ETV Bharat / bharat

ಶತ್ರು ರಾಷ್ಟ್ರಗಳನ್ನು ಎದುರಿಸಲು ಶ್ರೀನಗರದ ವಾಯುನೆಲೆಯಲ್ಲಿ MiG- 29 ಫೈಟರ್​ ಜೆಟ್ ನಿಯೋಜನೆ - ಈಟಿವಿ ಭಾರತ ಕನ್ನಡ

MiG-29 fighter jets: ಪಾಕಿಸ್ತಾನ ಮತ್ತು ಚೀನಾ ಕಡೆಯಿಂದ ಬರುವ ಬೆದರಿಕೆಗಳನ್ನು ಎದುರಿಸಲು ಭಾರತವು ಶ್ರೀನಗರದ ವಾಯುನೆಲೆಯಲ್ಲಿ MiG- 29 ಫೈಟರ್​ ಜೆಟ್ನಿ ಯೋಜಿಸಿದೆ.

MiG- 29
MiG- 29
author img

By

Published : Aug 12, 2023, 10:42 AM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಭಾರತವು ಪಾಕಿಸ್ತಾನ ಮತ್ತು ಚೀನಾ ಕಡೆಯಿಂದ ಬರುವ ಬೆದರಿಕೆಗಳನ್ನು ಎದುರಿಸಲು ಶ್ರೀನಗರದ ವಾಯುನೆಲೆಯಲ್ಲಿ ನವೀಕರಿಸಿದ MiG- 29 ಫೈಟರ್​ ಜೆಟ್​ಗಳ ಸ್ಕ್ವಾಡ್ರನ್​ ಅನ್ನು ನಿಯೋಜಿಸಿದೆ. ಈ ಫೈಟರ್​ ಅನ್ನು 'ಉತ್ತರದ ರಕ್ಷಕ' ಎಂದು ಕರೆಯಲಾಗುತ್ತದೆ. ಇದು ಮುಖ್ಯವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬರುವ ಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಈ ಜೆಟ್​ ಹೊಂದಿದೆ.

"ಶ್ರೀನಗರವು ಕಾಶ್ಮೀರ ಕಣಿವೆಯ ಮಧ್ಯಭಾಗದಲ್ಲಿದ್ದು, ಬಯಲು ಪ್ರದೇಶಕ್ಕಿಂತ ಎತ್ತರದಲ್ಲಿದೆ. ಹೀಗಾಗಿ ಈ ಪ್ರದೇಶದಲ್ಲಿ ಫೈಟರ್​ ಜೆಟ್​ ಅನ್ನು ಇರಿಸುವುದು ಉತ್ತಮವಾಗಿದೆ ಎಂದು ತೀರ್ಮಾನಿಸಲಾಗಿದೆ. ಅಲ್ಲದೇ ಇದು ದೀರ್ಘ ವ್ಯಾಪ್ತಿಯ ಕ್ಷಿಪಣಿಗಳನ್ನು ಹೊಂದಿದೆ. MiG- 29 ಶತ್ರುಗಳನ್ನು ಎದುರಿಸಲು ಸಮರ್ಥವಾಗಿದೆ. MiG- 29 ಎಲ್ಲಾ ಮಾನದಂಡಗಳನ್ನು ಪೂರೈಸುತ್ತದೆ. ಹೀಗಾಗಿ ನಾವು ಎರಡೂ ಕಡೆಯಿಂದ ಶತ್ರುಗಳನ್ನು ಎದುರಿಸಲು ಸಮರ್ಥರಾಗಿದ್ದೇವೆ" ಎಂದು ಭಾರತೀಯ ವಾಯುಪಡೆಯ ಪೈಲಟ್​ ಸ್ಕ್ವಾಡ್ರನ್ ಲೀಡರ್​ ವಿಪುಲ್​ ಶರ್ಮಾ ತಿಳಿಸಿದ್ದಾರೆ.

  • #WATCH | "Srinagar lies in the centre of Kashmir valley and its elevation is higher than plains. It is strategically better to place an aircraft with a higher weight-to-thrust ratio and less response time due to proximity to the border and is equipped with better avionics and… pic.twitter.com/eq7vVgTpyA

    — ANI (@ANI) August 12, 2023 " class="align-text-top noRightClick twitterSection" data=" ">

