ಟ್ರೇಲಿಯಾ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ಉತ್ಪಾದಕ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಬುಧವಾರ ಟ್ವೀಟ್ ಮಾಡುವ ಮೂಲಕ ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಆಹ್ವಾನಿಸಿದರು.

  • #WATCH | Ahmedabad, Gujarat : Australian PM Anthony Albanese, Gujarat CM Bhupendra Patel & Gujarat Governor Acharya Devvrat attend Holi celebration event at Raj Bhavan pic.twitter.com/RFuffDrySP

    — ANI (@ANI) March 8, 2023 " class="align-text-top noRightClick twitterSection" data=" ">

ಆಸ್ಟ್ರೇಲಿಯಾದ ಪ್ರಧಾನಿ ಟ್ವೀಟ್​: ಆಸ್ಟ್ರೇಲಿಯಾದ ಪ್ರಧಾನಿ ತಮ್ಮ ಭಾರತೀಯ ಸಹವರ್ತಿಯವರ ಆಹ್ವಾನದ ಮೇರೆಗೆ ಬುಧವಾರ ಭಾರತಕ್ಕೆ ಭೇಟಿ ನೀಡಿದ್ದಾರೆ. ಅಲ್ಬನೀಸ್ ಈ ಪ್ರವಾಸವು ಉಭಯ ದೇಶಗಳ ನಡುವಿನ ಸಂಬಂಧವನ್ನು ಗಾಢಗೊಳಿಸುವ ಬದ್ಧತೆ ತೋರಿಸುತ್ತದೆ ಎಂದು ಅಲ್ಬನೀಸ್ ಬುಧವಾರ ಟ್ವೀಟ್​ ಮಾಡಿದ್ದಾರೆ. ನಮ್ಮ ಪ್ರದೇಶದಲ್ಲಿನ ಸ್ಥಿರತೆ ಮತ್ತು ಬೆಳವಣಿಗೆಗಳು ಶಕ್ತಿಯಾಗಬೇಕು ಎಂದು ಅಲ್ಬನೀಸ್ ಹೇಳಿದರು.

ಇಂದು ನಾನು, ಮಂತ್ರಿಗಳು ಮತ್ತು ವ್ಯಾಪಾರ ಮುಖಂಡರ ನಿಯೋಗವನ್ನು ಭಾರತಕ್ಕೆ ಕರೆತರುತ್ತಿದ್ದೇನೆ. ಆಸ್ಟ್ರೇಲಿಯಾ ಮತ್ತು ಭಾರತ ಆಳವಾದ ಸ್ನೇಹವನ್ನು ಹೊಂದಿದೆ. ನಮ್ಮ ಹಿತಾಸಕ್ತಿಗಳು ಅದಕ್ಕೆ ಆಧಾರವಾಗಿದೆ. ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳು, ನಮ್ಮ ನಡುವಿನ ಬಾಂಧವ್ಯ - ಪ್ರೀತಿಯ ಹಾಗೂ ಕ್ರೀಡಾ ಪೈಪೋಟಿ ಕುರಿತು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಅವರ ಪ್ರೀತಿಯ ಆಹ್ವಾನದ ಮೇರೆಗೆ ನಾವು ಭಾರತಕ್ಕೆ ಭೇಟಿ ನೀಡಿದ್ದೇವೆ. ಭಾರತದೊಂದಿಗೆ ಆಸ್ಟ್ರೇಲಿಯಾವು ವ್ಯಾಪಾರ, ವ್ಯವಹಾರಗಳು ಮತ್ತು ಕಾರ್ಮಿಕರ ಬೆಳವಣಿಗೆಗೆ ಅವಕಾಶಗಳನ್ನು ಮಾಡಿಕೊಡಲಾಗುತ್ತದೆ. ಆಸ್ಟ್ರೇಲಿಯಾವು ಐತಿಹಾಸಿಕ ಹಿನ್ನೆಲೆಯಲ್ಲಿ ಹೊಂದಿರುವ ಭಾರತದೊಂದಿಗೆ ಬಾಂಧವ್ಯ ಬಲಪಡಿಸುವ ನಿಟ್ಟಿನಲ್ಲಿ ಉತ್ತಮ ಅವಕಾಶಗಳಿಗೆ ಒತ್ತು ನೀಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.