ಈ ಹಿಂದೆ MiG- 21 ಯುದ್ಧ ವಿಮಾನವನ್ನು ವಾಯುಪಡೆ ನಿಯೋಜಿಸಿತ್ತು. ಆದರೆ, ಪ್ರಸ್ತುತ ನವೀಕರಿಸಿದ ಭಾಗವಾಗಿ MiG- 29 ಯುದ್ಧ ವಿಮಾನಗಳನ್ನು ನಿಯೋಜಿಸಿದೆ. "ಸಂಘರ್ಷದ ಸಮಯದಲ್ಲಿ ಶತ್ರುಗಳ ವಿಮಾನಗಳನ್ನು ನಿಷ್ಕ್ರೀಯಗೊಳಿಸುವ ಶಕ್ತಿಯನ್ನೂ ಕೂಡ ಇದು ಹೊಂದಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ನಡೆಯುವ ಜಿ-20 ಶೃಂಗಸಭೆಯಲ್ಲಿ ಉಕ್ರೇನ್​ ಯುದ್ಧ ಕುರಿತು ಚರ್ಚೆ: ಅಮೆರಿಕ

MiG- 21 ಗಿಂತ MiG- 29ಗೆ ಹೆಚ್ಚು ಸಾಮರ್ಥ್ಯ: 2019 ರಲ್ಲಿ ಬಾಲಾಕೋಟ್​ನಲ್ಲಿ ಪಾಕಿಸ್ತಾನದ F- 16 ಅನ್ನು ಹೊಡೆದುರುಳಿಸಿದ MiG- 21 ಗಿಂತ MiG- 29 ಹಲವಾರು ಸುಧಾರಿತ ತಂತ್ರಜ್ಞಾನ ಹೊಂದಿದೆ. ಗಾಳಿಯಲ್ಲಿ ದೀರ್ಘ ಶ್ರೇಣಿಯ ದಾಳಿ, ಗಾಳಿಯಿಂದ ನೆಲದ ಮೇಲಿನ ಗುರಿಯ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಈ ಜೆಟ್​​ ಫೈಟರ್​ ಹೊಂದಿದೆ. ಅಲ್ಲದೇ ಯುದ್ಧದ ಸಮಯದಲ್ಲಿ ಎದುರಾಳಿ ವಿಮಾನಗಳ ಕಾರ್ಯಾಚರಣೆಯನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಹೊಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

  • Another pilot Squadron Leader Shivam Rana said the upgraded aircraft can operate at night with night vision goggles and has a longer range due to air-to-air refuelling capability.

    “We have also included the air-to-ground armament which was not there earlier. The biggest… pic.twitter.com/W6IxcfClMQ

ಪೈಲಟ್​ಗಳು ವಿಮಾನದ ದೊಡ್ಡ ಶಕ್ತಿ: "ನವೀಕರಿಸಿದ ಯುದ್ಧ ವಿಮಾನವು​ ರಾತ್ರಿ ಸಮಯದಲ್ಲೂ ಕಾರ್ಯ ನಿರ್ವಹಿಸಬಲ್ಲದು. ಆಕಾಶದ ಮಧ್ಯದಲ್ಲೇ ವಿಮಾನಕ್ಕೆ ಇಂಧನ ತುಂಬುವ ಸಾಮರ್ಥ್ಯ ಹೊಂದಿರುವ ಕಾರಣದಿಂದ ದೀರ್ಘ ವ್ಯಾಪ್ತಿಯನ್ನು ಹೊಂದಿರುತ್ತದೆ. ಈ ವಿಮಾನಗಳಲ್ಲಿ ಸೇವೆ ಸಲ್ಲಿಸಲು ಭಾರತೀಯ ವಾಯುಪಡೆಯಿಂದ ಆಯ್ಕೆಯಾದ ಪೈಲಟ್​ಗಳು ವಿಮಾನದ ದೊಡ್ಡ ಶಕ್ತಿ" ಎಂದು ಪೈಲಟ್​ ಸ್ಕ್ವಾಡ್ರನ್ ಲೀಡರ್ ಶಿವಂ ರಾಣಾ ತಿಳಿಸಿದ್ದಾರೆ. ಈ ವರ್ಷದ ಜನವರಿ ತಿಂಗಳಲ್ಲಿ MiG- 29 ಯುದ್ಧ ವಿಮಾನಗಳು ಶ್ರೀನಗರದ ವಾಯುನೆಲೆಗೆ ಸ್ಥಳಾಂತರಗೊಳಿಸಲಾಗಿದೆ.

ಇದನ್ನೂ ಓದಿ: ಫ್ರಾನ್ಸ್​ನಿಂದ ಇನ್ನೂ 26 ರಫೇಲ್​ ಫೈಟರ್​ ಜೆಟ್, 3 ಸ್ಕಾರ್ಪೀನ್​ ಸಬ್​ಮೆರಿನ್​​ ಖರೀದಿಗೆ ಭಾರತ ಚಿಂತನೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.