  • Honoured to celebrate Holi in Ahmedabad, India. Holi’s message of renewal through the triumph of good over evil is an enduring reminder for all of us. pic.twitter.com/DSyxcY02bX

    — Anthony Albanese (@AlboMP) March 8, 2023 " class="align-text-top noRightClick twitterSection" data=" ">

ಭಾರತ- ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆ: ಅವರ ಭೇಟಿಯ ಎರಡನೇ ದಿನದಂದು, ಅಲ್ಬನೀಸ್ ಹಾಗೂ ಪ್ರಧಾನಿ ಮೋದಿ ಜೊತೆಗೆ ಅಹಮದಾಬಾದ್‌ನಲ್ಲಿ ಬಾರ್ಡರ್ - ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಅಧಿಕೃತ ಪ್ರಕಟಣೆಯ ಪ್ರಕಾರ, ಮೊದಲ ವೈಯಕ್ತಿಕ ಭಾರತ - ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆ ನಡೆಯಲಿದೆ.

ವಾರ್ಷಿಕ ಶೃಂಗಸಭೆಯಲ್ಲಿ ಉಭಯ ನಾಯಕರು ಭಾರತ - ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಅಡಿ ವಿವಿಧ ಉಪಕ್ರಮಗಳ ಮೇಲೆ ಸಾಧಿಸಿದ ಪ್ರಗತಿ ಬಗ್ಗೆ ಚರ್ಚೆ ನಡೆಯಲಿದೆ. ಶೃಂಗಸಭೆಯು ಭಾರತ ಮತ್ತು ಆಸ್ಟ್ರೇಲಿಯಾದ ನಡುವಿನ ವೈವಿಧ್ಯಮಯ ವಲಯಗಳಲ್ಲಿ ಹೊಸ ಉಪಕ್ರಮಗಳು ಮತ್ತು ವರ್ಧಿತ ಸಹಕಾರಕ್ಕೆ ಹೊಸ ಮಾರ್ಗವಾಗಲಿದೆ. 2020ರ ಜೂನ್ 4ರಂದು ಮೊದಲ ಶೃಂಗಸಭೆ ನಡೆದಿತ್ತು ಎಂದು ಪ್ರಕಟಣೆ ತಿಳಿಸಿದೆ.

2022 ಮತ್ತು 2023ರಲ್ಲಿ ಉಭಯ ಪಕ್ಷಗಳ ಸಚಿವ ಸಮ್ಮುಖದಲ್ಲಿ ಉನ್ನತ ಮಟ್ಟದ ಒಡಂಬಡಿಕೆಗಳು ನಡೆದಿದ್ದವು. ಹಿಂದೆ ಆಸ್ಟ್ರೇಲಿಯಾದ ಪ್ರಧಾನಿಯಾಗಿದ್ದ ಮಾಲ್ಕಮ್ ಟರ್ನ್‌ಬುಲ್ ಅವರು 2017ರಲ್ಲಿ ಭಾರತಕ್ಕೆ ಕೊನೆಯ ಭೇಟಿ ನೀಡಿದ್ದರು.

ಇದನ್ನೂ ಓದಿ: ಮರು ಸಾಲ ನೀಡಲು ಚೀನಾ ಸಮ್ಮತಿ.. ಐಎಂಎಫ್ ಒಪ್ಪಂದ ಸನ್ನಿಹಿತ ಎಂದ ಶ್ರೀಲಂಕಾ ಅಧ್ಯಕ್ಷ

Last Updated : Mar 8, 2023, 9:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.